spot_img
spot_img

ವಚನ ವಿಶ್ಲೇಷಣೆ

Must Read

- Advertisement -

ಶರಣರು ನಿರ್ದೇಹಿಗಳು.

ಅಂಗವು ಲಿಂಗವೇಧೆಯಾದ ಬಳಿಕ
ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ
ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
ಆದಯ್ಯ- ಸಮಗ್ರ ವಚನ ಸಂಪುಟ: 6 ವಚನದ ಸಂಖ್ಯೆ: 771

ಆದಯ್ಯ ಗುಜರಾತ ಮೂಲದ ಸೌರಾಷ್ಟ್ರದವನು .ಬಸವಣ್ಣನವರ ಸಮಕಾಲೀನ ವಚನಕಾರ . ಸ್ಥಳ ಸೌರಾಷ್ಟ್ರ ಪ್ರಾಂತ್ಯ. ವ್ಯಾಪಾರದ ಸಲುವಾಗಿ ಪುಲಿಗೆರೆಗೆ (ಲಕ್ಷ್ಮೇಶ್ವರ) ಬಂದ; ಜೈನ ಹುಡುಗಿ ಪದ್ಮಾವತಿಯನ್ನು ಮದುವೆಯಾದ; ಮಾವನೊಡನೆ ವಾದಮಾಡಿ, ಸೌರಾಷ್ಟ್ರದ ಸೋಮೇಶ್ವರನನ್ನು ಕರೆತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿದ ಅನ್ನುವ ಕಥೆಯನ್ನು ಆದಯ್ಯನ ರಗಳೆ ಮತ್ತು ಸೋಮನಾಥ ಚಾರಿತ್ರಗಳು ಹೇಳುತ್ತವೆ. ಹನ್ನೆರಡನೆಯ ಶತಮಾನದ ಮತೀಯ ವಾಗ್ವಾದಗಳಿಗೆ ಇವನ ಬದುಕು ಒಂದು ನಿದರ್ಶನದಂತಿದೆ. ಧರ್ಮತತ್ವಗಳ ವಿವೇಚನೆ ಇರುವ ಈತನ 403 ವಚನಗಳು ದೊರೆತಿವೆ. ನಂತರ ಅನೇಕ ಜೈನ ಧರ್ಮಿಯರನ್ನು ಬಸವ ತತ್ವಕ್ಕೆ ಕರೆತಂದ ದಿಟ್ಟ ಗಣಾಚಾರಿ.ಆದಯ್ಯನವರ ವಚನಗಳಲ್ಲಿ ಉದಾತ್ತೀಕರಣದ ಉನ್ನತ ಭಾವ ಕಾಣುತ್ತೇವೆ. ವೇದ ಶಾಸ್ತ್ರ ಆಗಮಗಳನ್ನು ನಿರಾಕರಿಸಿ ನಿಸರ್ಗದತ್ತವಾದ ಸಹಜ ಜೈವಿಕ ಭೌತಿಕ ಜಗತ್ತಿನ ಸೂಕ್ಶ್ಮತೆಯನ್ನು ತಮ್ಮ ವಚನಗಳಲ್ಲಿ ವಿವರಿಸುತ್ತಾರೆ.

- Advertisement -

ವಚನ ವಿಶ್ಲೇಷಣೆ
————————
ಅಂಗವು ಅಂದರೆ ಶರೀರವು ಕಾಯವು ಲಿಂಗದೊಡನೆ ಕೂಡಿದ ಬಳಿಕ ,ಸಮಷ್ಟಿಯೊಡನೆ ಬೆರೆತ ಮೇಲೆ ತನ್ನ ಅಂಗ ಗುಣವನ್ನು ಕಳೆದುಕೊಂಡು ಅಲ್ಲಿ ಸಮಷ್ಟಿ ಭಾವವು ಮೂಡುತ್ತದೆ. ಹೀಗಾಗಿ ವ್ಯಕ್ತಿ ಸಮಷ್ಟಿಯ ಭಾಗವಾದಾಗ ತಾನು ಬೇರೆ ಎಂಬ ಅಸ್ತಿತ್ವವನ್ನು ಇಟ್ಟುಕೊಳ್ಳುವುದು ಶರಣ ಸಂಸ್ಕೃತಿಯಲ್ಲ.ಇಡೀ ಶರೀರವೇ ಲಿಂಗ ತನ್ಮಯವಾಗುತ್ತದೆ . ಇಂತಹ ಸಂಗಮಕ್ಕೆ ತನ್ನ ದಿಟ ಭಾವವಿರಲು ಭಕ್ತನಿಗೆ ಲಿಂಗವಲ್ಲದೆ ಮತ್ತೆ ಬೇರೆ ಅಂಗವುಂಟೆ ಎಂದು ಪ್ರಶ್ನಿಸಿದ್ದಾರೆ ಆದಯ್ಯನವರು.

ಅಂಗ ಲಿಂಗ ಒಂದೆಂಬ ಲಿಂಗಾಂಗ ಸಾಮರಸ್ಯವಾದ ಬಳಿಕ ಮತ್ತೆ ವ್ಯಕ್ತಿಗತವಾಗಿ ಗುರುತಿಸಿಕೊಳ್ಳುವುದು ಸಮಂಜಸವಲ್ಲ. ಪ್ರಾಕೃತಿಕವಾಗಿ ಪಂಚ ಮಹಾಭೂತಗಳ ಶಕ್ತಿಯಿಂದ
ಪಂಚೇಂದ್ರಿಗಳ ಮೂಲಕ ಜ್ಞಾನ ಅರಿವು ಹಾಗು ಮೋಕ್ಷ ಪಡೆವ ಭಕ್ತನಿಗೆ ಸಮಷ್ಟಿಯೇ ಸರ್ವ ಲಿಂಗ ತನ್ನ ಅಂಗದ ಕರಣೇಂದ್ರಿಯಗಳೇ ಲಿಂಗ .ಹೀಗಾಗಿ ಬಾಹ್ಯ ಮತ್ತು ಅಂತರಂಗದ ಲಿಂಗ ತತ್ವಗಳನ್ನು ಅರಿಯುವ ವ್ಯವಧಾನವೇ ಲಿಂಗ ಯೋಗ . ಬಸವಣ್ಣನವರು ಸಹಿತ ಒಂದು ವಚನದಲ್ಲಿ ” ಶ್ರೀ ವಿಭೂತಿ ರುದ್ರಾಕ್ಷಿ ಇದ್ದವರ ಲಿಂಗವೆಂಬೆ ಇಲ್ಲದವರ ಭವಿ ಎಂಬೆ ಸದ್ಭಕ್ತರನ್ನು ನೀನೀನೆಂಬೆ ಕೂಡಲ ಸಂಗಮದೇವಾ” ಎಂದಿದ್ದಾರೆ. ಇಲ್ಲಿ ಅಷ್ಟಾವರಣಗಳು ಲಿಂಗ ತತ್ವಕ್ಕೆ ಪ್ರೇರಣೆ ನೀಡುತ್ತವೆ .ಆದರೆ ಒಮ್ಮೆ ಲಿಂಗ ತತ್ವಗಳನ್ನು ಅರಿತ ಸದ್ಭಕ್ತನು ತಾನೇ ಶಿವನಾಗುತ್ತಾನೆ .ಅಂಗ ಲಿಂಗ ಒಂದಾಗಿ ಚೈತನ್ಯನಾದ ಚಿತ್ಕಳೆಯಾಗುತ್ತಾನೆ.

ಅಷ್ಟಾವರಣಗಳು ಅಂಗವಾಗಿ ಪಂಚಾಚಾರಗಳು ಪ್ರಾಣವಾಗಿ ಷಟಸ್ಥಲಗಳು ಆತ್ಮವಾಗಿ ತನುವಿಂಗೆ ಇಷ್ಟಲಿಂಗ ಕಾಯಕ್ಕೆ ಪ್ರಾಣಲಿಂಗ ಆತ್ಮಕ್ಕೆ ಭಾವಲಿಂಗವಾಗಿ ಪರಿವರ್ತಿತಗೊಂಡ
ಅನುಭಾವ ಹೊಂದಿದ ಶರಣನು ನಿರ್ದೇಹಿ . ದೇಹದಲ್ಲಿರುವ ಪಂಚೇಂದ್ರಿಗಳ ಕನವರಿಕೆ ಅರಿಷಡ್ವರ್ಗಗಳ ಬಳಲಿಕೆ ಮಾಯವಾಗಿ ಅನುಭಾವ ಅರಿವಿನ ಜ್ಯೋತಿ ಹೊತ್ತುತ್ತದೆ ಭಕ್ತನ ಮನದಲ್ಲಿ. ಸಕಲ ನಿಸ್ಕಲದ ವಿಸ್ತಾರದ ರೂಹಾಗಿ ನಿಲ್ಲುವ ಸದ್ಭಕ್ತ ಶರಣನು ಪಂಚ ಮಹಾಭೂತಗಳ ಶಕ್ತಿಗಳ ಚೈತನ್ಯವನ್ನು ಜಂಗಮ ಚೇತನವನ್ನು ಹೊಂದಿದ ಮಹಾ ಪ್ರಸಾದಿಯಾಗುತ್ತಾನೆ.
ಶರಣಾರ್ಥಿ
————————————-
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group