spot_img
spot_img

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ – ಈರಣ್ಣ ಕಡಾಡಿ ಕಿಡಿ

Must Read

spot_img
- Advertisement -

ರೈತ ಉತ್ಪಾದಕ ಕಂಪನಿ ಉದ್ಘಾಟಿಸಿದ ಕಡಾಡಿ

ಮೂಡಲಗಿ: ರೈತರು ಬೆಳೆದ ಫಸಲನ್ನು ಮೌಲ್ಯವರ್ಧನೆ ಮಾಡುವ ಮೂಲಕ ನೇರ ಮಾರುಕಟ್ಟೆ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಸರಕಾರವು 750 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಒಟ್ಟು ರೂ 225 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಬಿಡಿಗಾಸನ್ನು ಬಿಡುಗಡೆ ಮಾಡದೇ ಈ ರೈತ ಉತ್ಪಾದಕ ಸಂಸ್ಥೆಯ ಆಶಯಗಳಿಗೆ ತೀಲಾಂಜಲಿ ನೀಡಿದೆ. ಇದು ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನ-07 ರಂದು ಹಳ್ಳೂರ ಗ್ರಾಮದ ಹಳ್ಳೂರ ರೈತ ಉತ್ಪಾದಕ ಕಂಪನಿಯ ಅನ್ನದಾತ ಅರಶಿನ ಪುಡಿ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಅರಶಿನ ಪುಡಿ ಘಟಕ ನಿರ್ಮಾಣಕ್ಕೆ ಆಯ್.ಸಿ.ಆಯ್.ಸಿ ಬ್ಯಾಂಕ್ ಸುಮಾರು 20 ಲಕ್ಷ ರೂಪಾಯಿಗಳ ಅನುದಾನವನ್ನು ನೀಡುವ ಮೂಲಕ ಈ ಭಾಗದ ರೈತರ ನೆರವಿಗೆ ಬಂದಿರುವುದು ಅತ್ಯಂತ ಶ್ಲಾಘನೀಯ ಕಾರ್ಯವೆಂದು ಕೊಂಡಾಡಿದರು.

- Advertisement -

ಇದುವರೆಗೆ ರೈತ ತಾನು ಬೆಳೆದ ಫಸಲಿಗೆ ಒಂದು ನೂರು ರೂಪಾಯಿ ಬೆಲೆ ಬಂದರೆ ಅದರಲ್ಲಿ ಕೇವಲ 30 ರೂಪಾಯಿ ಮಾತ್ರ ರೈತನಿಗೆ ಸಿಗುತ್ತದೆ. ಉಳಿದ 70 ರೂಪಾಯಿ ಮಧ್ಯವರ್ತಿಗಳ ಪಾಲಾಗುತ್ತಿತ್ತು ಅದನ್ನು ಹೋಗಲಾಡಿಸುವ ಹಿನ್ನೆಲೆಯಲ್ಲಿ ರೈತ ತಾನು ಬೆಳೆದ ಫಸಲನ್ನು ಮೌಲ್ಯವರ್ಧನೆ ಮಾಡುವ ಮೂಲಕ ಉದ್ಯಮಿಯಾಗಬೇಕು ಜೊತೆಗೆ ವ್ಯಾಪಾರಿಯಾಗಬೇಕು ಹಾಗಾದಾಗ ಮಾತ್ರ ರೈತನು ಬೆಳೆದ ಫಸಲಿಗೆ ಯೋಗ್ಯ ಬೆಲೆ ಸಿಗಬಹುದು. ಇದು ರೈತ ಉತ್ಪಾದಕ ಸಂಸ್ಥೆಗಳನ್ನು ಕಟ್ಟಿಬೆಳೆಸುವುದರಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು.

ನೋಂದಣಿಯಾದ ರೈತರಿಂದ ಷೇರುಗಳನ್ನು ಸಂಗ್ರಹಿಸಿ, ಸಂಘದ ಸದಸ್ಯರಿಗೆ ನೇರ ಮಾರುಕಟ್ಟೆ ಸೌಲಭ್ಯಗಳ ಬೆಂಬಲ ನೀಡುವುದು, ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಸೂಕ್ತ ಬೆಲೆ ದೊರಕಿಸಿಕೊಡಲು ಇಂತಹ ರೈತ ಉತ್ಪಾದಕ ಸಂಸ್ಥೆಗಳನ್ನು ಇಡಿ ರಾಜ್ಯದಾದ್ಯಂತ ಬೆಳೆಸಿ, ಉಳಿಸಬೇಕಾಗಿದೆ ಆ ಮೂಲಕ ರೈತರ ಆದಾಯ ದ್ವಿಗುಣ ಮಾಡಲು ಇದು ಒಂದು ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಡವಾಡ ವಿರಕ್ತಮಠದ ಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶ್ರೀಕಾಂತ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಎಫ.ಪಿ.ಓ ಸಿಇಓ ಮಂಜುನಾಥ ಬೆಳಗಲಿ ಸ್ವಾಗತಿಸಿದರು, ಮುರಿಗೆಪ್ಪ ಮಾಲಗಾರ ಕಾರ್ಯಕ್ರಮ ನಿರೂಪಿಸಿದರು ಮಹಾಂತೇಶ ಗಿರೆಣ್ಣವರ ವಂದಿಸಿದರು.

- Advertisement -

ಮಲ್ಲನಗೌಡ ಪಾಟೀಲ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಜನಮಟ್ಟಿ, ಆಯ್.ಸಿ.ಆಯ್.ಸಿ ಬ್ಯಾಂಕ್ ಮ್ಯಾನೇಜರ ರೋಹಿತ ರೆಡ್ಡಿ, ಪ್ರೊಜೆಕ್ಟ ಅಧಿಕಾರಿ ರಾಜೇಸಾಬ ಶಿಕಾರಿ, ಪಿ.ಡಿಒ ರಂಗಣ್ಣ ಗುಜನಟ್ಟಿ, ಗ್ರಾಮ ಪಂಚಾಯತ ಸದಸ್ಯ ಬಸವರಾಜ ಲೋಕನ್ನವರ, ಮಹಾದೇವ ಮಸರಗುಪ್ಪಿ, ಹಣಮಂತ ಗೋಡಿಗೌಡರ, ಪರಮಾನಂದ ಶೇಡಬಾಳಕರ, ಈರಣ್ಣ ಕೌಜಲಗಿ, ಬಾಬು ಅಂಗಡಿ, ಶ್ರೀಶೈಲ ಕೌಜಲಗಿ, ಸದಾಶಿವ ಮಾವರಕರ ಪ್ರಗತಿ ರೈತರಾದ ದುಂಡಪ್ಪ ಕೊಂಗಾಲಿ, ಶಂಕರ ಅಂಗಡಿ, ಸೇರಿದಂತೆ ಸಂಸ್ಥೆಯ ನಿದೇರ್ಶಕರು, ಸ್ಥಳೀಯ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group