ಸೋಮವಾರ ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆ ಕರೆದ ತಹಸೀಲ್ದಾರ ಶಿವಾನಂದ ಮೇತ್ರೆ
ಬೀದರ – ಮಹಿಳಾ ಸಂಘಗಳಲ್ಲಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದ ಮಹಿಳೆ ಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಲಸೂರ ತಾಲೂಕಿನ ಗಡಿಗೌಂಡಗಾವ ಗ್ರಾಮದಲ್ಲಿ ಬುಧವಾರ ಜರುಗಿದೆ.
ರೇಷ್ಮಾ ಸುನಿಲ್ ಸೂರ್ಯವಂಶ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ.
ಸುಮಾರು 6 ಕ್ಕೂ ಅಧಿಕ ವಿವಿಧ ಸಂಘಗಳಲ್ಲಿ
3 ಲಕ್ಷಗಳಷ್ಟು ಸಾಲ ಮಾಡಿದ ಈಕೆ, ಸಾಲ ತೀರಿಸಲಾಗದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಮಾಧ್ಯಮಗಳಲ್ಲಿ ಭಿತ್ತರವಾದ ಹಿನ್ನೆಲೆ ಶುಕ್ರವಾರ ಸಂಜೆ ಮೃತಳ ನಿವಾಸಕ್ಕೆ ಭೇಟಿ ನೀಡಿದ ತಹಸೀಲ್ದಾರ ಶಿವಾನಂದ ಮೇತ್ರೆ ರವರು
ಕುಟುಂಬಸ್ಥರ ಜೊತೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದು ಕೊಂಡಿದ್ದು ಕೂಡಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸುಮಾರು ಆರು ಖಾಸಗಿ ಫೈನಾನ್ಸ್ ರವರ ಹತ್ತಿರ ಸಾಲ ಪಡೆದಿರುವುದಾಗಿ ತಿಳಿದು ಬಂದಿದ್ದು, ಇದರ ಬಗ್ಗೆ ಹುಲಸೂರ ತಾಲ್ಲೂಕಿನಲ್ಲಿರುವ ಎಲ್ಲಾ ಮೈಕ್ರೋ ಫೈನಾನ್ಸ್ ನವರ ಜೊತೆ ಸೋಮವಾರ ಸಭೆ ನಡೆಸಲು ಉದ್ದೇಶಿಸಿದ್ದು ಆತನಕ ಯಾರಿಗೂ ಕಿರುಕುಳ ನೀಡಬಾರದು. ಒಂದು ವೇಳೆ ಇಂಥಾ ಪ್ರಕರಣಗಳು ಕಂಡು ಬಂದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರರು ತಿಳಿಸಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ