ಮೂಡಲಗಿ: -ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ೧೮ ನೆಯ ವಾರ್ಷಿಕೋತ್ಸವದ ಸಮಾರಂಭವು ಎಪ್ರಿಲ್,೦೬-೨೦೨೫ ರಂದು ಮುಂಜಾನೆ,೪-೪೫ಕ್ಕೆ ಸುಪ್ರಭಾತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುವುದು.
ಬೆಳಗ್ಗೆ, ೪-೪೫ಕ್ಕೆ ಓಂಕಾರ, ಸುಪ್ರಭಾತ, ವೇದಘೋಷ-ಬೆಳಗ್ಗೆ, ೦೮ಕ್ಕೆ ಶ್ರೀ ಸತ್ಯನಾರಾಯಣ ಪೂಜೆ-ಬೆಳಗ್ಗೆ,೮,೩೦ಕ್ಕೆ ಮಹಾನಾರಾಯಣ ಸೇವೆ-ಬೆಳಗ್ಗೆ,೮,೪೫ಕ್ಕೆ ಪ್ರಶಾಂತಿ ಧ್ವಜಾರೋಹಣ-ಬೆಳಗ್ಗೆ, ೦೯ಗಂಟೆಗೆ ನೋದಣಿ ಮತ್ತು ಉಪಾಹಾರ-ಬೆಳಗ್ಗೆ,೧೦ಗಂಟೆಗೆ ಶ್ರೀ ಸತ್ಯಸಾಯಿ ಭಜನೆ-ಬೆಳಗ್ಗೆ,೧೦-೩೦ಕ್ಕೆ ಮುಖ್ಯ ಕಾರ್ಯಕ್ರಮ, ಬಾಲವಿಕಾಸ ವಿದ್ಯಾರ್ಥಿಗಳಿಂದ ಲಘು ಮನರಂಜನೆ ನಂತರ ಮಹಾ ಮಂಗಳಾರತಿ ಮತ್ತು ಮಧ್ಯಾಹ್ನ, ೦೧-೩೦ಕ್ಕೆ ಮಹಾ ಪ್ರಸಾದ.
ಮೂಡಲಗಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತಾತ್ರೇಯ ಶ್ರೀ ಪಾದಬೋಧ, ಸ್ವಾಮೀಜಿ ಮತ್ತು ಶ್ರೀ ಶ್ರೀ ಶ್ರೀಧರ ಶ್ರೀ ಪಾದಬೋಧ,ಸ್ವಾಮೀಜಿ, ಸುಣಧೋಳಿ ಮಠದ ಶ್ರೀ ಶ್ರೀ ಶಿವಾನಂದ ಮಹಾಸ್ವಾಮಿಗಳರವರ ಸಾನ್ನಿಧ್ಯದಲ್ಲಿ ವಸಂತ ಬಾಳಿಗಾ ಜಿಲ್ಲಾಧ್ಯಕ್ಷ ಶ್ರೀ ಸಾಯಿ ಸೇವಾ ಸಮಿತಿ ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಗಳಾಗಿ ಶ್ರೀ ಸದ್ಗುರು ಮಾತಾ ನೀಲಾಂಬಿಕಾದೇವಿ ಅಧ್ಯಕ್ಷರು ಬಸವಯೋಗ ಮಂಟಪ ಬಳೋಬಾಳ ಹಾಗೂ ಸುರೇಶ ಕಬ್ಬೂರ ಬೆಳಗಾವಿ ವಿಭಾಗದ ರಾಜ್ಯ ಸಂಪನ್ಮೂಲ ವ್ಯಕ್ತಿ.
ಗೌರವಾನ್ವಿತ ಅತಿಥಿಗಳಾಗಿ ಸಂತೋಷ ಪಾರ್ಶಿ ಅಧ್ಯಕ್ಷರು ಆರ್ ಡಿ ಎಸ್ ಶಿಕ್ಷಣ ಸಂಸ್ಥೆ ಮತ್ತು ಅಜಿತ ಮನ್ನಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮೂಡಲಗಿ. ಇನ್ನೂ ಅನೇಕರು ವಾರ್ಷಿಕೋತ್ಸವದ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಲ್ಲಿದ್ದಾರೆಂದು ಶ್ರೀ ಸಾಯಿ ಸೇವಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.