ಮೂಡಲಗಿ: ಚಪ್ಪಾಳೆ ತಟ್ಟೋದು ಸುಲಭ ಆದರೆ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಮಾರ್ಗ ಕಠಿಣವಾಗಿರುತ್ತದೆ. ಅವುಗಳನ್ನೆಲ್ಲ ಎದುರಿಸಿ ಪರಿಶ್ರಮದಿಂದ ಓದಿ ಸಾಧಕರಾಗಬೇಕು ಎಂದು ಇಸಿಓ ಟಿ ಕರಿಬಸವರಾಜ ಹೇಳಿದರು.
ಶನಿವಾರದಂದು ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪ್ರೀತಮ್ ಪತ್ತಾರ ಗೊಡಚಿನಮಲ್ಕಿಯ ಡಾ. ಬಿ ಆರ್ ಅಂಬೇಡ್ಕರ ವಸತಿ ಶಾಲೆಗೆ ಆಯ್ಕೆಯಾದ ಪ್ರಯುಕ್ತ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಶತಮಾನ ಕಂಡ ಈ ಶಾಲೆಯಲ್ಲಿ ಕಲೆತಿರುವ ಅನೇಕರು ಸಾಧಕರಾಗಿ ಹೊರಹೊಮ್ಮಿ ಉನ್ನತ ಹುದ್ದೆಯಲ್ಲಿದ್ದಾರೆ. ನೀವೂ ಕೂಡ ಉತ್ತಮ ವಿದ್ಯಾಭ್ಯಾಸ ಹೊಂದಿ ಸಾಧಕರ ಸಾಲಿನಲ್ಲಿ ಬಂದು ಚಪ್ಪಾಳೆ ತಟ್ಟಿಸಿಕೊಳ್ಳಬೇಕು ಎಂದರು.
ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಮಾತನಾಡಿ, ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹಾಗೂ ಶಿಕ್ಷಕರು ಮಕ್ಕಳಿಗೆ ಕೊಡುವ ಗುಣಾತ್ಮಕ ಶಿಕ್ಷಣದಿಂದ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದು ವಲಯದ ಕೀರ್ತಿ ಹೆಚ್ಚಿಸಿದ್ದಾರೆ. ಅದರಂತೆ ಕನ್ನಡ ಶಾಲೆಯ ವಿದ್ಯಾರ್ಥಿಗಳು ಕೂಡಾ ವಿವಿಧ ಪರೀಕ್ಷೆಗಳಲ್ಲಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸುವುದರ ಮೂಲಕ ವಿವಿಧ ಶಾಲೆಗಳಿಗೆ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಪ್ರಧಾನಗುರು ಜಿ ಎಸ್ ಜಂಬಗಿ, ಶಿಕ್ಷಕ ಸುರೇಶ ಕೋಪರ್ಡೆ, ಶಿಕ್ಷಕಿಯರಾದ ಜಿ ಎಮ್ ನಗಾರ್ಚಿ, ಎಸ್ ಎಮ್ ಪತ್ತಾರ, ಕಮಲ ಚಂದಗಡೆ, ಎಸ್ ಬಿ ಬಾಗವಾನ,ಎಸ್ ಆರ್ ಮಾದರ, ಅರ್ಚನಾ ಮಹೇಂದ್ರಕರ, ಯೋಹಾನ ಹಾದಿಮನಿ ಹಾಗೂ ವಿದ್ಯಾರ್ಥಿಗಳು,ಪಾಲಕರು ಇದ್ದರು.