spot_img
spot_img

ಸಂಘಟಿತ ಹೋರಾಟದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ: ಶಾಸಕ ರಮೇಶ ಜಾರಕಿಹೊಳಿ

Must Read

- Advertisement -

ಗೋಕಾಕದಲ್ಲಿಂದು ಕ್ಷತ್ರೀಯ ಮರಾಠಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿದ ರಮೇಶ ಜಾರಕಿಹೊಳಿ.

ಗೋಕಾಕ: ಕ್ಷತ್ರೀಯ ಮರಾಠಾ ಸಮಾಜದವರು ಸಂಘಟಿತರಾದರೆ ಜಿಲ್ಲೆಯ ೧೮ ವಿಧಾನ ಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ೧೦ಕ್ಷೇತ್ರಗಳಲ್ಲಿ ನಿರ್ಣಾಯಕರಾಗುತ್ತಾರೆ. ಅದರಲ್ಲಿ ಮೂರು ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲವು ಸಾಧಿಸಬಹುದು ಎಂದು ಗೋಕಾಕ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಭಾನುವಾರದಂದು ನಗರದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ ಜರುಗಿದ ಕ್ಷತ್ರೀಯ ಮರಾಠಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಾಠಾ ಸಮಾಜದ ಪ್ರಭಾವ ಹೆಚ್ಚಾಗಿದ್ದರೂ ರಾಜಕೀಯವಾಗಿ ಇನ್ನು ಹೆಚ್ಚು ಪ್ರಾಶಸ್ತ್ಯ ಸಿಗದಿರುವದಕ್ಕೆ ಬೇಸರ ವ್ಯಕ್ತಪಡಿಸಿದರು.

- Advertisement -

ಕಳೆದ ರಾಜ್ಯಸಭೆಯ ಚುನಾವಣೆ ಸಂದರ್ಭದಲ್ಲಿ ಮರಾಠಾ ಸಮುದಾಯದ ವ್ಯಕ್ತಿಗಳಿಗೆ ಪಕ್ಷದ ಟಿಕೇಟು ನೀಡುವಂತೆ ಪಕ್ಷದ ವರಿಷ್ಠರನ್ನು ಕೋರಿಕೊಂಡಿದ್ದೆ. ಈ ಮೂಲಕವಾದರೂ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಯತ್ನಿಸಿದ್ದೆ. ಆದರೆ ನಮ್ಮವರೇ ಒಬ್ಬರು ಮರಾಠಾ ಸಮಾಜದವರ ಮತಗಳು ಕಡಿಮೆ ಸಂಖ್ಯೆಯಲ್ಲಿ ಇವೆ ಎಂದು ತಕರಾರು ಮಾಡಿದ್ದರಿಂದ ಈ ಸಮಾಜಕ್ಕೆ ಟಿಕೇಟು ನೀಡಲು ಸಾಧ್ಯವಾಗಲಿಲ್ಲ. ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರುಗಳಿಗೆ ಸಾಕಷ್ಟು ಬಾರಿ ಮರಾಠಿಗರಿಗೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸುತ್ತಲೇ ಬಂದಿದ್ದೇನೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಹಿಂದ ಸಮುದಾಯದ ಜೊತೆಗೆ ಮರಾಠಿಗರು ಕೂಡಿದರೆ ಶೇ೭೪ ರಷ್ಟು ಸಂಖ್ಯಾಬಲ ಆಗುತ್ತದೆ. ನಾನು ರಾಷ್ಟ್ರೀಯ ಪಕ್ಷದ ನಾಯಕನಾಗಿರುವದರಿಂದ ಎಲ್ಲ ವಿಷಯಗಳನ್ನು ವೇದಿಕೆಯಲ್ಲಿ ಮಾತನಾಡಲು ಸಾಧ್ಯವಿಲ್ಲ. ನಮ್ಮನ್ನು ಯಾರು ರಾಜಕೀಯವಾಗಿ ವಿರೋಧಿಸುತ್ತಾರೊ ಅವರಿಗೆ ಸೂಕ್ತ ಉತ್ತರ ನೀಡಲು ಸಿದ್ಧನಿದ್ದೇನೆ.

- Advertisement -

ಕೇವಲ ಪ್ರತಿಶತ ೬ರಷ್ಟು ಇದ್ದವರಿಗೆ ೫೦ ಟಿಕೇಟನ್ನು ನೀಡುತ್ತಾರೆ. ಆದರೆ ಸ್ವಾಭಿಮಾನಿ ಹಾಗೂ ಹೋರಾಟಗಳನ್ನು ಮೈಗೂಢಿಸಿಕೊಂಡಿರುವ ಮರಾಠಾ ಸಮಾಜದವರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ. ಸ್ವಾಮಿಜಿಗಳ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಸಿಗಬೇಕಾಗಿರುವ ನ್ಯಾಯಯುತ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡೋಣ. ಪಕ್ಷಾತೀತವಾಗಿ ಹೋರಾಡಿದರೆ ಖಂಡಿತವಾಗಿಯೂ ಈ ಸಮುದಾಯಕ್ಕೆ ನ್ಯಾಯ ದೊರಕುತ್ತದೆ. ಮರಾಠಾ ಸಮಾಜದ ಬೇಡಿಕೆಗಳಿಗೆ ನಮ್ಮ ಕುಟುಂಬ ಸಿದ್ಧವಿದೆ.

ಈ ಸಮುದಾಯದ ಅಭಿವೃದ್ಧಿಗಾಗಿ ನಾವು ಬದ್ಧರಿದ್ದು, ಗೋಕಾಕ ನಗರಸಭೆಯಿಂದ ೬ಗುಂಟೆ ನಿವೇಶನವನ್ನು ಮರಾಠಾ ಸಮಾಜಕ್ಕೆ ನೀಡುವ ಠರಾವ ಪತ್ರವನ್ನು ಸ್ವಾಮಿಜಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನೆರೆದ ಸಮಾಜ ಬಾಂಧವರು ಪಟಾಕಿ ಸಿಡಿಸಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲು ನಿಮ್ಮ ಬೆಂಬಲ ಬೇಕೇ ಬೇಕು: ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮುಖ್ಯಅತಿಥಿಯಾಗಿದ್ದ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಮರಾಠಾ ಸಮುದಾಯಕ್ಕೆ ೨ಎ ಮೀಸಲಾತಿ ಕಲ್ಪಿಸುವದರ ಬಗ್ಗೆ ಸಮಾಜದ ಸ್ವಾಮೀಜಿಗಳ ನೇತ್ರತ್ವದಲ್ಲಿ ಹೋರಾಟ ಮಾಡಿದರೆ ಮುಂದಿನ ದಿನಗಳಲ್ಲಿ ಸಮಾಜದವರಿಗೆ ಒಳಿತಾಗಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ಮತ್ತು ಹಿಂದುತ್ವವಾದಿಗಳಾಗಿರುವ ಮರಾಠಾ ಸಮುದಾಯದ ಪ್ರಗತಿಗೆ ನಾವೆಲ್ಲ ಸಿದ್ಧರಿದ್ದೇವೆ. ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟಳ್ಳಿ ಅವರ ತ್ಯಾಗದ ಫಲವಾಗಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ ಶ್ರೀಮಂತ ಪಾಟೀಲ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವದು ನಿಮಗಷ್ಟೇ ಆದ ನೋವು ನನಗೂ ಆಗಿದೆ. ಇದನ್ನು ಸರಿಪಡಿಸಲು ನಾವು ಕೂಡ ವರಿಷ್ಠರೊಂದಿಗೆ ಮಾತನಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಉದಯಿಸಬೇಕಾದರೇ ನಿಮ್ಮ ಸಮುದಾಯದ ಬೆಂಬಲ ನಮಗೆ ಬೇಕೇ ಬೇಕು. ಯಾವ ಕಾರಣಕ್ಕೂ ನಮ್ಮ ಪಕ್ಷವನ್ನು ಕೈಬಿಡಬೇಡಿ. ಕಮಲ ಅರಳಲು ಮರಾಠಾ ಸಮಾಜದವರು ಆಶಿರ್ವಾಧ ಮಾಡುವಂತೆ ಕೋರಿದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಯಾವುದೇ ಒಂದು ಜಾತಿಗೆ ಶಿವಾಜಿ ಮಹಾರಾಜರು ಸೀಮಿತರಲ್ಲ. ಅಖಂಡ ಭಾರತ ನಿರ್ಮಾಣಕ್ಕೆ ಹೋರಾಡಿದ ಮಹಾನ್ ರಾಷ್ಟ್ರ ಪುರುಷ ಎಂದು ಹೇಳಿದ ಅವರು, ಅರಭಾಂವಿ ಕ್ಷೇತ್ರದಲ್ಲಿ ಸಮುದಾಯದ ಹಿತರಕ್ಷಣೆಗೆ ಸದಾ ಬದ್ಧ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಂಗಳೂರು ಗೋಸಾಯಿ ಮಹಾಸಂಸ್ಥಾನ ಭವಾನಿ ದತ್ತ ಪೀಠದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಮಹಾಸ್ವಾಮಿಗಳು ಹಾಗೂ ಕಾದ್ರೋಳ್ಳಿಯ ಸದ್ಗುರು ಗುರುಪುತ್ರ ಮಹಾರಾಜರು ವಹಿಸಿದ್ದರು.

ಕ್ಷತ್ರೀಯ ಮರಾಠಾ ಒಕ್ಕೂಟದ ಅಧ್ಯಕ್ಷ ಶ್ಯಾಮಸುಂದರ ಗಾಯಕವಾಡ ಮಾತನಾಡಿ, ನಮ್ಮ ಸಮಾಜವು ಮುಖ್ಯವಾಹಿನಿಗೆ ಬರಲು ಜಾರಕಿಹೊಳಿ ಸಹೋದರರ ಸಹಕಾರವು ಅಗತ್ಯವಾಗಿದೆ. ಇಂತಹ ಸಮಾವೇಶಗಳನ್ನು ರಾಜ್ಯಾಧ್ಯಂತ ಸಂಘಟಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ನಾವೆಲ್ಲ ಹೋರಾಟ ಮಾಡೋಣವೆಂದು ಹೇಳಿದರು. ನಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ೨ಎ ಮೀಸಲಾತಿ ನೀಡುವಂತೆಯೂ ಇದೇ ಸಂದರ್ಭದಲ್ಲಿ ಸರಕಾರವನ್ನು ಒತ್ತಾಯಿಸಿದರು.

ವೇದಿಕೆಯಲ್ಲಿ ಮರಾಠಾ ಪ್ರಾಧಿಕಾರ ನಿಗಮದ ಅಧ್ಯಕ್ಷ ಮಾರುತಿರಾವ ಮುಳೆ, ಕ್ಷತ್ರೀಯ ಮರಾಠಾ ಪರಿಷತ್ತ ಅಧ್ಯಕ್ಷ ಸುರೇಶರಾವ ಸಾಠೆ, ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ವಿನಯ ಮಾಂಗಳೇಕರ, ಲೈಲಾ ಶುರ‍್ಸ ಅಧ್ಯಕ್ಷ ವಿಠ್ಠಲ ಹಲಗೇಕರ, ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ಮೋಹನ ಜಾಧವ, ಕಿರಣ ಜಾಧವ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ನಗರಸಭೆ ಸದಸ್ಯರಾದ ನಿರ್ಮಲಾ ಸುಭಂಜಿ, ಪ್ರಕಾಶ ಮುರಾರಿ, ಮುಖಂಡರಾದ ದಶರಥ ಗುಡ್ಡದಮನಿ, ಅಶೋಕ ತುಕ್ಕಾರ, ಜ್ಯೋತಿಭಾ ಸುಭಂಜಿ, ಪರಶುರಾಮ ಭಗತ, ಡಾ.ಗಿರೀಶ ಸೂರ್ಯವಂಶಿ, ರಾಜು ಪವಾರ, ನೇತಾಜಿ ಕೋರಾಡೆ, ಸಚೀನ ಜಾಧವ, ಜಿತೇಂದ್ರ ಮಾಂಗಳೇಕರ, ಸುರೇಶ ಜಾಧವ, ಗಜಾನನ ತಟ್ಟಿಮನಿ, ಯಮನಪ್ಪ ಬಾಗಾಯಿ, ವಸಂತ ತಹಶೀಲದಾರ, ಮಹಾದೇವ ಸಾವಂಜಿ, ಡಾ.ಹನಮಂತ ಕಮತಗಿ, ವಿಜಯ ಜಾಧವ, ಬಾಬು ಖನಗಾಂವಿ, ಶಿವಾಜಿ ಜಾಧವ, ವಸಂತ ಬೆಳಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕುಮಾರಿ ಪೂಜಾ ಮಿಲ್ಕೆ ಭಾಷಣವು ನೆರೆದ ಸಭಿಕರನ್ನು ಆಕರ್ಷಿಸಿತು.

ಕಾರ್ಯಕ್ರಮಕ್ಕೂ ಮುನ್ನ ಬೃಹತ್ ಕುಂಭ ಮೇಳದೊಂದಿಗೆ ಶೋಭಾಯಾತ್ರೆ ಜರುಗಿತು. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.

- Advertisement -
- Advertisement -

Latest News

ಕಾರ್ಯಕರ್ತರೇ, ನಾಯಕರ ದಾಳಗಳಾಗದೆ ಜಾಗೃತರಾಗಿರಿ.

ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಚ್ಚರಿಕೆ.ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಲಹೆ. ನಿಮ್ಮನ್ನ ರಾಜ್ಯ ಸರ್ಕಾರ ತಮ್ಮದಿದೆ ಆದ್ದರಿಂದ ನಿಮಗೆ ರಕ್ಷಣೆ ನೀಡುತ್ತದೆ ಏನೂ...
- Advertisement -

More Articles Like This

- Advertisement -
close
error: Content is protected !!
Join WhatsApp Group