spot_img
spot_img

ಭಗವಂತನ ಅನುಸಂಧಾನ ಮಾಡಿಸಿ ಸನ್ಮಾಗ೯ದ ಹಾದಿಯಲ್ಲಿ ಹೊಸ ಚಿಂತನೆಗೆ ಪ್ರೇರೇಪಿಸುವ ಮೌಲಿಕ ಕೃತಿ

Must Read

spot_img
- Advertisement -

ಬೆಂಗಳೂರು ಹತ್ತಿರ ಪ್ರಸಿದ್ಧ ಕ್ಷೇತ್ರ, ಕಾಕೋಳು   ಚತುಭು೯ಜ ವೇಣುಗೋಪಾಲ ದೇವರ ಸನ್ನಿಧಾನದಲ್ಲಿ,  ಅದರಲ್ಲೂ ದೇವಸ್ಥಾನದ 90 ನೇ ವಷ೯ದ ಬ್ರಹ್ಮ ರಥೋತ್ಸವ ಸಂಭ್ರಮ, ಅವಿಸ್ಮರಣೀಯ ಉತ್ಸವ ವೀಕ್ಷಿಸುವುದೇ ಭಕ್ತ ಜನರಿಗೆ ಪುಣ್ಯ ಸಮಯ.

ಈ ಪುಣ್ಯ ಕಾಲದಲ್ಲಿ, ಸಂಸ್ಕೃತಿ ಚಿಂತಕ ಮತ್ತು ಅಂಕಣಕಾರರಾದ ಡಾ॥ ಗುರುರಾಜ ಪೋಶೆಟ್ಟಿಹಳ್ಳಿಯವರು ಅತ್ಯಂತ ಸಂದೇಶಯುಕ್ತ  ಆಧ್ಯಾತ್ಮಿಕ ಚಿಂತನೆಯ ಸಂಗ್ರಹಯೋಗ್ಯ  40 ಲೇಖನಗಳ ಸಂಕಲನ ಕೃತಿ “ಶ್ರೀ ಕೃಷ್ಣಾಪ೯ಣ” ಲೋಕೇಶಾಪ೯ಣೆ ಮಾಡಿ ಆಧ್ಯಾತ್ಮ ಬಂಧುಗಳಿಗೆ ಮಹದುಪಕಾರ ಮಾಡಿದ್ದಾರೆ.

ತಿಳಿವೆಂಬುವ ನೀನೇ ತಿಳಿದು ತಿಳಿಸುವ ನೀನೇ

- Advertisement -

ತಿಳಿವ ವಸ್ತು ನೀನೇ ತೀಥ೯ಪದನೆ

ತಿಳಿದುದಕೆ ಫಲ ನೀನೇ 

ತಿಳಿಯಗೊಡದವನ ನೀನೇ

- Advertisement -

ತಿಳಿವ ಸ್ವತಂತ್ರ ನಿನ್ನದು  ತಿಳಿಸೊ ಸವೇ೯ಶ 

ಎಂಬ ಬೇಡಿಕೆ ಬಿಂಬ ಮೂರುತಿ ಭಗವಂತನನ್ನು ಬೇಡುತ್ತಾ  ಶ್ರೀ ಕೃಷ್ಣಾಪ೯ಣ ಸಂಕಲನ ಕೃತಿಯಲ್ಲಿ ನಾರಾಯಣ, ವಾಸುದೇವ, ಸಂಕಷ೯ಣ, ಪ್ರದ್ಯುಮ್ನ, ಅನಿರುಧ್ಧ   ನಾಮಗಳಿಂದ ಜ್ಞಾನದ ಅರಿವನ್ನು ಭಕ್ತ ಜನರಿಗೆ  ಸಮಪಿ೯ಸಿರುವುದು ಪ್ರಸ್ತುತ ಸಮಯದಲ್ಲಿ ಅವಶ್ಯವಾಗಿದೆ.

‘ನಾರಾಯಣ’ನ ಅವತಾರ ಚಿಂತನೆಯಲ್ಲಿ,  ಶ್ರೀ ವೇದವ್ಯಾಸರ ಬ್ರಹ್ಮ ಸೂತ್ರದ ಬಗ್ಗೆ  ಸಂಕ್ಷಿಪ್ತ ವಿವರ,  ಭಾರತೀಯ ತತ್ವಜ್ಞಾನ, ಸಾಹಿತ್ಯ, ಕಲೆ, ಧಮ೯,  ಭಗವಂತನ ಚಿಂತನೆ ವಿವರ ಸಾಧಕರಿಗೆ ತಿಳಿಯಲು ಸಹಕಾರಿಯಾಗಿದೆ. ಹಯಗ್ರೀವ ದೇವರ ಸ್ವರೂಪ,  ಶ್ರೀ ವಾದಿರಾಜರ ಉಪಾಸನಾ ಮೂತಿ೯ ಸ್ಮರಣೆ, ಶ್ರೀ ರಾಘವೇಂದ್ರ ಸ್ವಾಮಿಗಳ ಹಯಗ್ರೀವ ಮಂತ್ರೋಪಾಸನೆ, ಧನ್ವಂತರಿ ಮಹಿಮೆ, ಶ್ರೀ ರಾಮಚಂದ್ರನ ಆದಶ೯, ರಾಮನಾಮದ ಶಕ್ತಿ, ರಾಮಾಯಣದ  ಮಹಿಮೆ, ಶ್ರೀ ಕೃಷ್ಣನ  ಅವತಾರ, ರೋಹಿಣಿ ನಕ್ಷತ್ರದ  ವಿವರ, ತುಳಸೀ ಪತ್ರದ  ಪವಿತ್ರ ಮಹಿಮೆ, ಬೆಣ್ಣಿಗೆ ಅಭಿಮಾನಿ ದೇವತೆ ವಾಯುದೇವರ ವಾಯುತತ್ವ, ನವನೀತಪ್ರಿಯ ಶ್ರೀ ಕೃಷ್ಣ, ಭಗವಂತನ ಲೀಲೆಗಳು, ತಿರುಪತಿ ತಿಮ್ಮಪ್ಪನ ಖ್ಯಾತಿ,  ಶ್ರೀನಿವಾಸನ ವಿವಾಹ, ಭೂಲೋಕದ ವೈಕುಂಠ , ಭಗವಂತನ ಇಪ್ಪತ್ತನಾಲ್ಕು ರೂಪಗಳು, ಸಾಲಿಗ್ರಾಮಗಳ ಪೂಜೆ, ಮಹಾಲಕ್ಷ್ಮೀ ಅವತಾರ, ಶಂಖದ  ಪ್ರಾಶಸ್ತ್ಯ, ಶ್ರೀ ತುಳಸೀ, ಹನುಮಂತನ ವೈಭವ, ಸ್ವಾಮಿ ಭಕ್ತಿ, ಕೈಲಾಸ ವಾಸ ರುದ್ರದೇವರ ಆರಾಧನೆ, ಅಲ್ಲಲ್ಲಿ ದಾಸರ ಪದಗಳ ದೃಷ್ಟಾಂತ, ಶಿವನನ್ನು ತೈಲಧಾರೆಯಂತೆ ಮನಸ್ಸು ಕೊಡು ಎಂದು ಪ್ರಾಥಿ೯ಸುವ  ವಿಜಯದಾಸರ ಕೀತ೯ನೆ,  ಗರುಡನ  ಸ್ವಾಮಿ ಭಕ್ತಿ , ಆಕಾಶಕ್ಕೆ ಅಭಿಮಾನಿ ದೇವತೆ  ಗಣಪತಿಯ  ಮೊದಲ ಪೂಜೆಯ ಹಿನ್ನೆಲೆ,  ನವಗ್ರಹ ಆರಾಧನೆ ವಿವರ ತಿಳಿಸಿದ್ದಾರೆ.

ಎರಡನೇ ‘ವಾಸುದೇವ’ ಜ್ಞಾನ ಪುಷ್ಪದಲ್ಲಿ ಋಗ್ವೇದದ ಬೃಹತೀ ಸಹಸ್ರ ಯಾಗದ  ಮಹತ್ವ, ಶ್ರೀ ಮಧ್ವಾಚಾರ್ಯರ  ವ್ಯಾಖ್ಯಾನ, ವಿಷ್ಣುಸಹಸ್ರನಾಮದ ಪಾರಾಯಣ, ಅನೇಕ ಪುರಾಣಗಳ ದೃಷ್ಟಾಂತಗಳು, ಅದರ ಇಷ್ಟಾಥ೯ ಸಿದ್ಧಿ, ರಾಮನಾಮ, ಸಹಸ್ರ ನಾಮಗಳಿಗೆ ಸಮ ಎನ್ನುವ  ವಿವರ, ಭಗವದ್ಗೀತೆಯ ಸಾರಸಂಗ್ರಹ, ಭಾಗವತ ಭಕ್ತರ ಸಂಜೀವಿನಿ, ಗಜೇಂದ್ರ ಮೋಕ್ಷ,ದ ವಿವರ ಓದಬಹುದು.

ಮೂರನೇ ಜ್ಞಾನಪುಷ್ಫ ‘ಸಂಕರ್ಷಣ’ದಲ್ಲಿ  ಚಕ್ರಾಬ್ಜ ಮಂಡಲ, ಬಿಂಬೋಪಾಸನೆ, ಆಯಾದೇವತೆಗಳ ಅನುಗ್ರಹ ಅತ್ಯಂತ ವಿವರವಾಗಿ ಲೇಖಕರು  ಓದುಗರಿಗೆ, ಸರಳ ಭಾಷೆಯಲ್ಲಿ, ಉದಾಹರಣೆ ರೂಪದಲ್ಲಿ ತಿಳಿಸಿದ್ದಾರೆ.

ದೇಹದಂಡನೆಗೆ ತಪ್ತಮುದ್ರಾಧಾರಣೆಯ ಮಹತ್ವ, ಶ್ರೀ ಮಧ್ವಾಚಾರ್ಯರ ಸಂದೇಶ, ಅನೇಕ ಯತಿಶ್ರೇಷ್ಠರ  ಮಾಹಿತಿ  ವೈಷ್ಣವರಿಗೆ ತಿಳಿಸಿದ ವಿವರ ತಿಳಿಯಬಹುದು. ವೃಕ್ಷಾರಾಧನೆ, ಅದರ ನಿಸ್ವಾಥ೯ಸೇವೆ, ನಾಗಪೂಜೆ, ಗೋವುಗಳ ಪೂಜೆ, ದಾನ, ಅದರ ಸ್ವರೂಪ, ರಥೋತ್ಸವದ ವೈಶಿಷ್ಟ್ಯ, ಅನ್ನದಾನದ ಪುಣ್ಯ, ಕಲಶ ಪೂಜೆ, ಭಜನೆಗಳು, ಸಂಕೀತ೯ನೆ, ಅಧಿಕ ಮಾಸದ ವಿವರ, ಆಧ್ಯಾತ್ಮ ಬಂಧುಗಳು ತಿಳಿಯಬಹುದು.

ನಾಲ್ಕನೇ ಜ್ಞಾನ ಪುಷ್ಪ ‘ಪ್ರದ್ಯುಮ್ನ’ ಭಾಗದಲ್ಲಿ  ಗುರು ನಮನ, ಆಚಾಯ೯ತ್ರಯರ ಸಿಧ್ಧಾಂತ, ತತ್ವ, ಸುಮಧ್ವವಿಜಯದ ಸಂಕ್ಷಿಪ್ತ ವಿವರ, ಶ್ರೀ ಪಾದರಾಜರು ಹಾಕಿಕೊಟ್ಟ ದಾಸಸಾಹಿತ್ಯದ ಪ್ರಕಾರ, ಶ್ರೀ ವ್ಯಾಸರಾಜರು,  ಅವರ ನಿಬ್ಬೆರಗಾಗುವ ಸಾಂಸ್ಕೃತಿಕ. ದಿಗ್ವಿಜಯ, ಜ್ಞಾನ ಕಾಯ೯, ಅನೇಕ ಮಹಾನ್ ದಾಸರಿಗೆ ಗುರೋಪದೇಶ ಮಾಡಿದ ಕಾಯ೯, ಶ್ರೀ ಪುರಂದರದಾಸರ  ಚರಿತ್ರೆ, ಸಾಹಿತ್ಯ, ಕನಕದಾಸರ ಅನನ್ಯ ಶ್ರೀ ಹರಿಯ ಭಕ್ತಿ, ಸಾಹಿತ್ಯ, ತಿಳಿಯಬಹುದು.

ಐದನೇ ‘ಅನಿರುಧ್ಧ’ ಜ್ಞಾನಪುಷ್ಪದಲ್ಲಿ ಶ್ರೀಕ್ಷೇತ್ರ ದಶ೯ನ, ಕಾಕೋಳು ಕ್ಷೇತ್ರದ ಮಹಿಮೆ, ಸಾಧಕರ ಅನನ್ಯ ಸೇವೆ, ಪಾಂಚಜನ್ಯ ಪ್ರತಿಷ್ಠಾನದ ಮಾಹಿತಿಯನ್ನು ಓದಿ  ಅರಿಯಬಹುದು.

ಹೊಸ ಚಿಂತನೆಗೆ ಪ್ರೇರೇಪಿಸುವ, ಆಧ್ಯಾತ್ಮಿಕ ವಿವರಗಳೊಂದಿಗೆ, ಈ ಕೃತಿ ಭಕ್ತ ಜನರಿಗೆ  , ಭಗವಂತನ ಅನುಸಂಧಾನ ಮಾಡಿಸುವ, ಸನ್ಮಾಗ೯ದ ಹಾದಿಯಲ್ಲಿ  ಮುಂದಡಿಯಿಡುವ ಎಲ್ಲರ ಮಾಗ೯ದಶ೯ನಕ್ಕೆ ಪೂರಕವಾಗಿದೆ ಎಂದರೆ  ಅತಿಶಯೋಕ್ತಿಯಲ್ಲ!!!

ವಂದೇ ಗುರು ಪರಂಪರಾಮ್, ಸತ್ಸಂಗ ಸಂಪದ, ದಾಸಪಂಥ ಮುಂತಾದ ಅಪರೂಪದ ಮೌಲಿಕ   ಕೃತಿಗಳನ್ನು, ಅನೇಕ ಲೇಖನಗಳನ್ನು ಭಕ್ತ ಜನರಿಗೆ ನೀಡಿ, ಸನ್ಮಾಗ೯ದಲ್ಲಿ ನಡೆಯಲು ಪ್ರೇರೇಪಿಸುತ್ತಿರುವ ಡಾ॥ ಗುರುರಾಜ ಪೋಶೆಟ್ಟಿಹಳ್ಳಿಯವರ ಕಾಯ೯ದಿಂದ ಮುಂದೆಯೂ ಮೌಲಿಕ ಆಧ್ಯಾತ್ಮಿಕ ಕೃತಿಗಳು ಲೋಕೇಶಾಪ೯ಣೆಗೊಳ್ಳಲಿ ಎಂದು ಬಯಸುತ್ತಾ, ಈ ಕೃತಿ   ಜ್ಞಾನ ಪಿಪಾಸುಗಳಿಗೆ ಸಂಗ್ರಹ ಯೋಗ್ಯ ಗ್ರಂಥವಾಗಿದೆ.  

ವಿವರಗಳಿಗೆ : 97393 69621

– ಶ್ರೀಧರ  ರಾಯಸಂ (ಭಾಗ೯ವ ಪ್ರಶಸ್ತಿ ಪುರಸ್ಕೃತರು , ಕಥಾರಂಗಂ ಪ್ರಶಸ್ತಿ ವಿಜೇತರು) ಗಿರಿನಗರ, ಬೆಂಗಳೂರು – 85  

- Advertisement -
- Advertisement -

Latest News

10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group