spot_img
spot_img

ಪಶು ಆಸ್ಪತ್ರೆ ಕಟ್ಟಡ : ಮೌನವಾಗಿ ರಿಬ್ಬನ್ ಕತ್ತರಿಸಿ ನಡೆದ ಉಮೇಶ ಕತ್ತಿ

Must Read

spot_img

ಸಿಂದಗಿ: ಸರಕಾರಿ ಅಧಿಕಾರಿಗಳಿಗೆ ಆಯಾ ಇಲಾಖೆಯ ಕಾರ್ಯಕ್ರಮವಾಗಲಿ, ಕಟ್ಟಡ ಉದ್ಘಾಟನೆ ಮಾಡುವುದೆಂದರೆ ಒಂದು ಹಬ್ಬದ ಸಂಭ್ರಮದ ಹಾಗೆ 2,3 ದಿನಗಳಿಂದ ಇಲಾಖೆಯ ಕಾರ್ಯವೈಖರಿಯನ್ನು ಬದಿಗೊತ್ತಿ ಕಾರ್ಯಕ್ರಮದ ರೂಪರೇಷೆಯನ್ನು ರೂಪಿಸಿ ಹಬ್ಬದ ವಾತಾವರಣ ಸೃಷ್ಟಿಸುತ್ತಾರೆ ಆದರೆ ಉದ್ಘಾಟನೆಗೆ ಅಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರು ಕ್ಷಣಾರ್ಧದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ರೂಪುರೇಷೆಯನ್ನು ಲೆಕ್ಕಿಸದೇ ಅಧಿಕಾರಿಗಳ ಅಹವಾಲನ್ನು ಸ್ವೀಕರಿಸದೇ ತುಟಿ ಬಿಚ್ಚಿ ಕೂಡಾ ಮಾತನಾಡದೇ ಬಂದಾ ಪುಟ್ಟಾ ಹೋದ ಪುಟ್ಟಾ ಎನ್ನುವ ರೀತಿಯಲ್ಲಿ ಫಲಾಯನವಾಗಿದ್ದು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಜುಗರ ಹುಟ್ಟಿಸಿದಂತಾಗಿದೆ.

ಈ ಸಂದರ್ಭದಲ್ಲಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾಮಣ್ಣವರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ (ಆಡಳಿತ)ಡಾ. ಅಶೋಕ ಘೋಣಸಗಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ (ಪಾಲಿಕ್ಲಿನಿಕ್) ಡಾ. ಎಸ್.ಎಸ್.ಹೊಳೆಪ್ಪಗೋಳ, ತಹಶೀಲ್ದಾರ ನಿಂಗಣ್ಣ ಬಿರಾದಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಕೆಆರ್.ಐಡಿಎಲ್ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮರಾಜಪ್ಪ, ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕರಿಗಳಾದ ಡಾ. ಮಾರುತಿ ತಡ್ಲಗಿ, ಡಾ. ಎಂ.ಎಸ್.ಗಂಗನಳ್ಳಿ ಸೇರಿದಂತೆ ಅನೇಕರಿದ್ದರು.

ಪಶು ಇಲಾಖೆ ಸಿಬ್ಬಂದಿ ಪ್ರಭು ಬಿರಾದಾರ  ಸ್ವಾಗತಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!