ಮೂಡಲಗಿ: ಇಲ್ಲಿಯ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಪುರಸಭೆಯ ಆವರಣದಲ್ಲಿ ಅನ್ನದಾಸೋಹ ಮಾಡುವ ಮೂಲಕ ಮಾಸಿಕ ನಾರಾಯಣ ಸೇವಾ ಕಾರ್ಯಕ್ರಮವನ್ನು ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಅನ್ನದಾಸೋಹವು ಪವಿತ್ರವಾದ ಕಾರ್ಯವಾಗಿದೆ. ದಾಸೋಹ ಸೇವೆ ಮತ್ತು ದಾಸೋಹದಲ್ಲಿ ಭಾಗವಹಿಸುವುದು ಎರಡೂ ಪುಣ್ಯದ ಕಾರ್ಯವಾಗಿದೆ’ ಎಂದರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಚಂದ್ರು ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಚಿಕ್ಕೋರ, ಸಾಹಿತಿ ಬಾಲಶೇಖರ ಬಂದಿ, ಸಾಯಿ ಸಮಿತಿಯ ಹನಮಂತ ಸೊರಗಾಂವಿ, ಕೆ.ಆರ್. ಕೊತ್ತಲ, ಡಿ.ಬಿ. ಮುತ್ನಾಳ, ಬಿ.ವೈ. ನಾಯ್ಕ, ಪ್ರೇಮಾ ಸೊರಗಾಂವಿ, ಭಾರತಿ ಮಿಲ್ಲಾನಟ್ಟಿ, ವೀಣಾ ಗಾಡವಿ, ಮಂಜುಳಾ ಪತ್ತಾರ, ರತ್ನವ್ವ ಪತ್ತಾರ, ರಂಗವ್ವ ಬೂದಿಹಾಳ, ಮಲ್ಲವ್ವ ಹೂಗಾರ ಮತ್ತಿತರರು ಇದ್ದರು.