spot_img
spot_img

ಸಕಲ ಕನ್ನಡಾಭಿಮಾನಿಗಳು ಸೇರಿ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸೋಣ – ಡಾ. ಶಿಂಧಿಹಟ್ಟಿ

Must Read

spot_img
- Advertisement -

ಮೂಡಲಗಿ – 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿಗಳ ಶ್ರೀಮಂತಿಕೆಯಿಂದ ಕೂಡಿರುವ ಮತ್ತು ಶ್ರೀ ಶಿವಬೋಧರಂಗನ ಜಾಗೃತ ಸ್ಥಳವೆಂದೇ ಲೋಕ ಪ್ರಸಿದ್ಧಿಯಾದ ಮೂಡಲಗಿ ನಗರದಲ್ಲಿ ಇದೇ ತಿಂಗಳಿನ 23 ಮತ್ತು 24ರಂದು ಜರುಗಲಿದೆ ಎಂದು ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಹೇಳಿದರು.

ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಜಿಲ್ಲಾ ಸಮ್ಮೇಳನದ ಬೆನ್ನೆಲುಬಾದ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಇವರ ಮಾರ್ಗದರ್ಶನದಲ್ಲಿ ಕನ್ನಡದ ಅಸ್ಮಿತೆಯನ್ನು ಸಾರುವ, ಭಾಷೆ ಮತ್ತು ಸಾಹಿತ್ಯದ ಮೇಲಿನ ಅಭಿಮಾನವನ್ನು ಮೂಡಿಸುವ ವೇದಿಕೆಯಾಗಿ ಮೂಡಲಗಿಯ ಜಿಲ್ಲಾ ಸಾಹಿತ್ಯ ಸಮ್ಮೇಳನವು ನಡೆಯಲಿದೆ ಎಂದರು.
ಸಾಹಿತ್ಯಾಸಕ್ತರ, ಕವಿಗಳ, ಲೇಖಕರ ,ಕಲಾವಿದರ ಮತ್ತು ಸಾಂಸ್ಕೃತಿಕ ಉತ್ಸಾಹಿಗಳ ಅತಿ ದೊಡ್ಡ ಸಮಾಗಮವಾಗಿ ಕನ್ನಡಿಗರ ಐಕ್ಯತೆಯ ಪ್ರತೀಕವಾಗಿ, ವಿಚಾರ ವಿನಿಮಯಗಳಿಗೆ ಪೂರಕ ವೇದಿಕೆಯಾಗಿ ಮೂಡಲಗಿಯಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಹೊಸ ಮೈಲುಗಲ್ಲಾಗಿರುತ್ತದೆ. ಕನ್ನಡ ಭಾಷೆಗೆ ತಮ್ಮ ಅತ್ಯಮೂಲ್ಯ ಕೊಡುಗೆ ನೀಡಿದ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಅಕ್ಕಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು,. ನವೆಂಬರ್ ತಿಂಗಳಿನ 23ನೇ ದಿನಾಂಕದಂದು ರಾಷ್ಟ್ರಧ್ವಜ, ಪರಿಷತ್ತಿನ ಧ್ವಜ, ನಾಡಧ್ವಜಗಳ ಧ್ವಜಾರೋಹಣದ ಮೂಲಕ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ದೊರೆತು ಸಮ್ಮೇಳನದ ಸವಾ೯ಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿಯ ವೈಭವಯುತ ಮೆರವಣಿಗೆ ನಡೆಯಲಿದೆ. ಮೂಡಲಗಿಯ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಪೂಜ್ಯ ಶ್ರೀ ಅಮೃತ ಬೋಧ ಮಹಾಸ್ವಾಮಿಗಳು ಮತ್ತು ಪೂಜ್ಯ ಶ್ರೀಧರಬೋಧ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಆರ್ ಡಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ,ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಮತ್ತು ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟ್ಟಗುಡ್ಡ ಇವರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಭೆ ನಡೆಯಲಿದೆ ಎಂದು ತಿಳಿಸಿದರು.
ಕನ್ನಡಪರ ಚಿಂತನೆಯ ಗೋಷ್ಠಿಯ ಭಾಗವಾಗಿ “ಕರ್ನಾಟಕ ಸುವರ್ಣ ಸಂಭ್ರಮ: ಹಿನ್ನೋಟ, ಮುನ್ನೋಟ ” ವಿಷಯವಾಗಿ ಡಾ. ಮಹಾದೇವ ಜಿಡ್ಡಿಮನಿ ಹಾಗೂ “ಅನ್ನದ ಭಾಷೆಯಾಗಿ ಕನ್ನಡ: ಸಾಧ್ಯತೆ ಮತ್ತು ಸವಾಲುಗಳು” ವಿಷಯವಾಗಿ ಮಾರುತಿ ದಾಸಣ್ಣವರ, ವೈದ್ಯಗೋಷ್ಠಿಯ ಭಾಗವಾಗಿ “ಆಹಾರದಿಂದ ಆರೋಗ್ಯದ ಕಡೆಗೆ” ವಿಷಯವಾಗಿ ಡಾ.ಅಣ್ಣಪ್ಪ ಪಾಂಗಿ ಮತ್ತು “ವಚನ ಸಾಹಿತ್ಯದಲ್ಲಿ ಆರೋಗ್ಯ” ವಿಷಯವಾಗಿ ಡಾ. ಸಂಜಯ ಶಿಂದಿಹಟ್ಟಿ , “ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ” ವಿಷಯವಾಗಿ ಬಾಲಚಂದ್ರ ಜಾಬಶೆಟ್ಟಿ , “ಮಹಿಳೆ ಮತ್ತು ಸಾಮಾಜಿಕ ಸವಾಲುಗಳು” ವಿಷಯವಾಗಿ ಶ್ರೀಮತಿ ಸರೋಜಿನಿ ಸಮಾಜೆ, “ಸಾಮಾಜಿಕ ಮಾಧ್ಯಮಗಳು ಹಾಗೂ ಸವಾಲುಗಳು” ವಿಷಯವಾಗಿ ನಿಂಗಪ್ಪ ಠಕ್ಕಾಯಿ , “ಜಾನಪದ ಕಲಾ ಶ್ರೀಮಂತಿಕೆಯನ್ನು ಉಳಿಸುವ ತುರ್ತು” ವಿಷಯವಾಗಿ ಟಿ ಎಸ್ ವಂಟಗೂಡಿ, “ಪ್ರೊ. ಚಂದ್ರಶೇಖರ ಅಕ್ಕಿ :ಬದುಕು ಬರಹ”ದ ವಿಷಯವಾಗಿ ಸಂಗಮೇಶ ಗುಜಗೊಂಡ ಉಪನ್ಯಾಸಗಳನ್ನು ಮಂಡಿಸಲಿದ್ದು, ಕವಿಗೋಷ್ಠಿಯನ್ನೂ ಸಹ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ‘ಜಾನಪದ ಜಾಣ’ ಬಿರುದಾಂಕಿತ ಮೂಡಲಗಿಯ ಹೆಮ್ಮೆಯ ಜಾನಪದ ಕಲಾವಿದರಾ ಶಬ್ಬೀರ್ ಡಾಂಗೆ ಮತ್ತು ವಿವಿಧ ಕಲಾತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ‘ಬೈಕ್ ರಾಲಿ’, ‘ಕನ್ನಡ ರೊಟ್ಟಿ ಬುಟ್ಟಿ ಜಾತ್ರೆ’ ಎಂಬ ವಿಶೇಷ ಕಾರ್ಯಕ್ರಮಗಳು, ಪುಸ್ತಕ ಪ್ರದರ್ಶನ ,ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಕನ್ನಡದ ಇತಿಹಾಸವನ್ನು ಪ್ರಚುರ ಪಡಿಸುವ ಮತ್ತು ಕನ್ನಡ ಭಾಷೆಯನ್ನು ಬೆಳೆಸುವ ಉದ್ದೇಶದಿಂದ, ಸಾಹಿತಿಗಳ ಬೆಳವಣಿಗೆಯ ತೊಟ್ಟಿಲಾಗಿ , ಸಾಂಸ್ಕೃತಿಕ ಐಕ್ಯತೆಯ ಸಂಕೇತವಾಗಿ, ಜ್ಞಾನ ಪ್ರಸಾರದ ವೇದಿಕೆಯಾಗಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಸಾಹಿತ್ಯಾಸಕ್ತರು, ಊರಿನ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ವೃತ್ತಿಸೇವೆಯಲ್ಲಿರುವ ಪ್ರಮುಖರೆಲ್ಲರೂ ಸಮ್ಮೇಳನದಲ್ಲಿ ಭಾಗಿಯಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಹೃದಯವಂತರಾಳದಿಂದ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಡಾ‌ ಸಂಜಯ ಅ.ಶಿಂಧಿಹಟ್ಟಿ ಕೋರಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group