spot_img
spot_img

ಭರತನಾಟ್ಯ ಕಲೆಯ ಅನುಷ್ಕಾ ಮರಿಗೌಡ್ರ

Must Read

- Advertisement -

ಧಾರವಾಡದ ರಂಗಾಯಣದಲ್ಲಿ ಡಿಸೆಂಬರ್ ೧೦ ಶನಿವಾರ ಪ್ರೊ.ಸುರೇಶ ಗುದಗನವರ ಅವರ ಸುಪ್ತ ಸಾಧಕರು ಕೃತಿ ಲೋಕಾರ್ಪಣೆ ಜರುಗಿತು.ಈ ಸಂದರ್ಭದಲ್ಲಿ ಅನುಷ್ಕಾ ಮರಿಗೌಡ್ರ ಇವಳ ಭರತನಾಟ್ಯ ಪ್ರದರ್ಶನ ಜರುಗಿತು. ಅದು “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ” ಕನಕದಾಸರ ರಚನೆಯ ಗೀತನಾಟ್ಯವಾಗಿತ್ತು. ಅನುಷ್ಕಾಳ ಆ ನಾಟ್ಯ ಇಡೀ ರಂಗಾಯಣದಲ್ಲಿ ಸೇರಿದ್ದ ವೀಕ್ಷಕರನ್ನು ಕ್ಷಣಕಾಲ ಶಾಂತವಾಗಿದ್ದು ತದೇಕ ಚಿತ್ತದಿಂದಲೇ ಆ ನೃತ್ಯ ನೋಡುತ್ತ ಕುಳ್ಳಿರಿಸಿತ್ತು. ಕಾರಣ ಅವಳ ಆ ಅಭಿನಯ ಮತ್ತು ಭರತನಾಟ್ಯದ ಗೀತೆಯ ಅರ್ಥಗರ್ಭಿತ ಹಾವಭಾವ ಎಲ್ಲರನ್ನೂ ಮಂತ್ರಮುಗ್ದಗೊಳಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ.

ನಮ್ಮ ದೇಶದಲ್ಲಿ ಭರತಮುನಿಗಳು  ನಾಟ್ಯ ಕಲೆಯೇ ಭರತನಾಟ್ಯವಾಗಿದ್ದು ಇಲ್ಲಿ ಅನುಷ್ಕಾಳ ಆಂಗಿಕ ಅಭಿನಯ, ಹಾಡಿನ ಚರಣಗಳ ಅರ್ಥಪೂರ್ಣತೆಯನ್ನು ಹೆಚ್ಚಿಸುವಂತಿತ್ತು. ಕೃಷ್ಣ ದ್ರೌಪತಿಗೆ ಸೀರೆಯನು ನೀಡುವ ದೃಶ್ಯ. ದ್ರೌಪತಿ ತನ್ನ ರಕ್ಷಣೆಗೆ ಕೃಷ್ಣನಲ್ಲಿ ಮೊರೆ ಹೋಗುವ ಸನ್ನಿವೇಶ ಇತ್ಯಾದಿ ತನ್ನ ಅಭಿನಯದ ಮೂಲಕ ಅನುಷ್ಕಾ ಗಮನ ಸೆಳೆದಳು. ಕಾರ್ಯಕ್ರಮ ಮುಗಿದ ತಕ್ಷಣ ನಾನು ಅವರ ತಂದೆ ರವಿ ಮರಿಗೌಡ್ರರನ್ನು ಸಂಪರ್ಕಿಸಿ ಅನುಷ್ಕಾಳನ್ನು ಅಭಿನಂದಿಸಿದೆನು.

ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ತಂದೆ ತಾಯಿಯ ಪ್ರೋತ್ಸಾಹದ ಮೂಲಕ ಅನುಷ್ಕಾ ಭರತನಾಟ್ಯ ವಿದ್ಯೆಯನ್ನು ತನ್ನಲ್ಲಿ ಮೈಗೂಡಿಸಿಕೊಂಡ ಬಗೆಯನ್ನು ಕೇಳಿ ತಿಳಿದುಕೊಂಡೆನು.

- Advertisement -

ಅಂದ ಹಾಗೆ ಅನುಷ್ಕಾಳು ಧಾರವಾಡ ಶಹರದ ಡಾ:ಅಣ್ಣಾಜಿರಾವ್  ಶಿರೂರ್ ರಂಗ ಮಂದಿರ “ಸೃಜನಾ” ಕರ್ನಾಟಕ ಕಾಲೇಜ ಕ್ಯಾಂಪಸ್,  ಇಲ್ಲಿ ಕಲಾರ್ಪಣ ಟ್ರಸ್ಟ್ (ರಿ)ನ ಇವರ ಪ್ರಸ್ತುತಿಯಲ್ಲಿ ದಿನಾಂಕ:೨೧-೦೮-೨೦೨೨ ರಂದು  ತನ್ನ ೧೩ ನೇ ವಯಸ್ಸಿನಲ್ಲಿ ರಂಗ ಪ್ರವೇಶ ಕಾರ್ಯಕ್ರಮ ನೀಡುವ ಮೂಲಕ ರಂಗ ಪ್ರವೇಶ ಮಾಡಿರುವಳು.

ಇವಳ ಈ ರಂಗ ಪ್ರವೇಶದ ಹಿಂದೆ ಅವಿರತ ಭರತನಾಟ್ಯ ಶಿಕ್ಷಣ ಜರುಗಿರುವುದು. ಅನುಷ್ಕಾ ಈಗ ಓದುತ್ತಿರುವುದು ಜೆ.ಎಸ್.ಎಸ್. ಸಂಸ್ಥೆಯ ಪ್ರಾಥಮಿಕ ಶಾಲೆಯ ೭ ನೇ ತರಗತಿಯಲ್ಲಿ ಇವಳ ಆಸಕ್ತಿಗೆ ತಂದೆ ರವಿ ಮತ್ತು ತಾಯಿ ಸಂಜನಾ ಪ್ರೋತ್ಸಾಹ ನೀಡುತ್ತಿದ್ದು ಭರತನಾಟ್ಯದ ವಿದ್ಯೆಯನ್ನು ಕಳೆದ ೮ ವರ್ಷಗಳಿಂದ ಕಲಾರ್ಪಣ ಟ್ರಸ್ಟ್ (ರಿ) ಧಾರವಾಡದ ವಿದೂಷಿ ಸವಿತಾ.ಹೆಗಡೆ ಇವರ ಸಾನ್ನಿಧ್ಯದಲ್ಲಿ  ಅಭ್ಯಸಿಸುತ್ತಿರುವಳು.

ಈ ಅವಧಿಯಲ್ಲಿ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ ಮುಂಬಯಿ ( ಮಹಾರಾಷ್ಟ್ರ) ಇವರು  ನವೆಂಬರ್-೨೦೧೮ ರಲ್ಲಿ ನಡೆಸಲಾದ  “ಪ್ರಾರಂಭಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗ್ರೇಡನೊಂದಿಗೆ ತೇರ್ಗಡೆಯಾಗಿರುತ್ತಾಳೆ.

- Advertisement -

ಅಲ್ಲದೇ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ ಮುಂಬಯಿ(ಮಹಾರಾಷ್ಟ್ರ) ಇವರು ನವೆಂಬರ್-೨೦೧೯ರಲ್ಲಿ ನಡೆಸಲಾದ(“ಪ್ರವೇಶಿಕಾ ಪ್ರಥಮ”) ಡಿಸ್ಟಿಂಕ್ಷನ್ ಗ್ರೇಡನೊಂದಿಗೆ  ತೇರ್ಗಡೆಯಾಗಿರುತ್ತಾಳೆ. ಇದರ ಜೊತೆಗೆ ಕರ್ನಾಟಕ ಪ್ರೌಢಶಿಕ್ಷಣ  ಪರೀಕ್ಷಾ ಮಂಡಳಿ ಇವರು  ಡಿಸೆಂಬರ್ – ೨೦೨೧ ರಲ್ಲಿ ನಡೆಸಲಾದ “ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ” ಹಾಗೂ ಭರತನಾಟ್ಯ ಪ್ರಾಥಮಿಕ ಗ್ರೇಡ (Bharatnatyam junior grade)  ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗ್ರೇಡನೊಂದಿಗೆ  ತೇರ್ಗಡೆಯಾಗಿರುತ್ತಾಳೆ. ಈ ಸಂದರ್ಭದಲ್ಲಿ ಇವಳು ಕರ್ನಾಟಕ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ (Karnataka International Film Festival KIFF) ಇವರು ದಿನಾಂಕ: ೦೯-೧೦-೨೦೨೧ ರಂದು ಹೋಟೆಲ್ ಟ್ರಾವೆಲ್ ಇನ್,  ಸತ್ತೂರ, ಧಾರವಾಡ ಇಲ್ಲಿ  ಆಯೋಜಿಸಿರುವ “ಫ್ಯಾಷನ್ ಶೋ” ದಲ್ಲಿ ಎರಡನೇ ರನ್ನರ್ ಅಪ್ ಮೆಡಲ್ ಪಡೆದಿರುತ್ತಾಳೆ. 

ಇವಳ ಈ ಪ್ರತಿಭೆಗೆ ಬೆನ್ನೆಲುಬಾಗಿ ನಿಂತ ತಂದೆ ತಾಯಿ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಮಗಳ ಭಾಗವಹಿಸುವಿಕೆಗೆ ನೀಡುವ ಪ್ರೋತ್ಸಾಹದಿಂದ ರಂಗ ಸಾಮ್ರಾಟ ಅಭಿನಯ ಶಾಲೆ (ರಿ) ಧಾರವಾಡ ಇವರು ದಿನಾಂಕ: ೧೧-೦೯-೨೦೨೨ ರಂದು ಪಾಟೀಲ ಪುಟ್ಟಪ್ಪ ಸಭಾ ಭವನ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಾಲ ಪ್ರತಿಭೆಗಳಿಗೆ “ರಂಗ ಸಾಮ್ರಾಟ ಪ್ರಶಸ್ತಿ ’’ ಪ್ರದಾನ ಸಮಾರಂಭದಲ್ಲಿ  ಭರತನಾಟ್ಯ ಕೇತ್ರದಲ್ಲಿನ ಸಾಧನೆಗೆ ಪ್ರಶಸ್ತಿ  ಪಡೆಯುವಂತಾಯಿತು.

ನಂತರ ಭಾರತೀಯ ನೃತ್ಯ ಅಕಾಡೆಮಿ ಇವರು ದಿ: ೦೬-೦೮-೨೦೧೬ ರಂದು ಸೃಜನಾರಂಗಮಂದಿರದಲ್ಲಿ ಏರ್ಪಡಿಸಲಾದ “ಮಂದಾರೋತ್ಸವ ಭರತನಾಟ್ಯ” ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸನ್ಮಾನಕ್ಕೆ ಪಾತ್ರಳಾಗಿರುವಳು.

ಚೇತನ ಪ್ರಕಾಶನ, ಕನ್ನಡ ಸಾಹಿತ್ಯ ಪ್ರತಿಷ್ಟಾನ, ಹುಬ್ಬಳ್ಳಿ ಇವರ ಸಾನಿಧ್ಯದಲ್ಲಿ ದಿನಾಂಕ: ೧೦-೦೧-೨೦೨೧ ರಂದು ಧಾರವಾಡ ರಂಗಾಯಣ ಸಮುಚ್ಚಯ  ಭವನದಲ್ಲಿ ಆಯೋಜಿಸಲಾದ  “ಅಖಿಲ ಕರ್ನಾಟಕ ೪ ನೇ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದಕ್ಕಾಗಿ ಗೌರವಿಸಿ ಸನ್ಮಾನಿಸಿದರು.

ಕರ್ನಾಟಕ ಸೋಷಿಯಲ್ ಕ್ಲಬ್ ಹುಬ್ಬಳ್ಳಿ ಇವರ ಸಾನಿಧ್ಯದಲ್ಲಿ ದಿನಾಂಕ: ೨೬-೦೧-೨೦೨೧ ರಂದು  ಹುಬ್ಬಳ್ಳಿ ಶಹರದ ಕನಕದಾಸ ಕಾಲೇಜ ಸಭಾಂಗಣದಲಿ ್ಲ ಗಣರಾಜ್ಯೋತ್ಸವ ಅಂಗವಾಗಿ  ಆಯೋಜಿಸಿರುವ    “ಜನಗಣ ಮನ” ಕಾರ್ಯಕ್ರಮದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶಿಸಿದಕ್ಕಾಗಿ “ಪ್ರಮಾಣ ಪತ್ರ ”ಹಾಗೂ *ಲಿಟಲ್ ಸ್ಟಾರ್* ಪ್ರಶಸ್ತಿ “ ನೀಡಿ ಗೌರವಿಸಿರುವರು.

ಜನನಿ ಪ್ರತಿಷ್ಠಾನ ಸಂಚಾಲಿತ ವೀರ ಸಾವರ್ಕರ್ ಗೆಳೆಯರ ಬಳಗ ಇವರ ಸಾನಿಧ್ಯದ “ಶ್ರೀ ಗಜಾನನ ಉತ್ಸವ ಸಮಿತಿ – ೨೦೨೨” ಮಾಳಮಡ್ಡಿ ಧಾರವಾಡ ಇವರಿಂದ ದಿನಾಂಕ: ೦೧-೦೯-೨೦೨೨ ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶಿಸಿದಕ್ಕಾಗಿ ಸನ್ಮಾನಿಸಿದ ಗೌರವಿಸಿರುವರು.

ಹೀಗೆ ವಿವಿಧ ಆಮಂತ್ರಿತ ಕಾರ್ಯಕ್ರಮಗಳಲ್ಲಿ ಅನುಷ್ಕಾಳ ಭರತನಾಟ್ಯ ಕಾರ್ಯಕ್ರಮಗಳು ಜರಗುತ್ತಿರುವುದು ಅಭಿನಂನಾರ್ಹ ಇವರ ತಂದೆ ರವಿ ಮರಿಗೌಡ್ರ ಸದ್ಯ ದಾವಣಗೆರೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವರು. ತಾಯಿ ಸಂಜನಾ ಮನೆಗೆಲಸದ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವರು. ರವಿ ಹಾಗೂ ಸಂಜನಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಇನ್ನೊಬ್ಬಳು ಆಂಚಲ ಇವಳು ಕೂಡ ೪ ನೇ ತರಗತಿಯಲ್ಲಿ ಓದುತ್ತಿರುವಳು.

ಪ್ರೌಢಶಾಲಾ ಶಿಕ್ಷಕರಾದ ಕುಮಾರ್ ಕುರುಬೆಟ್ ಅವರು ಅನುಷ್ಕಾಳ ರಂಗಪ್ರವೇಶ ಕುರಿತು “ಕಿರಿ ವಯಸ್ಸಿನಲ್ಲಿ ಹಿರಿದಪ್ಪ ಸಾಧನೆ ಸಾಧಿಸಿದ ಬಾಲ ಪ್ರತಿಭೆ.ಬಾಳಿನ ಭವಿತವ್ಯದಲಿ ವಿಶ್ವ ಮಟ್ಟದಲಿ ಮಿಂಚುವ ಮಿಂಚುಳ್ಳಿ.ರಂಗಪ್ರವೇಶದಲಿ ಪ್ರೇಕ್ಷಕರ ಮನಸೂರೆಗೊಂಡ ಕಲಾವಿದೆ.ನಾಟ್ಯ ಸರಸ್ವತಿಯೇ ಧರೆಗಿಳಿದು ನರ್ತಿಸಿದಂತಹ ಕಲಾಪ್ರವೀಣೆ. ಗುರುವನು ಮೀರಿಸುವ ಸಾಮರ್ಥ್ಯವ ಸಾಧಿಸುವ ಸಾಧಕಿ.ಮರಿಗೌಡರ ಮನೆತನದ ವಂಶವ ಬೆಳಗುವ ಶ್ರೇಷ್ಠ ನಂದಾದೀಪ. ತಂದೆ ರವಿ.ತಾಯಿ ಸಂಜನಾರ ಕೀರ್ತಿ ಹೆಚ್ಚಿಸುವ ಕಳಶ. ಅನುದಿನದ ಅನವರತ ಅಕ್ಕರೆಯ ಅವಿಶ್ರಾಂತದ ಅನುಷ್ಕಾ. ಹೆಮ್ಮರವಾಗಿ ಬೆಳೆದು ಈ ನಾಡಿನ ಹೆಮ್ಮೆಯ ಕುವರಿಯಾಗು. ನಿನಗಿದೋ ಯೋಗ ಅವಿಭಕ್ತ ಕುಟುಂಬದ ಶುಭ ಹಾರೈಕೆಗಳು. ಎಂದು ಹಾರೈಸಿರುವರು.

ಇನ್ನೂ ಅನೇಕ ಹಿರಿಯರು ಈ ಬಾಲಪ್ರತಿಭೆಗೆ ತಮ್ಮ ಹಾರೈಕೆಗಳ ಸುರಿಮಳೆಯನ್ನೇ ಸುರಿಸುವ ಮೂಲಕ ಪ್ರೋತ್ಸಾಹ ನೀಡುತ್ತಿರುವರು.ಇದು ಅವರ ತಂದೆ ತಾಯಿಗಳಿಗೆ ಸಲ್ಲುವ ಗೌರವ ಕೂಡ. ಇಂಥಹ ಅನುಷ್ಕಾ ಬೆಳೆಯುತ್ತಿರುವ ಪ್ರತಿಭೆ.

ಇವಳಿಗೆ ಇನ್ನೂ ಹೆಚ್ಚಿನ ಅವಕಾಶ ಸಿಕ್ಕಲ್ಲಿ ರಾಷ್ಟ್ರಮಟ್ಟದ ಪ್ರತಿಭೆಯಾಗಬಲ್ಲಳು ಎಂಬುದಕ್ಕೆ ಶನಿವಾರ ಡಿಸೆಂಬರ್ ೧೦ ರಂದು ರಂಗಾಯಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಜರುಗಿದ ಇವಳ ಭರತನಾಟ್ಯ ಕಂಡಾಗ ಅನ್ನಿಸಿತು. ಈ ಪ್ರತಿಭೆಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗುವಂತಾಗಲಿ ಎಂದು ಈ ಪುಟ್ಟ ಬರಹದ ಮೂಲಕ ಆಶಿಸುವೆನು.


ವೈ.ಬಿ.ಕಡಕೋಳ

- Advertisement -

1 COMMENT

Comments are closed.

- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group