Homeಲೇಖನಗೊರೂರು ಅನಂತರಾಜು ಅವರ ಕಲೆ ಸೆಲೆ ಕಿರು ಅವಲೋಕನ

ಗೊರೂರು ಅನಂತರಾಜು ಅವರ ಕಲೆ ಸೆಲೆ ಕಿರು ಅವಲೋಕನ

ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚಿನ ದಿಗ್ಗಜರಲ್ಲಿ ಹಾಸನದ ಗೊರೂರು ಅನಂತರಾಜುರವರು ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷ ಕೊಡುಗೆಯ ಪುಸ್ತಕಗಳನ್ನು ಕೊಡುತ್ತಿರುವ ಗೊರೂರು ಅನಂತರಾಜುರವರು *ಸಕಲಕಲಾ‌ ವಲ್ಲಭ* ಎಂದರೆ ತಪ್ಪಾಗಲಾರದು. ಪ್ರತೀ ವರ್ಷದಂತೆ ಈ ವರ್ಷವೂ *ಕಲೆ-ಸೆಲೆ* ಎನ್ನುವ ಲೇಖನ ಸಂಕಲನವನ್ನು ಹೊರತರುತ್ತಿದ್ದಾರೆ.

ಈ ಪುಸ್ತಕವು ಮೈಸೂರಿನ ಪದ್ಮ ಶೇಖರ್   ಪ್ರಿಂಟರ್ಸ್ ರವರಿಂದ ಮುದ್ರಣಗೊಂಡಿದೆ‌, ಸುಂದರ ಮುಖಪುಟದಿಂದ ಆಕರ್ಷಣೀಯವಾಗಿದೆ. ಪುಸ್ತಕದ ಅಂಗಡಿಯಲ್ಲಿ ನಾವು ಪುಸ್ತಕ ಕೊಳ್ಳಲು ಹೋದಾಗ ,‌ನಮ್ಮ ಕಣ್ಣುಗಳನ್ನು ಆಕರ್ಷಿಸುವಂತಹ ಕಲೆ-ಸೆಲೆ ಎನ್ನುವ ಪುಸ್ತಕ ಇದಾಗಿದೆ.

ಈ ಪುಸ್ತಕ ಒಟ್ಟು ನಲವತ್ತು ಲೇಖನಗಳನ್ನು ಒಳಗೊಂಡಿದೆ. ಸಮಾಜಮುಖಿಯಾದ ನಾಟಕಗಳು, ಐತಿಹಾಸಿಕ ನಾಟಕಗಳು ಪ್ರದರ್ಶನಗೊಂಡ ಬಗ್ಗೆ, ನಾಡು ನುಡಿಯ ಬಗ್ಗೆ ಮಾಹಿತಿ ಇದೆ. ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಾರಸುದಾರ ಮತ್ತು ಚಾವುಂಡರಾಯ ನಾಟಕ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಸಮಾಜಮುಖಿ ಬಳಗದವರಿಂದ  ಪ್ರದರ್ಶನಗೊಂಡ ಬಗ್ಗೆ ಬರೆದಿರುವ ಲೇಖನವಿದಾಗಿದೆ. ಈ ನಾಟಕವು ರಾಯಪುರ ಗ್ರಾಮದ ಜಯರಾಮ್ ರವರ ಮುಖಂಡತ್ವದಲ್ಲಿ ನಡೆದಿದೆ.

ಸಿರಿ ಸೆರೆ ನಾಟಕ ಬೆಂಗಳೂರು ಕೆಂಪೇಗೌಡರ ಜೀವನ ಚರಿತ್ರೆ ಆಧಾರಿತವಾಗಿದೆ. ಶಿಶುನಾಳ ಶರೀಫರ ಜೀವನ ಗಾಥೆ ಹಾಸನದ ರಂಗ ಸಿರಿ ಕಾಲೇಜು ರಂಗೋತ್ಸವದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ನಾಟಕಗಳ ಪ್ರದರ್ಶನಗೊಂಡವು. ಹಾಸನದ ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಂಜುನಾಥ್ ಬೆಳೆಕೆರೆ ರಚಿಸಿದ ಶರೀಫ್ ನಾಟಕ ಪ್ರದರ್ಶಿಸಿದ
ಬಗ್ಗೆ‌ ಮನೋಜ್ಞ ಲೇಖನ ‌ ಇದಾಗಿದೆ. ಬಾಡಿದ ಬದುಕು ನಾಟಕ ಮತ್ತು ಗ್ಯಾರಂಟಿ ರಾಮಣ್ಣ.
ಹಾಸನದ ಸಾಹಿತ್ಯ ಭವನದಲ್ಲಿ ಪ್ರಗತಿ ಗ್ರಾಮೀಣ‌ ಅಭಿವೃದ್ದಿ ಮತ್ತು ತರಬೇತಿ ಸಂಸ್ಥೆ, ಆಶ್ರಯದಲ್ಲಿ ರಂಗ ನಟ ಡಿ.ವಿ.ನಾಗಮೇಹನ್ ಹುಟ್ಟುಹಬ್ಬದ ನಿಮಿತ್ತ ರಂಗಗೀತೆಗಳ ಕಾರ್ಯಕ್ರಮ ಹಾಗೂ ಗ್ಯಾರಂಟಿ ರಾಮಣ್ಣ ವಿರಚಿತ ಬಾಡಿದ ಬದುಕು ಸಾಮಾಜಿಕ ನಾಟಕ ಪ್ರದರ್ಶನದ ಬಗ್ಗೆ ಸುಂದರವಾಗಿ ಬರೆದ ಲೇಖನ ಇದಾಗಿದೆ. ಈ ನಾಟಕದಲ್ಲಿ ರಾಮಣ್ಣ ಅತಿಯಾದ ರಂಗಸಜ್ಜಿಕೆ , ಥಳಕು ಬಳುಕು ಯಾವುದೂ ಇಲ್ಲದೆ ಸಹಜವಾಗಿಯೇ ನಟರಿಂದ ಅಭಿನಯ ತೆಗೆದಿದ್ದಾರೆ. ಇಂತಹ ಉಪಯುಕ್ತವಾದ ಲೇಖನಗಳನ್ನೊಳಗೊಂಡ ಈ ಕಲೆ-ಸೆಲೆ ಪುಸ್ತಕವುಎಲ್ಲರ ಮನಮುಟ್ಟಲಿ ಸಾಹಿತ್ಯ ಕ್ಷೇತ್ರದಲ್ಲಿ ಮನ್ನಣೆ ಪಡೆಯಲಿ ಎಂದು ಆಶಿಸುತ್ತೇನೆ

ಸಾವಿತ್ರಮ್ಮ ಓಂಕಾರ್ ಅರಸೀಕೆರೆ
ಮೊ:9449657379

RELATED ARTICLES

Most Popular

error: Content is protected !!
Join WhatsApp Group