spot_img
spot_img

ಬೂದಿಹಾಳ ಪ್ರೌಢಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ‍್ಯದ ಅಮೃತ ಮಹೋತ್ಸವ

Must Read

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಅಚರಿಸಲಾಯಿತು.

ಧ್ವಜಾರೋಹಣದ ನಂತರ ಗ್ರಾಮದಲ್ಲಿ ನಡೆದ ಪ್ರಭಾತಪೇರಿಯಲ್ಲಿ ವಿವಿಧ ಸ್ವಾತಂತ್ರ‍್ಯ ಹೋರಾಟಗಾರರ ವೇಷದಲ್ಲಿನ ಮಕ್ಕಳು ಎಲ್ಲರ ಗಮನ ಸೆಳೆದರು. ಗ್ರಾಮದ ಹಿರಿಯರಾದ ಚನಬಸಯ್ಯ ಮಠದ, ಜನಕರಾಜ ಪಾಟೀಲ, ಶ್ರೀಧರ ನಿಂಬಾಳ್ಕರ, ಬಾಬು ನಿಂಬಾಳ್ಕರ, ಪಾಂಡುರಂಗ ಹೊಸೂರ, ಶಿವಪುತ್ರಯ್ಯ ಕುಲಕರ್ಣಿ, ಮಲ್ಲಪ್ಪ ಹೊಂಗಲ, ಯಲ್ಲಪ್ಪ ಕುರಿ, ದುಂಡಪ್ಪ ಬಾರ್ಕಿ, ಮಲ್ಲಿಕಾರ್ಜುನ ಕಬ್ಬೂರ, ಫಕ್ಕೀರಪ್ಪ ಹೊಸೂರ, ಮಹಾಬಲೇಶ್ವರ ಸೊಗಲದ, ಎಸ್.ಡಿ.ಎಂ.ಸಿ ಪದಾಧಿಕಾರಿಗಳಾದ ರಮೇಶ ಸೂರ್ಯವಂಶಿ, ಅರ್ಜುನ ಸೂರ್ಯವಂಶಿ, ಮೈಲಾರ ಹೊಸೂರ, ಶಿವಾನಂದ ಜೇಡರ, ಬಸವರಾಜ ರುದ್ರಾಪೂರ, ಗಂಗಪ್ಪ ಆಡಿನ, ಬಸವರಾಜ ಸೊಗಲದ, ಸುಶೀಲಾ ಬೋಬಡೆ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ, ಸುಮಿತ್ರಾ ಕುಲಕರ್ಣಿ, ಶಾಂತಾ ಬಡಿಗೇರ, ಗಂಗವ್ವ ತಳವಾರ ಹಾಗೂ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡರು.

ಮಾಜಿ ಯೋಧರಾದ ನಿಂಗಪ್ಪ ಕಂಬಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಅನೇಕ ಮಹನೀಯರ ತ್ಯಾಗ, ಬಲಿದಾನವನ್ನು ಪ್ರತಿಯೊಬ್ಬ ಭಾರತೀಯ ಅಭಿಮಾನದಿಂದ ನೆನೆಯಬೇಕು ಎಂದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರ ಸೇವೆ ಶ್ಲಾಘನೀಯ ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾದ ಯುವ ಉದ್ಯಮಿಗಳಾದ ಸುನೀಲ ವೆರ್ಣೇಕರ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ದೇಶದ ಕೀರ್ತಿಯನ್ನು ಇನ್ನೂ ಹೆಚ್ಚಿಸುವ ಸಾಧನೆ ಮಾಡುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್. ಠಕ್ಕಾಯಿ ಮಾತನಾಡಿ ದೇಶದ ಸ್ವಾತಂತ್ರ‍್ಯ ಹೋರಾಟ ಒಂದು ರೋಚಕ ಅಧ್ಯಾಯ ಎಂದರು. ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕರ್ತವ್ಯಗಳನ್ನು ಪಾಲಿಸಿದರೆ ದೇಶ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಮಹಾಂತೇಶ ಹೊಂಗಲ, ರಾಮು ಮೆಕ್ಕೇದ, ಮಲ್ಲಪ್ಪ ತಳವಾರ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ಶ್ರೀಪಾಲ ಚೌಗಲಾ, ವೀರೇಂದ್ರ ಪಾಟೀಲ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎಸ್.ಎಂ.ಚರಂತಿಮಠ, ಶಿಕ್ಷಕರಾದ ಎಂ.ಬಿ ಹೊಂಗಲ, ಪಟ್ಟಣಶೆಟ್ಟಿ, ವಿ.ಎಂ.ಕುರಿ, ಎಸ್.ಬಿ ರಾಮದುರ್ಗ, ಬಸವರಾಜ ಘಂಟಿ, ಟಿ.ಎಸ್. ಮಾದರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತನುಜಾ ಬಡಿಗೇರ ಪ್ರಾರ್ಥಿಸಿದರು. ಚೈತ್ರಾ ಸೊಗಲದ ನಿರೂಪಿಸಿದರು. ರಾಜೇಶ್ವರಿ ಸೊಗಲದ ಸ್ವಾಗತಿಸಿದರು. ಸಾವಿತ್ರಿ ಹೊಂಗಲ ವಂದಿಸಿದರು.

ನಿವೃತ್ತ ಯೋಧರಾದ ವೆಂಕಣ್ಣ ಬಡಿಗೇರ, ಗಂಗಪ್ಪ ಅರವಟಗಿ, ರವೀಂದ್ರ ಮನಗುತ್ತಿ, ದುಂಡಪ್ಪ ಮಡಿವಾಳರ, ಅರ್ಜುನ ನಿಂಬಾಳ್ಕರ, ಅಣ್ಣಾಸಾಹೇಬ ಜಾದವ, ಸಿದ್ದಪ್ಪ ಮನಗುತ್ತಿ, ಮಾರುತಿ ಅರವಟಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಂಗೋಲಿ ಹಾಗೂ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!