spot_img
spot_img

ಕೆಎಂಎಫ್ ಕೇಂದ್ರ ಕಛೇರಿಗೆ ಭೇಟಿ ನೀಡಿದ ಆಂಧ್ರಪ್ರದೇಶದ ಸಚಿವೆ ಉಷಾ ಶ್ರೀಚರಣ

Must Read

spot_img
- Advertisement -

ಬೆಂಗಳೂರು – ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರದಂದು ಇಲ್ಲಿಯ ಕೆಎಮ್‍ಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.

ಕೆಎಮ್‍ಎಫ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ ಅವರು ಸಚಿವರನ್ನು ಸ್ವಾಗತಿಸಿದರು.

- Advertisement -

ಆಂಧ್ರಪ್ರದೇಶ ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ವಾಯ್‍ಎಸ್‍ಆರ್ ಸಂಪೂರ್ಣ ಪೋಷಣ ಯೋಜನೆಯು ನವೆಂಬರ್-2016 ರಲ್ಲಿ 13 ಲಕ್ಷ ಲೀಟರ್ ಹಾಲಿನೊಂದಿಗೆ ಆರಂಭಗೊಂಡು ಹಂತ-ಹಂತವಾಗಿ 13 ಜಿಲ್ಲೆಗಳನ್ನು ಒಳಗೊಂಡ 55,600 ಅಂಗನವಾಡಿ ಕೇಂದ್ರಗಳಿಂದ 26 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು 1 ಕೋಟಿ ಲೀಟರ್ ಹಾಲನ್ನು ಕೆಎಮ್‍ಎಫ್‍ನಿಂದ ಪೂರೈಕೆ ಮಾಡಲಾಗುತ್ತಿದೆ. ಕೆಎಮ್‍ಎಫ್‍ನ ನಂದಿನಿ ಯುಎಚ್‍ಟಿ ಹಾಲನ್ನು ಆಂಧ್ರಪ್ರದೇಶಕ್ಕೆ ಸರಬುರಾಜು ಮಾಡಲಾಗುತ್ತಿದೆ.

ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಹಾಲು ಮಂಡಳಿಯ ಉತ್ತಮ ಬಾಂಧವ್ಯ ಮುಂದುವರೆಸುವ ಸಂಬಂಧ ಹಾಗೂ ಹಾಲಿನ ಅಗತ್ಯಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಿನ ಹಾಲು ಪೂರೈಕೆಯ ಬೇಡಿಕೆಯನ್ನು ಸಚಿವರು ಕೆಎಮ್‍ಎಫ್‍ನ ಮುಂದೆ ಇಟ್ಟರು.

200, 500, ಹಾಗೂ 1000 ಮಿಲಿ ಪೊಟ್ಟಣ, ಟೆಟ್ರಾಪ್ಯಾಕ್, ಪ್ಲೆಕ್ಸಿ ಪೊಟ್ಟಣಗಳಲ್ಲಿ ಪೂರೈಕೆಯ ಕಾರ್ಯ, ಕೆಎಮ್‍ಎಫ್ ಹಾಗೂ ಹಾಲು ಒಕ್ಕೂಟಗಳ ಕಾರ್ಯಚಟುವಟಿಕೆಗಳ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಮಹಾಮಂಡಳದ ಪ್ರಗತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

- Advertisement -

ಈ ಸಂದರ್ಭದಲ್ಲಿ ಕೆಎಮ್‍ಎಫ್‍ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group