spot_img
spot_img

ಸಂಭ್ರಮ ಸಡಗರದ ವಚನೋತ್ಸವದ ಅಮೃತೋತ್ಸವ

Must Read

spot_img
- Advertisement -

ಬೆಳಗಾವಿ:  ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವದ ವರ್ಷಾಚರಣೆ ವಚನ ಸಂಶೋಧಕ ಪಿತಾಮಹ ಫ. ಗು.ಹಳಕಟ್ಟಿಯವರ  ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆ ಬೆಳಗಾವಿ ಮಹಿಳಾ ಘಟಕ ಇವರ ಆಶ್ರಯದಲ್ಲಿ 75ನೇಯ  ಅಮೃತೋತ್ಸವ ವಚನೋತ್ಸವ ಕಾರ್ಯಕ್ರಮ ಪತ್ರಿಬಸವ ನಗರದ 2ನೇಯ ಅಡ್ಡರಸ್ತೆಯಲ್ಲಿರುವ ಅನ್ನಪೂರ್ಣಾ ಗೋಪಾಲಸಿಂಗ್  ರಜಪೂತ ಶರಣ ದಂಪತಿಗಳ ಹೀರಾ ಸದನದಲ್ಲಿ ನೆರವೇರಿತು.

ರಜಪೂತ ಶರಣದಂಪತಿಗಳು ಧ್ವಜಾರೋಹಣ ನೆರವೇರಿಸಿದರು. ವಿದ್ಯಾಶ್ರೀ ಅಮರಜಿತಸಿಂಗ್ ದಂಪತಿಗಳು ಬಸವ ಪೂಜೆ ನೆರವೇರಿಸಿದರು. ಅಲ್ಲಮಪ್ರಭುಗಳ ಘನತರವಾದ ಚಿತ್ರದ ರೂಪವ ಬರೆಯ ಬಲ್ಲುದಲ್ಲದೆ……  ಎಂಬ ವಚನ ಕುರಿತು ಶರಣ ಈಶ್ವರ್ ಬೆನ್ನಿ ಚಿಂತನೆಗೈದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷೆ  ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿ ಕನ್ನಡದ ಮೇರು ವಚನ ಸಾಹಿತ್ಯ ಮನೆಮನಗಳ ತಲುಪುತ್ತಿರುವುದು ಸಂತಸ ತಂದಿದೆ ಎಂದರು.

- Advertisement -

ಪ್ರಾಸ್ತಾವಿಕವಾಗಿ ಪ್ರೇಮಕ್ಕ ಅಂಗಡಿ ಮಾತನಾಡಿದರು. ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷ ಸುವರ್ಣಾ ಬಿಜಗುಪ್ಪಿ  ಸ್ವಾಗತಿಸಿದರು  ಪ್ರೀತಿ ತುಳಜನ್ನವರ ನಿರೂಪಿಸಿದರು. ಮೀನಾಕ್ಷಿ ಕುಡಸೋಮಣ್ಣವರ ವಂದಿಸಿದರು. ಅನ್ನಪೂರ್ಣ ಗೋಪಾಲ ಸಿಂಗ್ ರಜಪೂತ  ಮಲ್ಲಮ್ಮ ಪಾಟೀಲ್ ವಿದ್ಯಾ  ರಾಮಣ್ಣವರ ಕಾಡಪ್ಪ ರಾಮಗುಂಡಿ ದುಂಡಯ್ಯ ಕುಲಕರ್ಣಿ ಪತ್ರಯ್ಯ ಕುಲಕರ್ಣಿ ಮಹಾದೇವ ಕರಡಿಗುದ್ದಿ ಮೀನಾಕ್ಷಿ  ಕುಡಸೋಮಣ್ಣನವರ ಪಾರ್ವತಿ ಕುಲಕರಣಿ ಕಲಾವತಿ ಕಡಕೋಳ  ಪತ್ರಿಬಸವೇಶ್ವರ  ನಗರದ ಅಜಗನ್ನ ಬಳಗದ ಶರಣ ಶರಣಿಯರು ಹಾಜರಿದ್ದರು. ಮುಕ್ತಾಯಕ್ಕ ಬಳಗದವರು ಪೂಜೆ ಪ್ರಾರ್ಥನೆ ನೆರವೇರಿಸಿ ಕೊಟ್ಟರು  ಹಾಗೂ ನಗರದ ನೂರಾರು ಶರಣ ಶರಣೀಯರೂ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group