spot_img
spot_img

ವಚನ ವಿಶ್ಲೇಷಣೆ : ಮತ್ತಿದಿರು ದೈವವುಂಟೆಂದು ಗದಿಯಬೇಡ

Must Read

spot_img
- Advertisement -

ಮತ್ತಿದಿರು ದೈವವುಂಟೆಂದು ಗದಿಯಬೇಡ

ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ,
ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ.
ಸುವರ್ಣ ಒಂದು ಆಭರಣ ಹಲವಾದಂತೆ.
ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ.
ಮತ್ತಿದಿರು ದೈವವುಂಟೆಂದು ಗದಿಯಬೇಡ.
ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ.

ಅರಿವಿನ ಮಾರಿತಂದೆ, ಸಮಗ್ರ ವಚನ ಸಂಪುಟ: 6 ವಚನದ ಸಂಖ್ಯೆ: 526

- Advertisement -

*ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ,*

ಶಿವನ ಆರಾಧಕರಿಗೆ ಕೈಲಾಸವು ಒಂದು ಪುಣ್ಯ ಕ್ಷೇತ್ರ ಅಲ್ಲಿ ಶಿವನಿರುತ್ತಾನೆ ಎಂಬ ಕಲ್ಪನೆ . ಶಿವನ ಮುಕ್ತಿ ಧಾಮ ಕೈಲಾಸ ಪರ್ವತವು . ಇದು ಆದಿಕಾಲದಿಂದಲೂ ನಂಬಿಕೊಂಡು ಬಂಡ ಪ್ರತೀತಿ .
ವೈಷ್ಣವಕ್ಕೆ ವೈಕುಂಠ ,ಪವಿತ್ರ ಪುಣ್ಯಸ್ಥಳ. ವಿಷ್ಣುವಿನ ಆರಾಧಕರು ವೈಕುಂಠದಲ್ಲಿ ವಿಷ್ಣುವಿದ್ದು ತನ್ನ ಪರಮ ಭಕ್ತರನ್ನುಅವರ ಮರಣದ ನಂತರ ಪುಷ್ಪಕ ವಿಮಾನದಿಂದ ವೈಕುಂಠಕ್ಕೆ ಕರೆತರುವನು ಎಂದು ನಂಬುತ್ತಾರೆ ಹೀಗಾಗಿ ಕೈಲಾಸ ಮತ್ತು ವೈಕುಂಠಗಳು ಶಿವ ಮತ್ತು ವಿಷ್ಣುವಿನ ಮುಕ್ತಿಧಾಮಗಳು ಎನ್ನುವ ಪರಿಕಲ್ಪನೆ ಹಿಂದುಗಳಲ್ಲಿದೆ .

*ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ,*

- Advertisement -

ಬೌದ್ಧ ಧರ್ಮಿಯರಿಗೆ ಮೋಕ್ಷಗಾಮಿನಿಯೆಂಬ ವಿಹಾರದ ನೆಲೆಯಿದೆ .ಬೌದ್ಧ ಧರ್ಮಿಯ ರಿಗೂ ಸತ್ತ ನಂತರ ಮೋಕ್ಷದ ಪರಿಕಲ್ಪನೆಯಿದೆ.ಅವರ ಮೋಕ್ಷದ ತಾಣ ಮೋಕ್ಷಗಾಮಿನಿ .ಬೌದ್ಧ ಧರ್ಮದ ಉಲ್ಲೇಖವು ಅರಿವಿನ ಮಾರಿತಂದೆ ಮತ್ತು ಬಸವಣ್ಣನವರ ಒಂದು ವಚನದಲ್ಲಿ ಬರುತ್ತದೆ.ಕೈಲಾಸ ವೈಕುಂಠ ಮತ್ತು ಮೋಕ್ಷಗಾಮಿನಿಯೆಂಬ ಶೈವರ ವೈಷ್ಣವರ ಮತ್ತು ಬೌದ್ಧ ಧರ್ಮಿಯರ
ಮೋಕ್ಷ ಸ್ಥಳಗಳು ಬೇರೆಬೇರೆ ಎಂದು ನಂಬಿದ್ದಾರೆ ಆಯಾ ಧರ್ಮಿಯರು.

*ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ.*

ಆದರೆ ಜಗತ್ತಿನ ಜೈವಿಕ ಭೌತಿಕ ಚಲಶೀಲತೆಗೆ ಬೇಕಾದ ಪಂಚ ಮಹಾಭೂತಗಳ ಪೃಥ್ವಿ ಅಪ್ಪು ತೇಜ ವಾಯು ಆಕಾಶ ತಮ್ಮ ತಮ್ಮೊಳಗೆ ಬೇರೆ ಬೇರೆ ಕಂಡುಬರುವದಿಲ್ಲ. ಪಂಚಮಹಾಭೂತಗಳಲ್ಲಿ ವ್ಯತ್ಯಾಸ ಶ್ರೇಣೀಕೃತ ವರ್ಗಿಕರಣ ಹೀಗೆ ಅವುಗಳು ಬೇರಾದುದಿಲ್ಲ.ಎಲ್ಲ ಧರ್ಮಿಯರಿಗೂ ಗಾಳಿ ಬೆಳಕು ನೀರು ಭೂಮಿ ಅಗ್ನಿ ಬೇಕೇ ಬೇಕು ಅವುಗಳಲ್ಲಿರದ ಯಾವುದೇ ವ್ಯತ್ಯಾಸಗಳು ಕೈಲಾಸ ವೈಕುಂಠ ಮತ್ತು ಮೋಕ್ಷಗಮಿನಿಯಲ್ಲಿ ಕಾಣುವುದು ಉಚಿತವೇ ? ಎಂದಿದ್ದಾರೆ ಅರವಿನ ಮಾರಿತಂದೆ.

*ಸುವರ್ಣ ಒಂದು ಆಭರಣ ಹಲವಾದಂತೆ.*

ಬಂಗಾರವು ಒಂದು ಸುಂದರ ಬೆಲೆ ಬಾಳುವ ಲೋಹ .ಆಭರಣಗಳಿಗೆ ಅಗತ್ಯವಾದ ಶ್ರೇಷ್ಠ ಮೌಲಿಕ ಲೋಹವಾಗಿದೆ.ಬಂಗಾರವನ್ನು ತೆಗೆದುಕೊಂಡು ಬೇರೆ ಬೇರೆ ಆಭರಣಗಳನ್ನು ಮಾಡುವ ಹಾಗೆ ಪಂಚ ಮಹಾಭೂತಗಳಿಂದ ವಿಕಸಿತಗೊಂಡ ಈ ಜೀವ ಜಲವು ಬೇರೆ ಬೇರೆ ಧರ್ಮವನ್ನು ಅನುಸರಿಸಿ ಕೈಲಾಸ ವೈಕುಂಠ ಮತ್ತು ಮೋಕ್ಷಗಾಮಿನಿಯೆಂಬ ಬೇರೆ ಬೇರೆ ಮುಕ್ತಿ ಧಾಮಗಳನ್ನು ಹುಡುಕುವ ಜನರು ಈ ಗಾಳಿ ನೀರು ಬೆಳಕು ಆಕಾಶ ಭೂಮಿ ಅಗ್ನಿಯನು ಒಂದೇಯಾಗಿ ಅನುಭವಿಸುತ್ತಾರೆ. ಅವುಗಳಲ್ಲಿದ್ದ ವ್ಯತ್ಯಾಸಗಳು ಬೇರೆ ಬೇರೆ ಎಂಬ ಕಲ್ಪನೆಗಳು ಜನರಲ್ಲಿ ಏಕೆ .

*ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ.*

ಹೇಗೆ ಬಂಗಾರ ಒಂದೇ ವಸ್ತುವಾಗಿದ್ದರೂ ಬೇರೆ ಬೇರೆ ಆಭರಣಗಳಿಗೆ ಮೂಲವಾಗುತ್ತದೆಯೋ ಅದೇ ರೀತಿಯಲ್ಲಿ ಪಂಚ ಮಹಾಭೂತಗಳಿಂದ ಕೂಡಿದ ಈ ಜಗತ್ತು ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ. ಪರ ಬ್ರಹ್ಮ ಚೈತನ್ಯವೆಂಬುದು ಒಂದೇ ಆಗಿದ್ದು ಬೇರೆ ಬೇರೆ ಧರ್ಮಿಯರ ಮೋಕ್ಷ ಸ್ಥಾನಗಳನ್ನು ಕಂಡಂತೆ ಅವುಗಳಲ್ಲಿ ಭೇದ ಕಾಣುವುದು ಉಚಿತವಲ್ಲ ಎಂದಿದ್ದಾರೆ ಅರಿವಿನ ಮಾರಿ ತಂದೆ

*ಮತ್ತಿದಿರು ದೈವವುಂಟೆಂದು ಗದಿಯಬೇಡ.ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ.*

ಮನುಷ್ಯನಲ್ಲಿರುವ ಜೀವ ಕಳೆ ಚೈತನ್ಯವು ಎಲ್ಲಾ ಮಾನವ ಜೀವಗಳಲ್ಲಿ ಒಂದೇಯಾಗಿರುತ್ತದೆ. ಹಾಗಿದ್ದಾಗ ಅವರಲ್ಲಿನ ಮುಕ್ತಿ ಮಾರ್ಗ ಮೋಕ್ಷದ ಗುರಿಗಳು ಹೇಗೆ ಬೇರೆಯಾಗಿರುತ್ತವೆ ?
ಮನುಷ್ಯನಲ್ಲಿನ ಸದ್ಭಕ್ತನಲ್ಲಿನ ದೈವತ್ವವೇ ದೇವರು.ಹೊರಗಿನ ಬಾಹ್ಯ ದೇವರು ಎಂದು ಭ್ರಮೆ ಬ್ರಾಂತಿಯಲ್ಲಿರುವುದು ಬೇಡಾ .ಅನ್ಯದೇವರೆಂದು ಜಂಬ ಕೊಚ್ಚಿಕೊಳ್ಳಬೇಡ .ಮತ್ತೊಬ್ಬರನ್ನು ನಂಬಿ ಕೆಡಬೇಡ ಸದಾಶಿವಮೂರ್ತಿ ಲಿಂಗವಲ್ಲದಿಲ್ಲಎಂದೆ. ಅರುಹಿನ ಕುರುಹಾದ ಲಿಂಗವು ಕೇವಲ ಲಿಂಗವಲ್ಲ ಅದು ಉಪಾದಿತ ವಸ್ತುವಲ್ಲ ಆದರೆ ಅದು ಜಂಗಮದ ಚೈತನ್ಯದ ಕುರುಹುವಾಗಿದೆ.

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group