ಸಿಂದಗಿ; ಡಾ. ಅಂಬೇಡ್ಕರರು ನೀಡಿದ ಸಂವಿದಾನದ ಮೂಲಕ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲು ಬೇಕಾಗುವ ಸವಲತ್ತುಗಳನ್ನು ಪಡೆದು ಮಾತೆ ಸಾವಿತ್ರಿಬಾಯಿ ಮಲೆ, ಜ್ಯೋತಿಬಾಯಿ ಪುಲೆ ಮತ್ತು ಡಾ|| ಬಾಬಾಸಾಹೇಬ ಅಂಬೇಡ್ಕರರವರ ಚಿಂತನೆಗಳನ್ನು ಆದರ್ಶವಾಗಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೊ. ಬಸವರಾಜ ಜಾಲವಾದ ಕರೆ ನೀಡಿದರು.
ಪಟ್ಟಣದ ಡಾ|| ಬಿ. ಆರ್. ಅಂಬೇಡ್ಕರ ಭವನದಲ್ಲಿ ತಾಲೂಕಾ ಆಡಳಿತ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಾತಾ ಸಾವಿತ್ರಿಬಾಯಿ ಪುಲೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಗಟ್ಟುವಿಕ, ಅಸ್ಪೃಶ್ಯತೆ ಆಚರಣೆಯ ನಿರ್ಮೂಲನೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಕಾನೂನು ಸಲಹೆಗಾರ ಎಸ್. ಬಿ. ಖಾನಾಪೂರ ವಕೀಲರು, ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ೧೯೯೫ ರ ಕುರಿತು ಸಾರ್ವಜನಿಕವಾಗಿ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಗ್ರೇಡ್-೨ ತಹಸೀಲ್ದಾರ ಇಂದ್ರಾಬಾಯಿ ಬಳಗಾನೂರ ರಾಜಶೇಖರ ಕೂಚಬಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರುಗಳು ಮಾತನಾಡಿ ತಮ್ಮ ಇಲಾಖೆಯಲ್ಲಿ ಬರುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಪುರಸಭೆಯ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ಹಾಗೂ ಸದಸ್ಯರುಗಳು, ಪಿಎಸ್‌ಐ ಆರೀಫ ಮುಶಾಪೀರ, ವಿವಿಧ ದಲಿತಪರ ಸಂಘಟನೆಗಳ ಮುಖಂಡರುಗಳು ಪ್ರಗತಿಪರ ಚಿಂತಕರು, ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗ ಹಾಗೂ ಮಾತಾ ಸಾವಿತ್ರಿಬಾಯಿ ಪುಲೆ ಅಧ್ಯಕ್ಷೆ ಸತ್ಯಮ್ಮ ಆರ್. ಗುಬ್ಬೇವಾಡ ಮತ್ತು ಪದಾಧಿಕಾರಿಗಳು ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಂತಾದವರು ಭಾಗಿಯಾಗಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ ಸ್ವಾಗತಿಸಿದರು. ಹಿರಿಯ ನಿಲಯಪಾಲಕ ಆರ್. ಎಸ್. ಬನ್ನೆಟ್ಟಿ ನಿರೂಪಿಸಿದರು. ಮಹೇಶ ಸಿದ್ದಾಪೂರ ವಂದಿಸಿದರು.