spot_img
spot_img

ನರೇಗಾ ಯೋಜನೆಯ ಉಪಯೋಗ ಎಲ್ಲರಿಗೂ ಆಗಬೇಕು – ಅಶೋಕ ಮನಗೂಳಿ

Must Read

- Advertisement -

ಸಿಂದಗಿ: ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಸೌಲಭ್ಯಗಳು ದೊರೆಯುವಂತೆ ಗ್ರಾಮ ಪಂಚಾಯತ ಸರ್ವ ಸದಸ್ಯರ ಪಾತ್ರ ಮೇಲು ಕಾಣಬೇಕು ಎಂದು ಶಾಸಕ ಅಶೋಕ ಎಂ ಮನಗೂಳಿ ಹೇಳಿದರು.

ತಾಲೂಕಿನ ಬಂದಾಳ ಗ್ರಾಮ ಪಂಚಾಯತ ನೂತನ ಎನ್ ಆರ್ ಎಲ್ ಎಂ ಕಟ್ಟಡ ಉದ್ಘಾಟನಾ ಸಮಾರಂಭ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜನರ ಆರ್ಥಿಕ ಮಟ್ಟ ಸುಧಾರಿಸಲು ಸರಕಾರ ನರೇಗ ಯೋಜನೆ ಜಾರಿಗೆ ತರುವ ಮುಖಾಂತರ ಗ್ರಾಮೀಣ ಭಾಗದ ಜನರಿಗೆ ಜೀವನದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಸಹಕಾರಿಯಾಗಲಿದೆ ನರೇಗಾ ಯೋಜನೆಯ ಲಾಭ ಪಡೆದಲ್ಲಿ ಗ್ರಾಮೀಣ ಭಾಗದ ಜನರು ಪಟ್ಟಣಗಳಿಗೆ ಗುಳೆ ಹೊಗುವುದನ್ನು ತಪ್ಪಿಸಬಹುದು
ಗ್ರಾಮೀಣ ಭಾಗದ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ನರೇಗ ಯೋಜನೆ ಜಾರಿಗೆ ತರಲಾಗಿದೆ ಗ್ರಾಮ ಪಂಚಾಯತ ಸದಸ್ಯರು ಮತದಾರರ ಋಣ ತಿರೀಸಲು ಸರಕಾರದ ಯೋಜನೆಗಳು ಮುಟ್ಟಿಸಬೇಕು ಹಾಗೂ ಗ್ರಾಮ ಅಭಿವೃದ್ಧಿ ಹೊಂದಲು ಸರ್ವರು ಜಾತ್ಯತೀತವಾಗಿ ಕೂಡಿಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ ಮಾತನಾಡಿದರು. ಕನ್ನೋಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

- Advertisement -

ಗ್ರಾಮ ಪಂಚಾಯತ ಅಧ್ಯಕ್ಷೆ ಸುವರ್ಣ ಶಂಕ್ರೆಪ್ಪ ಮಕಣಾಪೂರ ಸಭೆ ಅಧ್ಯಕ್ಷತೆವಹಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಟ್ಟಪ್ಪ ಉಕ್ಕಲಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ಆರ್ ಶಾಹಾಪೂರ, ಸಂತೋಷ ಪಾಸೋಡಿ, ಆರ್ ಎನ್ ಮೂಜಾವರ, ಆರ್.ವಾಯ್.ಹಿರೇಕುರಬರ, ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ ಬೂಯ್ಯಾರ ಸ್ವಾಗತಿಸಿದರು. ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ನಿರೂಪಿಸಿದರು.ಶಿಕ್ಷಕ ಪಿ.ವ್ಹಿ.ಕುಲಕರ್ಣಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೋವಿಡ್ ೨೦೨೦ರಲ್ಲಿ ೧೨ ಲ. ಸಾವು ;ವರದಿ ವರದಿ ದೋಷಪೂರಿತ ; ಆರೋಗ್ಯ ಸಚಿವಾಲಯ

೨೦೧೯ ರಲ್ಲಿ ಘಟಿಸಿದ ಕೋವಿಡ್-೧೯ ರ ಸಾವಿನ ಸಂಖ್ಯೆಗಿಂತಲೂ ಸುಮಾರು ಎಂಟು ಪಟ್ಟು ಹೆಚ್ಚು ಅಂದರೆ ೧೨ ಲಕ್ಷಕ್ಕಿಂತಲೂ ಹೆಚ್ಚು ಜನ ೨೦೨೦ ರಲ್ಲಿ ಕೋವಿಡ್...
- Advertisement -

More Articles Like This

- Advertisement -
close
error: Content is protected !!
Join WhatsApp Group