spot_img
spot_img

ಕಲ್ಲೋಳಿ ಮಹಾಲಕ್ಷ್ಮೀ ಸಹಕಾರಿಯ ವಾರ್ಷಿಕೋತ್ಸವ

Must Read

- Advertisement -

ಘಟಪ್ರಭಾ: ಪಟ್ಟಣದ ಕಲ್ಲೋಳಿಯ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯ ವಾರ್ಷಿಕೋತ್ಸವ ಹಾಗೂ ಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ಸೋಮವಾರ ಮೇ.15 ರಂದು ನಡೆಯಿತು. 

ಬಿಡಿಸಿಸಿ ಹಾಗೂ ಸಹಕಾರಿಯ ನಿರ್ದೇಶಕ ಸತೀಶ ಕಡಾಡಿ ಅವರು ಶ್ರೀ ಮಹಾಲಕ್ಷ್ಮೀ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ನೆರವೇರಿಸಿದ ಬಳಿಕ ಶಾಖೆಯ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಸಹಕಾರಿಯ ಪ್ರಗತಿ ಹಾಗೂ ಶಾಖೆಯ ವಾರ್ಷಿಕೋತ್ಸವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಬಳಿಕ ಸಿಹಿ ವಿತರಣೆ ಕಾರ್ಯಕ್ರಮ ಜರುಗಿತು.

ಸ್ಥಳೀಯ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮಚಂದ್ರ ಕೊಡ್ಲಿ, ಸಚಿನ ಖಡಬಡಿ, ಗಣೇಶ ಗಾಣಿಗಾ, ಹಾಲಪ್ಪ ಕರಿಗಾರ, ಮಹಾಂತೇಶ ಉದಗಟ್ಟಿಮಠ,ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ,ಪ್ರಮೋದ ರಾವನ್ನವರ ಶಾಖೆಯ ಸಲಹಾ ಸಮಿತಿ ಸದಸ್ಯರು, ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು, ಗ್ರಾಮಸ್ಥರು, ಇತರರು ಇದ್ದರು.

- Advertisement -

ರಾಜಶೇಖರ ಕುರಬೇಟ ಸ್ವಾಗತಿಸಿದರು,ವಿಠ್ಠಲ ಬುದಿಹಾಳ ಕಾರ್ಯಕ್ರಮ ನಿರೂಪಿಸಿದರು,ಮಲ್ಲು ಮದಿಹಳ್ಳಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ...
- Advertisement -

More Articles Like This

- Advertisement -
close
error: Content is protected !!
Join WhatsApp Group