spot_img
spot_img

ಪಂಚಮಸಾಲಿ ಸಮಾಜದಿಂದ ಮುಖ್ಯಮಂತ್ರಿಗಳಿಗೆ ಮನವಿ

Must Read

ಮೀಸಲಾತಿಯ ಬಗ್ಗೆ ಸ್ಪಷ್ಟ ನಿಲುವಿಗೆ ಆಗ್ರಹ ; ಸಿಎಂ ನಿವಾಸದೆದುರು ಧರಣಿ ಎಚ್ಚರಿಕೆ

ಬೆಂಗಳೂರು– ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಾಗೂ ಇತರೆ ಸಮಾಜಗಳಿಗೆ 2ಎ ಮೀಸಲಾತಿ ನೀಡುವ ಕುರಿತಂತೆ ಅಂತಿಮ ಸುತ್ತಿನ ಮಾತುಕತೆಗೆ ತಮ್ಮನ್ನು ಕರೆಯಬೇಕು ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಪೀಠಾಧಿಪತಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಸಮಾಜಕ್ಕೆ 2 ಎ ಮೀಸಲಾತಿ ನೀಡಲು ಹಕ್ಕೊತ್ತಾಯಿಸಿ ಕಳೆದ ಇಪ್ಪತ್ತು ತಿಂಗಳಿನಿಂದ ಬೃಹತ್ ಪಾದಯಾತ್ರೆ, ಅರಮನೆ ಮೈದಾನದಲ್ಲಿ ಮಹಾರ್ಯಾಲಿ, ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಹಾಗೂ ರಾಜ್ಯಾದ್ಯಂತ ಪ್ರತಿಜ್ಞಾ ಪಂಚಾಯತ್‌ ಅಭಿಯಾನಕೈಗೊಂಡ ಸಂದರ್ಭದಲ್ಲಿ ತಮ್ಮ ಸರ್ಕಾರದ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಸೆಪ್ಟೆಂಬರ್-15-2021 ನೀಡುತ್ತೇವೆಂದು ಸದನದಲ್ಲಿ ಮಾತುಕೊಟ್ಟಿದ್ದರು.

ಅಲ್ಲದೆ ತಾವುಗಳು ಮುಖ್ಯಮಂತ್ರಿಯಾದ ನಂತರ ಅಕ್ಟೋಬರ್-01-2021 ರಂದುತಮ್ಮ ಗೃಹ ಕಛೇರಿಗೆ ನಮ್ಮೆಲ್ಲರನ್ನು ಆಮಂತ್ರಿಸಿ ಮೂರು ತಿಂಗಳುಗಳ ಕಾಲಾವಕಾಶ ಕೇಳಿದ್ದಿರಿ. ಡಿಸೆಂಬರ್-16-2021 ರಂದು ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಜನಪ್ರತಿನಿಧಿಗಳ ಸಭೆಯಲ್ಲಿ ಬಜೆಟ್‌ ಅಧಿವೇಶನದ ಒಳಗಾಗಿ ಮೀಸಲಾತಿ ಘೋಷಿಸುತ್ತೇವೆಂದು ವಚನ ಕೂಡ ಕೊಟ್ಟಿದ್ದೀರಿ ಎಂದು ನೆನಪಿಸಲಾಗಿದ್ದು, ನಾವುಗಳು ಕೂಡ ಸಹ ನೀವು ಕೊಟ್ಟ ಮಾತಿನಂತೆ ನಿಮ್ಮ ಮೇಲೆ ಅಪಾರವಾದ ನಂಬಿಕೆ, ವಿಶ್ವಾವಿರಿಸಿ ಶಾಂತರೀತಿಯಿಂದ ಹೋರಾಟವನ್ನು ಮಾಡುತ್ತ ಬಂದಿದ್ದೇವೆ. ಆದರೆ ಘನ ಸರ್ಕಾರವು ಮೂರು ಬಾರಿ ಕೊಟ್ಟ ಮಾತನ್ನು ನೆರವೇರಿಸದೇ ಇರುವುದರಿಂದ ಸಮಾಜ ಬಾಂಧವರಲ್ಲಿ ಅಸಮಾಧಾನ ಹೆಚ್ಚಾಗಿದೆ ಹಾಗೂ ಸರ್ಕಾರದ ಮೇಲೆ ನಂಬಿಕೆ ಕಡಿಮೆ ಆಗುತ್ತಲಿದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸದೇ ಕೂಡಲೆ ನ್ಯಾಯವನ್ನು ಒದಗಿಸಬೇಕು ಎಂದು ಕೋರಲಾಗಿದೆ.

ನಾವು ಸರ್ಕಾರಕ್ಕೆ ಕೊಟ್ಟ ಏಪ್ರಿಲ್ 14ರ ಗಡುವು ಮುಗಿದಿರುವುದರಿಂದ ಈ ಮೊದಲೇ ಸಮಾಜದ ಸಭೆಯ ನಿರ್ಣಯದಂತೆ ಕೂಡಲಸಂಗಮದಲ್ಲಿ ಏಪ್ರಿಲ್-21 ರಿಂದ ಮೆ-14 ರವರೆಗೆ 14 ದಿನಗಳ ಯಶಸ್ವಿ ಸತ್ಯಾಗ್ರಹವನ್ನು ಮಾಡಲಾಗಿದೆ.

ಮೇ-05 ರಿಂದರಾಜ್ಯಾದ್ಯಂತ ತಹಸೀಲ್ದಾರ್‌ ಕಛೇರಿ ಮುಂದೆ ಸತ್ಯಾಗ್ರಹ, ಪ್ರತಿಭಟನಾ ರಾಲಿಗಳು ಯಶಸ್ವಿಯಾಗಿಸಾಗುತ್ತಲಿವೆ. ಇಷ್ಟೆಲ್ಲ ಚಳವಳಿ ಮಾಡಿದ್ದಾಗ್ಯೂ ಸಹ ತಾವುಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಖ್ಯಮಂತ್ರಿಯಾದ ತಕ್ಷಣ ತಾವುಗಳು ಸಮಾಜಕ್ಕೆ ಸ್ಪಂದಿಸಿದಂತ ಗೌರವವನ್ನು ಸಮಾಜಕ್ಕೆ ಇತ್ತೀಚೆಗೆ ಕಳೆದ ಎರಡು ತಿಂಗಳಿನಿಂದ ನೀಡುತ್ತಿಲ್ಲ. ನಿಮ್ಮ ನಡವಳಿಕೆಗಳು ನಮಗೆ ಅಸಮಾಧಾನ ತಂದಿದೆ.ಹೀಗಾಗಿ ಸಮಾಜ ಬಾಂಧವರ ಹೋರಾಟದ ಸಹನೆ ಕಟ್ಟೆ ಒಡೆದು ಹೋಗಿದೆ. ಆದ್ದರಿಂದ ಬರುವ ಜೂನ್-27 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ನಿಮ್ಮ ಸ್ವಂತ ಮನೆ ಮನೆಯೆದುರು ಸತ್ಯಾಗ್ರಹ ಮಾಡಲು ಸಮಾಜ ಭಾಂಧವರು ನಿರ್ಧರಿಸಿದ್ದೇವೆ. ಅದೇ ದಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಹೋರಾಟಕ್ಕೂ ಚಾಲನೆ ನೀಡಲಾಗುವುದು. ಕಾರಣ ಕೊಟ್ಟ ಮಾತಿನಂತೆ 2ಎ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಜೂನ್-27 ರೊಳಗಾಗಿ ಕೂಡಲೇ ಸಮಾಜದ ಹೋರಾಟ ಪ್ರಮುಖರೊಂದಿಗೆ ಅಂತಿಮ ಸುತ್ತಿನ ಮಾತುಕತೆಗೆ ಸಮಯ ನಿಗದಿ ಮಾಡಬೇಕೆಂದು ಹಾಗೂ ಸಕರ್ಕಾರದ ಸ್ಪಷ್ಟ ನಿಲುವನ್ನು ತಿಳಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಮ್ಮ ಸಮುದಾಯದ ಮೀಸಲಾತಿ ಜೊತೆಯಲ್ಲಿ ಹಾಲುಮತ, ವಾಲ್ಮೀಕಿ ಹಾಗೂ ಲಿಂಗಾಯತ ಒಳಪಂಗಡಗಳ ಮೀಸಲಾತಿಯ ಕುರಿತು ಆಯಾ ಸಮಾಜ ಭಾಂಧವರ ಸಭೆಯನ್ನು ಕರೆದು ಅನುಷ್ಠಾನಗೊಳಿಸಬೇಕು. ಕೂಡಲೇ ಸಭೆಯನ್ನು ಕರೆದು ಸ್ಪಷ್ಟ ನಿಲುವನ್ನು ತಿಳಿಸದೆ ಹೋದಲ್ಲಿ ಬರುವಂತಹ ದಿನಗಳಲ್ಲಿ ಸುಮಾರು ಇಪ್ಪತ್ತೈದು ಲಕ್ಷ ಜನಸ್ತೋಮವನ್ನು ಸೇರಿಸಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದು ಕೂಡ ಮನವಿಯ ಮೂಲಕ ಎಚ್ಚರಿಸಲಾಗಿದೆ.

ನಿಯೋಗದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವರಾದ ವಿನಯ್ ಕುಲಕರ್ಣ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಶಂಕರಗೌಡ ಬಿರಾದಾರ, ದರೆಪ್ಪ ಟಕ್ಕಣ್ಣವರ್, ದೀಪಕ್ ಜುಂಜರವಾಡ, ಸಂಜು ಬಿರಾದಾರ್, ಶಿವಪುತ್ರ ಮಲ್ಲಿವಾಡ, ಪುಟ್ಟರಾಜ್ ಹಳ್ಳದ, ರುದ್ರೇಶ್ ಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!