ಬೀದರ: ಲಂಚ ಲಂಚ ಲಂಚ ಕೊಡದೇ ಹೋದರೆ ನಿಮ್ಮ ಕೆಲಸ ಆಗುವುದಿಲ್ಲ.ಬೀದರ್ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರುವ ಸಬ್ ರಿಜಸ್ಟಾರ್ ಕಚೇರಿಯಲ್ಲಿಯೇ ಅನಧಿಕೃತ ವ್ಯಕ್ತಿಗಳ ಹಣ ವಸೂಲಿ ಅಂಧಾ ದರ್ಬಾರ್ ನಡೆಯುತ್ತಿದೆ.
ಅಧಿಕಾರಿಗಳ ಪಕ್ಕದಲ್ಲಿ ಅನಧಿಕೃತ ವ್ಯಕ್ತಿಯನ್ನು ಕೂಡ್ರಿಸಿಕೊಂಡು ಹಣ ವಸೂಲಿ ಮಾಡುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಪುಲ್ ವೈರಲ್ ಆಗಿದ್ದು ಜಿಲ್ಲಾಧಿಕಾರಿ ಕಚೇರಿಯ ಬಣ್ಣ ಬಯಲಾಗಿದೆ.
ಅಂತರ್ಜಾತಿ ವಿವಾಹ ನೊಂದಣಿಗೆ ಖುಲ್ಲಂ ಖುಲ್ಲಾ ಸಾವಿರಾರು ರೂ.ಲಂಚದ ಬೇಡಿಕೆ ವಸೂಲಿ.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಹಿರಿಯ ಉಪ ನೋಂದಣಾಧಿಕಾರಿ ಮತ್ತು ಮದುವೆಗಳ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಖುಲಂ ಖುಲ್ಲಾ ನಡಿತಿದೆ ಹಣ ವಸೂಲಿ. ಅಂತರ್ಜಾತಿ ಮದುವೆ ನೊಂದಣಿ ಮಾಡಲು ಹೋದವರಿಂದ ಹಣ ವಸೂಲಿ ಮಾಡಲಾಗುತ್ತಿದೆ.ಮದುವೆ ನೊಂದಣಿ ವಿಭಾಗದ ಶಹೀನಾಬೇಗಂ ಶಿವಕುಮಾರ್ ಕಂಟಿ ಎಂಬ ಅನಧಿಕೃತ ವ್ಯಕ್ತಿಯನ್ನು ಪಕ್ಕಕ್ಕೆ ಕೂಡಿಸಿಕೊಂಡು ಅವನ ಮುಖಾಂತರ ಹಣ ವಸೂಲಿ ನಂತರ ನೊಂದಣಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಪ ನೋಂದಣಿ ಅಧಿಕಾರಿಗಳ ಕಾರ್ಯಾಲಯದಲ್ಲಿ ನಡೆಯುತ್ತಿರುವ ಲಂಚಾವತಾರಕ್ಕೆ ಜಿಲ್ಲಾಧಿಕಾರಿಗಳು ಬ್ರೇಕ್ ಹಾಕಬೇಕಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ