spot_img
spot_img

ಪ್ರಗತಿ ಮಹಿಳಾ ಸಂಘದ ವಾರ್ಷಿಕ ಸಭೆ

Must Read

spot_img
- Advertisement -

ಮೂಡಲಗಿ: ಸಂಘದ ಶೇರುದಾರರು ಪಡೆದುಕೊಂಡ ಸಾಲವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಸಕಾಲದಲ್ಲಿ ಸಾಲವನ್ನು ಮರು ಪಾವತಿ ಮಾಡಿದರೆ ಸಂಘ ಪ್ರಗತಿ ಹೊಂದಲು ಸಾಧ್ಯ ಎಂದು ಪ್ರಗತಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಮಾಳೇದ ಹೇಳಿದರು.

ತಾಲೂಕಿನ ಯಾದವಾಡದ ಪ್ರಗತಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮಹಿಳೆಯು ಎಲ್ಲ ರಂಗಗಳಲ್ಲಿ ಕಾರ್ಯ ಮಾಡುತ್ತಿದ್ದು ಕಾರಣ ತಾವುಗಳು ಸರಕಾರಿ ನೌಕರಿಯನ್ನೆ ಬಯಸದೆ ಸ್ವಂತ ಉದ್ಯೋಗ ಮಾಡಲು ಈ ಪ್ರಗತಿ ಮಹಿಳಾ ಸಂಘ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು, ಕಡಿಮೆ ಅವಧಿಯಲ್ಲಿ ಕಳೆದ ಮಾರ್ಚ ಅಂತ್ಯಕ್ಕೆ ಸಂಘವು 7.80 ಲಕ್ಷ ರೂ ಲಾಭಗಳಿಸಲು ಶೇರುದಾರರ ಮತ್ತು ಮತ್ತು ಸಿಬ್ಬಂದಿವರ್ಗದವರು ಸಹಕಾರ ಹಾಗೂ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಪ್ರಗತಿ ಪಥದತ್ತ ದಾಪುಗಾಲು ಹಾಕುತ್ತಿದೆ ಎಂದ ಅವರು ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕಾಗಿ ಸದಾ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಭೆಯ ಅತಿಥಿಗಳಾಗಿದ್ದ ಯಾದವಾಡ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಜಗದೇವಿ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ, ಸಂಘದಿಂದ ನೀಡಿದ ಹೈನುಗಾರಿಕೆ, ವ್ಯಾಪಾರಸ್ಥರಿಗೆ ವಿವಿಧ ತೆರನಾದ ಸಾಲದ ವಿತರಣೆ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿ ಗ್ರಾಮೀಣ ಪ್ರದೇಶದಲ್ಲಿ ಸಂಘವು ಏಳು ವರ್ಷಗಳಲ್ಲಿ ಸುಮಾರು 7.80 ಲಕ್ಷ ಲಾಭಗಳಿಸಿದನ್ನು ಶ್ಲಾಘಿಸಿದರು

- Advertisement -

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸರೋಜಿನಿ ಯ.ನ್ಯಾಮಗೌಡರ ಅವರು ಸಂಘ ಸಾಲ ಸೌಲಭ್ಯಗಳ ಮಾಹಿತಿ ನೀಡಿ ಬೆಳವಣಿಗೆಯನ್ನು ವಿವರಿಸಿದರು.

ನಿರ್ದೇಶಕಿಯರಾದ ಭಾರತಿ ಮ.ಅಂಬಲಿಮಠ, ವಿದ್ಯಾಶ್ರೀ ಕೃ.ಕೇರಿ, ಮಹಾದೇವಿ ಅ.ರೊಡಗಿ, ಲಕ್ಷ್ಮೀ ಶಿ.ಪಾಟೀಲ, ಡಾ.ಸ್ವಾತಿ ಶಿ.ಹಿರೇಮಠ, ಶೋಭಾ ವಿ.ದಳವಾಯಿ, ಪಾರ್ವತಿ ಲ.ದಾಸರ, ಮಹಾಲಕ್ಷ್ಮೀ ಮೋ.ಬಡಿಗೇರ, ಕಸ್ತೂರಿ ಕರಿಯಪ್ಪ ದಡ್ಡೆನ್ನವರ, ಲಕ್ಷ್ಮೀ ವಿ.ಬಡಿಗೇರ ಮತ್ತಿತರಿದ್ದರು

ಸಂಘದ ಗ್ರಾಹಕರಾದ ಲಕ್ಷ್ಮೀ ಬಡಿಗೇರ ಮತ್ತು ರಷ್ಮಿ ಹಜೇರಿ ಅನಿಸಿಕೆಗಳನ್ನು ಹಂಚಿಕೊಂಡರು, ಸಂಘದ ವ್ಯವಸ್ಥಾಪಕಿ ಅಶ್ವಿನಿ ಈ.ತಿಪ್ಪಾ ಅವರು ವಾರ್ಷಿಕ ವರದಿ ಮಂಡಿಸಿ ನಿರೂಪಿಸಿದರು, ಶೋಭಾ ದಾಸರ ಸ್ವಾಗತಿಸಿದರು, ಮಾಳವ್ವಾ ದಳವಾಯಿ ವಂದಿಸಿದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group