spot_img
spot_img

ಅಮೃತ ಮಹೋತ್ಸವ ಆಚರಣೆ ಯುವಪೀಳಿಗೆಗೆ ಅಮೃತವಿದ್ದಂತೆ – ಈರಣ್ಣ ಕಡಾಡಿ

Must Read

ಘಟಪ್ರಭಾ: ಭಾರತದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ದೇಶದ ಹೊಸ ತಲೆಮಾರಿನ ಯುವ ಪೀಳಿಗೆಗೆ ಅಮೃತವಿದಂತೆ,ಅದು ನಮ್ಮ ಜೀವನದ ಪ್ರತಿ ಕ್ಷಣವನ್ನೂ ದೇಶಕ್ಕಾಗಿ ಮುಡಿಪಿಡಲು ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಭಾವನೆ ಹುಟ್ಟಿಸುವ ಅಮೃತ ಘಳಿಗೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.

ಬುಧವಾರ ಅ- 10 ರಂದು ಪಟ್ಟಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹರ್ ಘರ್ ಮೆ ತಿರಂಗಾ ಅಭಿಯಾನದಲ್ಲಿ ಭಾಗವಹಿಸುವಂತೆ ಘಟಪ್ರಭಾ ಮಾಸ್ ಸಂಸ್ಥೆಯ ಮುಖ್ಯಸ್ಥೆ,ಪದ್ಮಶ್ರೀ ಪ್ರಶಸ್ತಿ ವಿಜೇತೆ ಸೀತವ್ವ ಜೋಡಟ್ಟಿ ಅವರಿಗೆ ರಾಷ್ಟ್ರ ಧ್ವಜ ನೀಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ಸಂಸದ ಕಡಾಡಿ ಅವರು ಅಮೃತ ಮಹೋತ್ಸವ ಯಶಸ್ವಿಯಾಗಲು ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಬೇಕು ಎಂದರು.

ಸೀತವ್ವ ಜೋಡಟ್ಟಿ ಅವರು ಕಳೆದ ಮೂರು ದಶಕಗಳಿಂದ ದೇವದಾಸಿ ಪದ್ದತಿಯ ನಿರ್ಮೂಲನೆಗಾಗಿ ಶ್ರಮಿಸಿದ್ದಾರೆಂದರು. ಜಿಲ್ಲೆಯಲ್ಲಿ ದೇವದಾಸಿಯರ ಮತ್ತು ದಲಿತರ ಅಭಿವೃದ್ದಿಗಾಗಿ ದುಡಿಯುತ್ತಿರುವ ಮಾಸ್ ಸಂಸ್ಥೆಗೆ ರೂ 10 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸೀತವ್ವ ಜೋಡಟ್ಟಿ ಅವರನ್ನು ಸನ್ಮಾನಿಸಿದರು.

ಪ್ರಮುಖರಾದ ರಾಮಣ್ಣ ಹುಕ್ಕೇರಿ, ಗಂಗಾಧರ ಬಡಕುಂದ್ರಿ, ಬಸವರಾಜ ಕತ್ತಿ, ಸುರೇಶ ಪಾಟೀಲ,ಗಣೇಶ ಗಾಣಿಗಾ,ಸಚಿನ ಖಡಬಡಿ,ಡಾ.ಮೃಂತುಜಯ ಹುಗಾರ,ದುಂಡಪ್ಪ ನಿಂಗನ್ನವರ,ಹಾಲಪ್ಪ ಕರಿಗಾರ,ರಾಮಚಂದ್ರ ಕೊಡ್ಲಿ,ಅರವಿಂದ ಬಡಕುಂದ್ರಿ,ಗಣೂಸಿಂಗ ರಜಪೂತ, ಮಹಾಂತೇಶ ಉದಗಟ್ಟಿಮಠ , ಪರಪ್ಪ ಗಿರೆಣ್ಣವರ, ಬಸನಾಯ್ಕ ನಾಯ್ಕ ಸೇರಿದಂತೆ ಅನೇಕ ಸಹಕಾರಿಗಳು,ಬಿಜೆಪಿ ಕಾರ್ಯಕರ್ತರು ಇದ್ದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!