ಎಲ್ಲ ನದಿಗಳು ಸಮುದ್ರ ಸೇರುವಂತೆ ಎಲ್ಲರೂ ಪರಮಾತ್ಮನ ಸೇರೋದೇ….

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

History × her story?

ನಮ್ಮ ಪುರಾಣದ ಇತಿಹಾಸದ ಕಥೆಗಳಲ್ಲಿ history ಹೆಚ್ಚು ಜನರನ್ನು ಆಕರ್ಷಿಸುತ್ತದೆ ಕಾರಣ ಅವರಲ್ಲಿದ್ದ ರಾಜಕೀಯ ಸ್ವಭಾವ. ಕೆಲವರಷ್ಟೇ ರಾಜಯೋಗಿಗಳಿದ್ದರು. ಇಲ್ಲಿ ಭೂಮಿಯ ಮೇಲಿದ್ದು ರಾಜಕೀಯ ನಡೆಸುವುದಕ್ಕೆ ಭೂಮಿಯ ಸಹಕಾರ ವಿಲ್ಲದೆ ಸಾಧ್ಯವಿಲ್ಲ.

ಭೂಮಿಯ ಮೇಲಿರುವ ಸ್ತ್ರೀ ಶಕ್ತಿ ಬಳಸಿಕೊಂಡು ಮುಂದೆ ನಡೆದವರ His story ಜನರೆಡೆಗೆ ತಲುಪಿಸುವ ಕೆಲಸವಾಗಿದೆ.ಆದರೆ ಅವರ ಜೊತೆಗೆ ಇದ್ದ her story ಶೋಚನೀಯವಾಗಿದ್ದನ್ನು ಹೊರಹಾಕದೆ ರಾಜಕೀಯವೇ ಸರಿ ಎನ್ನುವಂತಾಗಿ ಈಗ ಕಾಲ ತಿರುಗಿ ನಿಂತು her story ಸ್ತ್ರೀ ಯರೆ‌ ಹೊರಹಾಕಲು ಮುಂದಾಗಿದ್ದಾರೆ.

ಸಮಾನತೆಯ ಪ್ರಶ್ನೆ ಬಂದಾಗ ಸ್ತ್ರೀ ಗೆ ಪುರುಷನಿಗಿಂತ ಜ್ಞಾನವಿದ್ದರೂ ಅದನ್ನು ಹಿಂದೆ ಬಿಟ್ಟು ಇಲ್ಲಿಯವರೆಗೆ ಪುರಾಣ ಬೆಳೆದಿದೆ. ರಾಮಾಯಣ ಮಹಾಭಾರತದ ಕಥೆಗಳನ್ನು ರಾಜಕೀಯ ದೃಷ್ಟಿಯಿಂದ ಬರೆದುಕೊಂಡು ಧರ್ಮ ದೃಷ್ಟಿ ಕುಸಿದಿದೆ. ಧಾರ್ಮಿಕ ಆಚರಣೆಗಳನ್ನು ವ್ಯವಹಾರಕ್ಕಾಗಿ ಬಳಸಿ ಸತ್ಯ ಬಿಟ್ಟು ಹೊರಬಂದಿದೆ.

- Advertisement -

ಇವೆಲ್ಲದರಿಂದ ಭೂಮಿಯ ಸತ್ವ,ಸತ್ಯ ಹಾಳಾಗಿ ಮನುಕುಲದ ರೋಗ ಹೆಚ್ಚಾಗಿದೆ. ನಕಾರಾತ್ಮಕ ವಿಚಾರಗಳನ್ನು ತಿಳಿಸಬಾರದೆನ್ನುವ ಹಾಗೆ ಸತ್ಯವನ್ನೂ ತಿಳಿಸಬಾರದು ಎನ್ನುವವರಿದ್ದಾರೆಂದರೆ ಇಲ್ಲಿ ಸತ್ಯವೇ ದೇವರಾಗಿ ಇರೋದಿಲ್ಲ. ಸತ್ಯಹರಿಶ್ಚಂದ್ರನ ಜೊತೆ ಸತ್ಯವತಿ ಪತ್ನಿ ಬದುಕಲಾಗದು. ಧರ್ಮ ಪತ್ನಿ ಪತಿವ್ರತೆಯಾಗಿದ್ದ ಸೀತಾದೇವಿಯನ್ನು ಅರ್ಥ ಮಾಡಿಕೊಳ್ಳಲು ಸ್ತ್ರೀ ಯರಿಗೆ ಸತ್ಯಜ್ಞಾನವಿರಬೇಕು.

ಅದನ್ನು ನೀಡದೆ ಸತ್ಯ ತಿಳಿಸದೆ,ಸತ್ಯ ಹೇಳಲು ಬಿಡದೆ ಒಂದು ಚೌಕಟ್ಟಿನಲ್ಲಿಟ್ಟು ರಾಜಕೀಯ ನಡೆಸಿದ  ಎಷ್ಟೋಮಹಾರಾಜರು, ರಾಜಾಧಿರಾಜರು, ಸಾಮ್ರಾಟರು ದೇಶವನ್ನು ರಾಜ್ಯವನ್ನು ಆಳಿದ್ದರೂ ಈಗಿನ ಇತಿಹಾಸ ಪುಸ್ತಕ ಕೇವಲ ಅವರ ಸಾಮ್ರಾಜ್ಯ ವಿಸ್ತರಣೆ, ಯುದ್ದ, ಕಲಹ,ದ್ವೇಷ,ಸಾವು ನೋವು ಇನ್ನಿತರ ವಿಚಾರಗಳು ಮಕ್ಕಳ ಪಠ್ಯಪುಸ್ತಕ ದೊಳಗೆ ಸೇರಿಸಿ ರಾಜಕೀಯ ಎಂದರೆ ಒಬ್ಬರನ್ನು ತುಳಿದು ಇನ್ನೊಬ್ಬರು ಆಳೋದಷ್ಟೆ ಎನ್ನುವ ಮಟ್ಟಿಗೆ ಸಂದೇಶ ನೀಡುತ್ತಿದೆ.

ಅಂದಿನ ರಾಜರ ಆಡಳಿತದಲ್ಲಿದ್ದ ಶಿಕ್ಷಣದ ಸತ್ವ,ಧರ್ಮ, ಸಾಮಾಜಿಕ ನ್ಯಾಯ, ನೀತಿ, ಸಂಸ್ಕಾರ, ಸಂಸ್ಕೃತಿ ಆ ಆ ಕಾಲಮಾನಕ್ಕೆ ತಕ್ಕಂತೆ ಶಾಂತಿಯ ದಾರಿಯಲ್ಲಿ ನಡೆದಿತ್ತು. ಅದನ್ನು ಈಗ ಕ್ರಾಂತಿಯ ಕಡೆಗೆ ತಿರುಗಿಸಿಕೊಂಡು ತಮ್ಮ ಹತ್ತಿರದಲ್ಲೇ ಇರುವ ಶಾಂತಿ ಬಿಟ್ಟು ರಾಜಕೀಯತೆಗೆ ಸಹಕರಿಸುತ್ತಾ ಹೊರಬಂದವರಲ್ಲಿ ಮಹಿಳೆ ಮಕ್ಕಳೂ ಸತ್ಯವನ್ನು ಹೊರಗೆ ಹುಡುಕಿದರೆ ಸಿಗುವುದೆ?

ಪ್ರಚಾರಕರ ಅರ್ಧಸತ್ಯದ ವಿಚಾರ ಜನರಲ್ಲಿ ಭಿನ್ನಾಭಿಪ್ರಾಯ ಹೆಚ್ಚಿಸಿ ಪುರುಷಪ್ರಧಾನ ಸಮಾಜವಾಗಿ ಸ್ತ್ರೀ ಯರ ದೇಶವನ್ನು ಆಳೋದಕ್ಕೆ ಪಾಶ್ಚಾತ್ಯ ಸಂಸ್ಕೃತಿ ಸೇರಿಕೊಂಡಿತು. ಹೊರಗಿನಿಂದ ಎಷ್ಟೇ ಸಹಕಾರವಿದ್ದರೂ ಒಳಗಿನ ಸಹಕಾರವಿಲ್ಲವಾದರೆ ಕಷ್ಟ ನಷ್ಟ ರೋಗ ಹೆಚ್ಚಾಗುತ್ತದೆ.

ಇತಿಹಾಸ ಮರುಕಳಿಸಿದೆ ಎನ್ನಲಾಗಿದೆ. ಸ್ವಾತಂತ್ಯ ಪೂರ್ವದ ಅಂದಿನ ಭಾರತ ರಾಜ ರಾಜರ ಒಳಜಗಳದ ಮಧ್ಯೆ ಪ್ರವೇಶ ಮಾಡಿದ ವಿದೇಶಿಗರು ದೇಶದಲ್ಲಿ ವ್ಯವಹಾರಕ್ಕೆ ಬಂದು ದೇಶವಾಳಿದರು. ಈಗಿನ‌ ಪಕ್ಷಪಕ್ಷಗಳ ಜಗಳದಲ್ಲಿ ವಿದೇಶಿ ಕಂಪನಿಗಳು, ಶಿಕ್ಷಣ,ವ್ಯವಹಾರ, ಸಾಲ,ಬಂಡವಾಳ ದೇಶದೊಳಗೆ ಹರಿದುಬರುತ್ತಿದೆ.

ಜನ ನಮಗೊಂದು ಉದ್ಯೋಗ ಸಿಕ್ಕರೆ ಸಾಕೆಂದು ಭೂಮಿ ಮಾರಿಕೊಂಡು ವಿದೇಶಿ ಕಂಪನಿಗಳಲ್ಲಿ ಕೆಲಸಗಿಟ್ಟಿಸಿಕೊಂಡು ವಿದೇಶಕ್ಕೆ ಹಾರುತ್ತಿದ್ದಾರೆ. ಇನ್ನು ಇಲ್ಲೇ ಇರುವವರು ನಮಗೂ ಸರ್ಕಾರಕ್ಕೂ, ದೇಶಕ್ಕೂ ಏನೂ ಸಂಬಂಧವಿಲ್ಲವೆನ್ನುವಂತೆ ಲಕ್ಷಾಂತರ ಕೊಡುವ ವಿದೇಶಿಗರಿಗೆ ಶರಣಾಗಿ ತಮ್ಮ ಮೂಲ ಧರ್ಮ ಕರ್ಮಕ್ಕೆ ಬೆಲೆಕೊಡದೆ ಸ್ವೇಚ್ಚಾಚಾರಕ್ಕೆ ಇಳಿದು ಇದೇ ಸ್ವತಂತ್ರವೆಂಬ ಭ್ರಮೆಯಲ್ಲಿದ್ದಾರೆ.

ಇವೆಲ್ಲವೂ ತಾತ್ಕಾಲಿಕ ಬೆಳವಣಿಗೆಯಷ್ಟೆ. ಶಾಶ್ವತ ಬೆಳವಣಿಗೆಗೆ ಮಾನವ ಮಾನವನಾಗಿ ಸ್ತ್ರೀ ಪುರುಷರನ್ನು ಸಮಾನ ದೃಷ್ಟಿಯಿಂದ ಭೂಮಿಯಲ್ಲಿ ಕಾಣಲು ಆಧ್ಯಾತ್ಮ ಸತ್ಯದ ಅಗತ್ಯವಿತ್ತು. ಈಗಲೂ ಎಷ್ಟೋ ಸಮಾಜಸುಧಾರಕರು ದೇಶದ ಈ ಸ್ಥಿತಿಗೆ ಕಾರಣ ತಿಳಿಸೋ ಪ್ರಯತ್ನ ನಡೆಸಿದ್ದರೂ ಇದು ಕೇವಲ his story ಮೇಲೆ ನಿಂತು her story ಹಿಂದಕ್ಕೆ ತಳ್ಳಿದರೆ ಭೂಮಿಯಲ್ಲಿ ಅಸುರರೆ ಹೆಚ್ಚಾಗೋದು.

ಭೂಮಿ ಮೇಲಿರುವ ಎಲ್ಲಾ ನದಿಗಳೂ ಹೇಗೆ ಸಮುದ್ರ. ಸೇರುವುದೋ ಇಲ್ಲಿಗೆ ಬಂದಿರುವ ಎಲ್ಲಾ ಜೀವರಾಶಿ ಪರಮಾತ್ಮನೊಳಗಿರೋದೆ. ಆದರೆ ಮಾನವ ಮಾತ್ರ ನಾನೇ ಬೇರೆ ನೀನೇ ಬೇರೆ ಎಂದು ಭೂಮಿ ಮೇಲಿದ್ದು ಭೂಮಿಯನ್ನು ಆಳೋದಕ್ಕೆ ಹೋಗಿ ಅಳುವ ಸ್ಥಿತಿಗೆ ಬರೋದು. ಒಟ್ಟಿನಲ್ಲಿ ಎರಡು ಕೈ ಸೇರಿದರೆ ಚಪ್ಪಾಳೆ. ಸ್ತ್ರೀ ಯಾಗಲಿ ಪುರುಷನಾಗಲಿ ಧರ್ಮಕ್ಕೆ ಸಹಕರಿಸಿ ಅವರವರ ಕರ್ಮ ಕಳೆದುಕೊಳ್ಳಲು ರಾಜಕೀಯಕ್ಕಿಂತ ರಾಜಯೋಗ ಅಗತ್ಯವಿದೆ.

ಇದು ಪುರಾಣಕಾಲದಿಂದ ನಡೆದು ಬಂದಿದೆ. ಕಲಿಗಾಲದ ಅಜ್ಞಾನದಲ್ಲಿ ಆಳೋದೇ ಮುಖ್ಯವಾಗಿ ಅಳುವವರ ಸಂಖ್ಯೆ ಬೆಳೆದಿದೆ.ರಾಜರ ಕಾಲಹೋಗಿ ಪ್ರಜಾಪ್ರಭುತ್ವ ಬಂದರೂ ಇತಿಹಾಸ ಪುರಾಣದ ರಾಜಕೀಯ ಬಿಟ್ಟಿಲ್ಲ.ಅದರೊಳಗಿದ್ದ ಧರ್ಮ, ತತ್ವಜ್ಞಾನ ತಿಳಿದಿಲ್ಲ.ಅರ್ಧಸತ್ಯದಲ್ಲಿ ಮಧ್ಯವರ್ತಿಗಳು ವ್ಯವಹಾರಕ್ಕೆ ಇಳಿದು ಅತಂತ್ರಸ್ಥಿತಿಗೆ ಜೀವ ತಲುಪಿದರೆ ಸ್ವತಂತ್ರ ಜ್ಞಾನ ಒಳಗೇ ಇರೋವಾಗ ಅದನ್ನು ತಿಳಿದು ತಿರುಗಿ ಬಂದು ಬೆಳೆಸಿಕೊಂಡರೆ ಉತ್ತಮ ಜೀವನ.

ಬರೆದಿಟ್ಟದ್ದನ್ನು ಓದಿ ತಿಳಿಸೋ ಮೊದಲು ನಮ್ಮ ಕಾಲು ಬುಡದ ಸ್ವಚ್ಚತೆ ಬಗ್ಗೆ ಚಿಂತನೆ ನಡೆಸಿದರೆ ಸ್ವಚ್ಚಭಾರತ ಆಗುತ್ತದೆ. ನಮ್ಮಲ್ಲಿರದ ಸತ್ಯ ಸತ್ವ ಬೇರೆಯವರಲ್ಲಿ ತುಂಬಲು ಕಷ್ಟ. ಮಕ್ಕಳು ನಮ್ಮ ಒಂದು ಶಕ್ತಿಯಿಂದ ಹೊರಬಂದಿರಬಹುದು. ಆದರೆ ಭೌತಿಕದಲ್ಲಿ ಇರುವ ಎಲ್ಲಾ ಶಕ್ತಿಯನ್ನು ತುಂಬೋ ಮೊದಲು ನಮ್ಮ ಶಕ್ತಿಯ ಬಗ್ಗೆ ಆತ್ಮಾವಲೋಕನ ನಡೆಸಿಕೊಂಡರೆ ಉತ್ತಮ.

ನಾವೇ ಭ್ರಷ್ಟರ ವಶದಲ್ಲಿದ್ದರೆ ಮಕ್ಕಳೂ ಅವರ ವಶವೆ ಆಗಿರುತ್ತಾರೆ. ಹೀಗಾಗಿ ಹಿಂದಿನ ಕಾಲದಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಗುರುಕುಲದಲ್ಲಿ ನೀಡಲಾಗಿತ್ತು. ಹಿರಣ್ಯಕಶ್ಯಪು ಮಗನಾದ ಪ್ರಹ್ಲಾದನ ಜ್ಞಾನಕ್ಕೆ ಕಾರಣ ಅವನ ಪೂರ್ವ ಜನ್ಮದ ಪುಣ್ಯ,ದೇವತೆಗಳ ಸಹಕಾರದ ಶಿಕ್ಷಣ. ಅಸುರಶಕ್ತಿಯನ್ನೂ ಮಣಿಸುವ ಜ್ಞಾನಶಕ್ತಿಯು ಹಿಂದಿನ ಭಾರತೀಯ ಶಿಕ್ಷಣ ಪದ್ದತಿಯಲ್ಲಿತ್ತು. ಕಾಲ ಬದಲಾಗಿದೆ ನಿಜ ಅಷ್ಟು ಹಿಂದೆ ನಡೆಯಲಾಗದು.

ಆದರೂ ಮುಂದೆ ನಡೆಯುವಾಗ ಹಿಂದೆ ತಿರುಗಿ ಸತ್ಯ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಉತ್ತಮ.ಸಮಸ್ಯೆಗೆ ಕಾರಣವೆ ನಾನೆಂಬ ಅಹಂಕಾರ ಸ್ವಾರ್ಥ ದ ರಾಜಕೀಯ. ಇತಿಹಾಸ ಪುರಾಣಗಳನ್ನು ತಿರುಚಿ ಆಳೋರ ಸಂಖ್ಯೆ ಬೆಳೆದು ಈಗ ಮನುಕುಲಕ್ಕೆ ದಾರಿಕಾಣದೆ ಕುರುಡು ಪ್ರಪಂಚದಲ್ಲಿ ಸತ್ಯ ತಿಳಿದೂ ಅಸತ್ಯಕ್ಕೆ ಸಹಕಾರ ನೀಡಿ ರಾಜಕೀಯಕ್ಕೆ ತಮ್ಮ ಜೀವನದ‌ ಬಹುಪಾಲು ನೀಡುತ್ತಾ ಆತ್ಮಶಕ್ತಿ ಕುಗ್ಗಿದರೆ ನಷ್ಟ ಯಾರಿಗೆ? ನಮ್ಮ ಚಿಂತನೆಗಳೇ ಚಿಂತೆಗಳಾಗಬಹುದು.

ಚಿಂತೆಯೇ ಚಿತೆಯವರೆಗೆ ಹೋಗಿ ಮತ್ತೆ ಹುಟ್ಟಬಹುದು. ಹೀಗಾಗಿ ಚಿಂತನೆಗಳಲ್ಲಿ ಸತ್ಯವಿದ್ದು ಧರ್ಮವಿದ್ದರೆ ಉತ್ತಮ ಚಿಂತಕರ ಚಾವಡಿ. ಇವೆರಡೂ ಮರೆಯಾದರೆ ಕೇವಲ ಚಿಂತೆಯ ಚಿತೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!