ಎಲ್ಲರೂ ಬೆಳವಣಿಗೆ ಹೊಂದಿದಂತೆ ತಮ್ಮತನದೊಂದಿಗೆ ಬದುಕುವರು – ವೇದಮೂರ್ತಿ ಕುಮಾರಸ್ವಾಮಿಗಳು ಹಿರೇಮಠ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಸವದತ್ತಿ: “ಪ್ರತಿ ಮನುಷ್ಯರೂ ವಿಭಿನ್ನ ವ್ಯಕ್ತಿತ್ವದೊಂದಿಗೆ ಜನಿಸುತ್ತಾರೆ. ಯಾರೂ ಯಾರಂತಾಗಲೂ ಸಾಧ್ಯವಿಲ್ಲ. ನಾವು ಅವರನ್ನು ಅನುಕರಿಸಬಹುದಷ್ಟೇ.ಇಲ್ಲಿ ಎಲ್ಲರೂ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಅದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತ ತಮ್ಮ ವ್ಯಕ್ತಿತ್ವವನ್ನು ವಿಭಿನ್ನ ನೆಲೆಯಲ್ಲಿ ಬೆಳೆಯುತ್ತ ಸಂಘಟನೆಯ ಅಧ್ಯಕ್ಷರಾಗಿ ಪ್ರಧಾನ ಕಾರ್ಯದರ್ಶಿಯಾಗಿ, ದೈಹಿಕ ಶಿಕ್ಷಕರಾಗಿ,ಮುಖ್ಯೋಪಾಧ್ಯಾಯರಾಗಿ ವಿಭಿನ್ನ ಹುದ್ದೆಗಳಲ್ಲಿ ಬಡ್ತಿ ಹಾಗೂ ಶಿಕ್ಷಕರ ಪ್ರೀತಿ ವಿಶ್ವಾಸದೊಂದಿಗೆ ಹೊಂದುತ್ತ ಈಗ ಹಲವರು ನಿವೃತ್ತರಾದರೆ ಇನ್ನೂ ಹಲವರು ಇನ್ನೂ ಸೇವೆಯಲ್ಲಿ ತೊಡಗಿರುವರು.

ಇವರೆಲ್ಲ ಸಮಾಜಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡುತ್ತಿರುವರು.ನಿವೃತ್ತರಾದವರು ಮುಂದೆಯೂ ಕೂಡ ನಿಮ್ಮ ಸೇವೆ ಅಜರಾಮರವಾಗಿರಲಿ.ಇನ್ನು ಸೇವೆಯಲ್ಲಿ ಇರುವವರು ತಮ್ಮ ಸೇವೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಲಿ” ಎಂದು ಕರೀಕಟ್ಟಿಯ ವೇದಮೂರ್ತಿ ಕುಮಾರಸ್ವಾಮಿಗಳು ಹಿರೇಮಠ ತಮ್ಮ ಆಶೀರ್ವಚನ ನೀಡಿದರು.

- Advertisement -

ಅವರು ಸವದತ್ತಿ ತಾಲೂಕಿನ ಕರೀಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಚಿಕ್ಕುಂಬಿ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿ. ಸಿರಸಂಗಿ ಶಾಲೆಯಿಂದ ನಿವೃತ್ತರಾದ ಮುಖ್ಯೋಪಾಧ್ಯಾಯರಾದ ಎಂ.ಎಸ್.ಮಟ್ಟಿ. ಸುತಗಟ್ಟಿ ಪ್ರಾಥಮಿಕ ಶಾಲೆಯಿಂದ ನಿವೃತ್ತರಾದ ಮುಖ್ಯೋಪಾಧ್ಯಾಯರಾದ ಎಸ್.ಬಿ.ಅಂಗಡಿ ಇವರ ಬೀಳ್ಕೊಡುವ ಮತ್ತು ಪ್ರಸಕ್ತ ಅವಧಿಯ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ. .ಸಂಘಟನಾ ಕಾರ್ಯದರ್ಶಿಗಳಾದ ಜಿ.ವ್ಹಿ.ಕುರಿ.ಹುಕ್ಕೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವಪ್ರಭು ಅಂಗಡಿ ಇವರುಗಳ ಸ್ವಾಗತ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗಣ್ಯರಾದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೀರಣ್ಣ ಬಾಗೋಜಿ. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಶೋಕ ಉಪ್ಪಾರ. ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವೈ.ಎಂ.ಶಿವಬಸನ್ನವರ. ಕರೀಕಟ್ಟಿ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಆರ್.ನಾಗನೂರ.ಗುರುಮಾತೆಯರಾದ ಜಿ.ಎಸ್.ಕುಲಕರ್ಣಿ. ಶಾಲೆಯ ಎಲ್ಲ ಶಿಕ್ಷಕರು ಎಸ್.ಡಿ.ಎಂ.ಸಿ ಪದಾಧಿಕಾರಿಗಳು.ಹಿರಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸರಕಾರಿ ಪ್ರೌಢಶಾಲೆ ಕರೀಕಟ್ಟಿಯ ಮುಖ್ಯೋಪಾಧ್ಯಾಯರಾದ ವೈ.ಎಂ.ಶಿವಬಸನ್ನವರ. ಮಾತನಾಡಿ “ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸುತ್ತದೆ. ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ಶಿಕ್ಷಕ ವೃತ್ತಿಗೆ ನಾವೆಲ್ಲ ಸೇರಿದ ಮೇಲೆ ಮಕ್ಕಳನ್ನು ಅರ್ಥಮಾಡಿಕೊಂಡು ಅವರಿಗೆ ಯಾವ ರೀತಿಯ ನೈತಿಕ ಶಿಕ್ಷಣ ನೀಡಬೇಕೆಂಬುದನ್ನು ಹೆಜ್ಜೆ ಹೆಜ್ಜೆಗೂ ಕಲಿಯುತ್ತ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತ ಬದುಕುತ್ತೇವೆ. ಇಂತಹ ಸಾರ್ಥಕ ಬದುಕನ್ನು ಇಂದು ಗೌರವ ಗುರುರಕ್ಷೆ ಪಡೆದ ಎಲ್ಲ ಮಹನೀಯರು ಹೊಂದಿದ್ದಾರೆ.ಅದಕ್ಕಾಗಿಯೇ ಊರಿನ ಹಿರಿಯರು ಈ ಸಾರ್ಥಕ ಕಾರ್ಯಕ್ರಮವನ್ನು ಸಂಘಟಿಸಿರುವರು. ಇವರೆಲ್ಲರೂ ತಮ್ಮನ್ನು ಶೈಕ್ಷಣಿಕ ಬದುಕಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವರು.ಇವರ ಈ ಬದುಕು ಮುಂದೆಯೂ ಸಾರ್ಥಕತೆಯನ್ನು ಹೊಂದುತ್ತ ಸಾಗಲಿ.ದೇವರು ಇವರೆಲ್ಲರಿಗೂ ಆಯುರಾರೋಗ್ಯವನ್ನು ನೀಡಲಿ”ಎಂದು ಶುಭ ಕೋರಿದರು.

ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ.ಮಟ್ಟಿ ಮಾತನಾಡಿ “ ನಾವು ಕರೀಕಟ್ಟಿಯವರು.ಇಂದು ಸನ್ಮಾನಕ್ಕೆ ಪಾತ್ರರಾದ ಬಹುಪಾಲು ಶಿಕ್ಷಕರು ಕರೀಕಟ್ಟಿಯವರು.ನಾವು ಇಲ್ಲಿ ಹುಟ್ಟಿ ಶಿಕ್ಷಣ ಪಡೆದು ವಿವಿದೆಡೆ ನೌಕರಿ ಸಲ್ಲಿಸುತ್ತ ನಿವೃತ್ತಿ ಹೊಂದಿದ್ದೇವೆ.ನಮ್ಮನ್ನು ನಮ್ಮ ಊರಿನ ಹಿರಿಯರು ಸನ್ಮಾನಿಸುವ ಮೂಲಕ ಇವರು ನಮ್ಮವರು ಎಂದು ಗೌರವಿಸಿರುವರು.ಎಲ್ಲ ಹಿರಿಯರಿಗೂ ಎಲ್ಲರ ಪರವಾಗಿ ನಾನು ಆಭಾರಿಯಾಗಿರುವೆನು”ಎಂದು ಸನ್ಮಾನಿತರ ಪರ ಮಾತುಗಳನ್ನು ಹೇಳಿದರು.

ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವ್ಹಿ.ಬೆಳವಡಿ ಮಾತನಾಡಿ “ ನಮ್ಮ ಊರು.ಈ ಮಣ್ಣಿನ ಋಣ ನಮ್ಮ ಮೇಲಿದೆ.ಸಮಾಜದ ಎಲ್ಲ ವಿಧದ ಸ್ಥರಗಳಲ್ಲಿ ನನಗೆ ಅಧಿಕಾರ ಲಭಿಸಲು ಕಾರಣ ತಮ್ಮೆಲ್ಲರ ಶುಭ ಆಶೀರ್ವಾದ.ನಮ್ಮ ಊರಿನ ಹೆಸರು ತರುವಂತಹ ಕೆಲಸವನ್ನು ಶಿಕ್ಷಣ ಇಲಾಖೆಯಲ್ಲಿ ಮಾಡಿರುವೆನು.ನಿವೃತ್ತಿ ನಿಮಿತ್ತ ಮಾತ್ರ ಮುಂದೆಯೂ ಕೂಡ ನಮ್ಮ ಊರಿನ ಸೇವೆಯನ್ನು ಮಾಡುವೆ.ಶಿಕ್ಷಣ ಪರವಾದ ಯಾವುದೇ ಕೆಲಸವಿದ್ದರೂ ಕೂಡ ನನ್ನನ್ನು ಕರೆದರೆ ನಾನು ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸ್ಪಂಧಿಸುವೆನು”ಎಂದು ಸನ್ಮಾನಪರ ನುಡಿಗಳನ್ನಾಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ಮಾತನಾಡಿ “ ನಮ್ಮ ಜನಪ್ರೀಯ ಶಾಸಕರೂ ವಿಧಾನಸಭಾ ಉಪಾಧ್ಯಕ್ಷರೂ ಆನಂದ ಮಾಮನಿಯವರು.ಮಾಜಿ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿಯವರು.ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿಯವರು.ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳೂ ಸೇರಿ ನನಗೆ ಅಧ್ಯಕ್ಷ ಸ್ಥಾನವನ್ನು ಕರುಣಿಸಿರುವರು.ನನ್ನ ಮೇಲಿಟ್ಟ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ.ತಮ್ಮೆಲ್ಲರ ಆಶೀರ್ವಾದ ಬೆಳವಡಿಯವರ ಮಾರ್ಗದರ್ಶನದಲ್ಲಿ ಮುಂಬರುವ ದಿನಗಳಲ್ಲಿ ಸಂಘಟನೆಯ ಮೂಲಕ ಶಿಕ್ಷಕರ ಸ್ನೇಹಿ ಚಟುವಟಿಕೆಗಳ ಬ್ಲಾಗ್ ಆರಂಭಿಸುತ್ತಿದ್ದು ಈ ಮೂಲಕ ಶಿಕ್ಷಕರ ಸೇವೆಗೆ ಒಂದು ಅವಕಾಶ ನಾನೂ ನಿಮ್ಮೆಲ್ಲರ ನಡುವಿನ ಓರ್ವ ಶಿಕ್ಷಕ ಎಂದುಕೊಂಡು ಸೇವೆ ಮಾಡುವೆನು.” ಎಂದು ನುಡಿದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕ ಎಚ್.ಎಸ್.ದೊಡವಾಡ ಸ್ವಾಗತಿಸಿದರು. ಶಿಕ್ಷಕ ಅಲಾರಕಿ ನಿರೂಪಿಸಿದರು. ಬಡವನ್ನವರ ಗುರುಗಳು ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!