ಬೆಳಗಾವಿ – ವಿಶ್ವವಿದ್ಯಾಲಯದ ಸಿಂಡಿಕೇಟ್ ವಿದ್ಯಾ ಮಂಡಳ ಸದಸ್ಯರಾಗಿ ಉನ್ನತ ಶೈಕ್ಷಣಿಕ ಸ್ಥಾನಮಾನಗಳನ್ನು ಗಳಿಸಿದವರು.ವಿಶ್ವವಿದ್ಯಾಲಯದ ಕುಲಪತಿ, ಕುಲ ಸಚಿವ ರೊಂದಿಗೆ ಆಪ್ತತೆ ಸಾಧಿಸಿದವರು. ವಿಶ್ವವಿದ್ಯಾಲಯದಲ್ಲಿ ಅವರ ಮಾತಿಗೊಂದು ಬೆಲೆಯಿತ್ತು ಎಲ್ಲರೊಂದಿಗೆ ಮಾತಿಗಿಳಿಯುವ ಎತ್ತರಕ್ಕೆ ಬೆಳೆದು ನಿಂತಿದ್ದರು. ಅವರೊಂದಿಗೆ ವಾದಿಸುತ್ತಿದ್ದರು. ಚರ್ಚಿಸುತ್ತಿದ್ದರು, ತಮ್ಮ ನಿಲುವು ಪ್ರತಿಪಾದಿಸುತ್ತಿದ್ದರು .ಆದರೆ ಎಂದಿಗೂ ಜಗಳಕ್ಕಿಯುತ್ತಿರಲ್ಲಿಲ್ಲ. ಇದು ತಿಮ್ಮಾಪುರವರ ವಿಶೇಷತೆ. ಯಾರೊಂದಿಗೂ ಹೇಗೆ ವರ್ತಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಈ ವಿವೇಕ ತಿಮ್ಮಾಪುರವರ ಸುತ್ತಬಹುದೊಡ್ಡ ಗೆಳೆಯರ ಬಳಗವನ್ನುರೂಪಿಸಿತು ಎಂದು ಹಿರಿಯ ಸಾಹಿತಿ ಡಾ ವಿ ಎಸ್ ಮಾಳಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲೆಯ ಸಾಹಿತಿಗಳ ಸಾಹಿತ್ಯದ ಚಿಂತನ ಮಂಥನ ಕಾರ್ಯಕ್ರಮ ಬೆಳಗಾವಿ ಜಿಲ್ಲೆಯ ಸಾಹಿತಿಗಳ ನುಡಿ ತೇರಿಗೆ ನೂರೊಂದು ನಮನ ಡಾ ಎಚ್.ಐ.ತಿಮ್ಮಾಪೂರ ಅವರ ಬದುಕು ಬರಹ ಕಾಯ೯ಕ್ರಮ ಕನ್ನಡಭವನ ನೆಹರು ನಗರದಲ್ಲಿ ದಿ 22 ರಂದು ಜರುಗಿತು.ಈ ಸಂದರ್ಭದಲ್ಲಿ ಉಪನ್ಯಾಸವನ್ನು ನೀಡುತ್ತ ಡಾ ವಿ ಎಸ್ ಮಾತನಾಡಿದರು.
ಅತಿಥಿಗಳಾಗಿ ಸುಶೀಲಾ ಗುರವ ಆಗಮಿಸಿದ್ದರು.ಮುಖ್ಯ ಅತಿಥಿಗಳಾಗಿ ಡಾ ಎಚ್ ಐ ತಿಮ್ಮಾಪೂರ ಉಪಸ್ಥಿತರಿದ್ದರು. ಕನ್ನಡ ಸೇವೆಗೆ ಸದಾ ಸಿದ್ಧ. ತನು ಮನ ಧನದಿಂದ ನಾನು ಕನ್ನಡ ಸೇವೆಗೆ ಆಗಮಿಸುವೆನು ಎಂದರು.
ವಿ ಎಂ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು.ಯ ರು ಪಾಟೀಲ ಇಂತಹ ಕಾಯ೯ಕ್ರಮ ಜರುಗಲಿ ಎಂದರು.ಡಾ ಹೇಮಾ ಸೋನಳ್ಳಿ ನಿರೂಪಿಸಿದರು. ಎಂ ವೈ ಮೆಣಸಿನಕಾಯಿ ಪರಿಚಯಿಸಿದರು. ಮಂಗಲಾ ಮೆಡಗುಡ್ಡ ಅಧ್ಯಕ್ಷತೆ ವಹಿಸಿದ್ದರು.ಸುನಿಲ ಹಲವಾಯಿ, ಸ್ವಾಗತಿಸಿದರು. ಬಿ ಬಿ ಮಠಪತಿ ವಂದಿಸಿದರು.
ಯ ರು ಪಾಟೀಲ, ಡಾ ಬಸವರಾಜ ಜಗಜಂಪಿ,ಸುಭಾಸ ಏಣಗಿ,ಸಂಗಮೇಶ ಅರಳಿ,ಸುರೇಶ ನರಗುಂದ,ಮೋಹನ ಗುಂಡ್ಲೂರ,ಬಸವರಾಜ ಸುಣಗಾರ,ಶ್ರೀರಂಗ ಜೋಷಿ ಆನಂದ ಪುರಾಣಿಕ, ಸ ರಾ ಸುಳಕೂಡೆ, ಸಾವಿತ್ರಿ ಹೂತ್ತಗಿಮಠ,ಎಸ್ ಎಂ ಬೆಣ್ಣಿ ವೀಣಾ ರೇಡ್ಡಿ, ವಿಜಯಕುಮಾರ ಮುಚಳಂಬಿ,ಡಾ ಪಾವ೯ತಿ ಪಾಟೀಲ, ಡಾ ಸುನಿಲ ಪರೀಟ,ಡಾ ಎಚ್ ಬಿ ಕೋಲ್ಕಾರ,ಅಂಕಿತಾ ದಳವಾಯಿ,ಶಂಕರ ಕುಂದ್ರಾಳ,ಡಾ ರಾಮಕೃಷ್ಣ ಮರಾಠೆ.ಡಿ ವಿ ಕುಲಕಣಿ೯ ಸೇರಿದಂತೆ ಅನೇಕ ಸಾಹಿತಿಗಳು ಉಪಸ್ಥಿತರಿದ್ದರು