ಮೂಡಲಗಿ: ಬಾಗಲಕೋಟಿ ತೋಟಗಾರಿಕೆ ವಿಶ್ವ ವಿದ್ಯಾಲಯದ ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿ ನಿಲಯಗಳ 2021-22ರ ವಾರ್ಷಿಕೋತ್ಸವ ಸಮಾರಂಭವನ್ನು ರವಿವಾರ ಜೂ.12ರಂದು ಮಧ್ಯಾನ್ಹ 3 ಘಂಟೆಗೆ ಹಮ್ಮಿಕೊಳ್ಳಲಾಗಿದೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ. ಕೆ.ಎಮ್. ಇಂದಿರೇಶ ಅರವರು ಕಾರ್ಯಕ್ರಮ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಭಾರತೀಯ ಆಡಳಿತ ಸೇವೆ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಅಶೋಕ ದಳವಾಯಿ, ಬೆಳಗಾವಿಯ ವಿಮರ್ಶಕಿ ಡಾ. ಮೈತ್ರೇಯಿಣಿ ಗು. ಗದಿಗೆಪ್ಪಗೌಡರ, ಬಾಗಲಕೋಟ ವಿವಿ ತೋಟಗಾರಿಕೆ ವಿಜ್ಞಾನಗಳ ಕುಲಸಚಿವ ಡಾ.ಟಿ.ಬಿ.ಅಲ್ಲೋಳಿ ಹಾಗೂ ಡಾ. ರಾಮಚಂದ್ರ ನಾಯಕ್ ಬಾಗವಹಿಸುವರು, ಮಹಾವಿದ್ಯಾಲಯದ ಡೀನ್ ಡಾ. ಡಾ. ಎಮ್.ಜಿ. ಕೆರುಟಗಿ ಅವರು ಅಧ್ಯಕ್ಷತೆ ವಹಿಸುವರು.