ಬೆಂಗಳೂರು – ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ನಡೆದ 10 ಮೀಟರ್ ಗಳ “ಏರ್ ರೈಫಲ್ ಶೂಟಿಂಗ್ ಅಕಾಡೆಮಿ”ಯನ್ನು ಅರ್ಜುನ ಪ್ರಶಸ್ತಿ ಪುರಸ್ಕೃತರೂ ಹಾಗೂ ಒಲಂಪಿಯನ್ ಅಂತಾರಾಷ್ಟ್ರೀಯ ರೈಫಲ್ ಶೂಟಿಂಗ್ ಕ್ರೀಡಾಪಟು ಪ್ರಕಾಶ್ ನಂಜಪ್ಪ ಉದ್ಘಾಟಿಸಿದರು.
ಶೇಷಾದ್ರಿಪುರಂ ಶಿಕ್ಷಣದತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 73 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ಕ್ರಿಡಾಪಟು ಪ್ರಕಾಶ್ ನಂಜಪ್ಪ ಅವರು ಮಾತನಾಡುತ್ತಾ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈಗಾಗಲೇ ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ಇಲ್ಲಿ ಇಂದು ಸ್ಥಾಪಿಸಲಾಗಿರುವ 10 ಮೀಟರ್ ಗಳ “ಏರ್ ರೈಫಲ್ ಶೂಟಿಂಗ್ ಅಕಾಡೆಮಿ”ಯು ಇದೇ ಮೊದಲು ಶಿಕ್ಷಣ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವುದು. ಬೇರೆ ಎಲ್ಲೂ ಇಲ್ಲ ಹಾಗಾಗಿ ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ವೂಡೇ ಪಿ ಕೃಷ್ಣ ಅವರಿಗೆ ಧರ್ಮದರ್ಶಿಗಳಾದ ಡಬ್ಲ್ಯು.ಡಿ ಅಶೋಕ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಹಾಗೂ ಪ್ರಾಂಶುಪಾಲರಾದ ಪ್ರೊ.ಎನ್.ಎಸ್. ಸತೀಶ್ ಅವರಿಗೆ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಕ್ಯಾಪ್ಟನ್ ಚಿಕ್ಕರಂಗಸ್ವಾಮಿ ಅವರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.
ಶಿಕ್ಷಣ ಸಂಸ್ಥೆಯ ಮುನ್ನಡೆಸುವವರ ಕಾಳಜಿ ಮತ್ತು ದೂರದೃಷ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ನಿಸ್ವಾರ್ಥದಿಂದ ಮಾಡುವ ಇಂತಹ ಐತಿಹಾಸಿಕ ಕೆಲಸಗಳು ದೇಶಸೇವೆಯೇ ಆಗಿವೆ ಎಂದರು,
ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೆಷನ್ ನ ಗೌರವ ಕಾರ್ಯದರ್ಶಿಗಳಾದ ಸಂತೋಷ್ ಮೆನನ್ ಅವರು ಭಾಗವಹಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷರಾದ ಎನ್.ಆರ್.ಪಂಡಿತಾರಾಧ್ಯ, ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶಿಕ್ಷಣ ತಜ್ಞ ನಾಡೋಜ.ಡಾ ವೂಡೇ ಪಿ ಕೃಷ್ಣ ಹಾಗೂ ಧರ್ಮದರ್ಶಿಗಳಾದ ಡಬ್ಲ್ಯು ಡಿ. ಅಶೋಕ್, ಪ್ರಾಂಶುಪಾಲರಾದ ಪ್ರೊ.ಎನ್.ಎಸ್. ಸತೀಶ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಕ್ಯಾಪ್ಟನ್ ಚಿಕ್ಕರಂಗಸ್ವಾಮಿ ಮೊದಲಾದವರು ಭಾಗವಹಿಸಿದ್ದರು.
ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು:
ಬದುಕಿನ ಬವಣೆಗಳಿಗೆ ಸಿಲುಕಿ ದಿನಪೂರ್ತಿ ದುಡಿದು ಬರುವ ಮಕ್ಕಳಿಗೆ ವಿಧ್ಯಾಭಾಸ ಒದಗಿಸುವ ಘನ ಉದ್ದೇಶದಿಂದ ಕೆ.ಎಂ.ನಂಜಪ್ಪನವರು ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜನ್ನು 1971 ರಲ್ಲಿ ಪ್ರಾರಂಭಿಸಿದರು. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಕ್ರೀಡಾ ಕ್ಷೇತ್ರಗಳಲ್ಲಿಯೂ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಸುವರ್ಣಮಹೋತ್ಸವ ವರ್ಷದ ಅಂಗವಾಗಿ ಬೆಳಗಿನ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಯಾವ ವಿಭಾಗದಲ್ಲೂ ಇತರರಿಗಿಂತ ಕಡಿಮೆ ಇರಬಾರದು ಎಂಬ ಉದ್ದೇಶದಿಂದ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ 10 ಮೀಟರ್ ಗಳ ಸುಸಜ್ಜಿತ ಏರ್ ರೈಫಲ್ ಮತ್ತು ಏರ್ ಪಿಸ್ತೂಲ್ ಶೂಟಿಂಗ್ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ.
ಈ ಅಕಾಡೆಮಿ ಆಗಬೇಕು ಎಂದು ತಮ್ಮ ಆಲೋಚನೆ ಮತ್ತು ದೂರದೃಷ್ಟಿಯ ಪರಿಶ್ರಮ ನೀಡಿದವರು ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶಿಕ್ಷಣತಜ್ಞ ನಾಡೋಜ ಡಾ. ವೂಡೇ ಪಿ. ಕೃಷ್ಣ ಹಾಗೂ ಧರ್ಮದರ್ಶಿಗಳಾದ ಡಬ್ಲ್ಯು ಡಿ ಅಶೋಕ್ ಅವರು.
ಪರಿಶ್ರಮ ಮತ್ತು ಸತತ ಪ್ರಯತ್ನಗಳ ಮೂಲಕ ದುಡಿದವರು ಪ್ರಾಂಶುಪಾಲರಾದ ಪ್ರೊ.ಎನ್.ಎಸ್. ಸತೀಶ್ ಅವರು ಹಾಗೂ ದೈಹಿಕಶಿಕ್ಷಣ ವಿಭಾಗದ ನಿರ್ದೇಶಕರಾದ ಕ್ಯಾಪ್ಟನ್ ಸಿ.ಆರ್.ಚಿಕ್ಕರಂಗಸ್ವಾಮಿ ಅವರು ಇವರೆಲ್ಲರ ಶ್ರಮದ ಫಲವಾಗಿ.
ಈ ಶೂಟಿಂಗ್ ಅಕಾಡೆಮಿಯು 10 ಮೀಟರ್ ಏರ್ ರೈಫಲ್ ಮತ್ತು ಏರ್ ಪಿಸ್ತೂಲ್ ಶೂಟಿಂಗ್ ತರಬೇತಿ ಕೇಂದ್ರವಾಗಿದ್ದು, ಪೇಪರ್ ಟಾರ್ಗೆಟ್ ಮತ್ತು ಎಲೆಕ್ಟ್ರಾನಿಕ್ ಟಾರ್ಗೆಟ್‌ಗಳಿಂದ ಸುಸಜ್ಜಿತವಾಗಿದೆ.
ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾನಿಲಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ಗಳಿಗಾಗಿ ವಿದ್ಯಾರ್ಥಿಗಳಿಗೆ ಮತ್ತು ಎನ್‌ಸಿಸಿ ಕೆಡೆಟ್‌ಗಳಿಗೆ ವ್ಯವಸ್ಥಿತ ಮತ್ತು ವೈಜ್ಞಾನಿಕ ತರಬೇತಿಯನ್ನು ನೀಡುವುದು ನಮ್ಮ ಶೂಟಿಂಗ್ ಅಕಾಡೆಮಿಯ ಗುರಿಯಾಗಿದೆ.
ನಾವು ತರಗತಿಯ ಸಮಯದ ನಂತರ ವಿದ್ಯಾರ್ಥಿಗಳು ಮತ್ತು ಓಅಅ ಕೆಡೆಟ್‌ಗಳಿಗೆ ಪ್ರತಿ ದಿನ ನಿಯಮಿತ ವೇದಿಕೆಯನ್ನು ಒದಗಿಸುತ್ತೇವೆ. ಶೂಟಿಂಗ್ ಕ್ರೀಡೆಗಳಲ್ಲಿ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ವಿಶ್ಲೇಷಿಸಲು ನಾವು ನಮ್ಮ ಶೂಟರ್‌ಗಳಿಗೆ ಮಾಸಿಕ ಸ್ಪರ್ಧೆಯನ್ನು ನಡೆಸುತ್ತೇವೆ.
ಪ್ರತಿ ತ್ರೈಮಾಸಿಕ ಕ್ರೀಡಾ ಇಲಾಖೆಯು ನಮ್ಮ ಕಾಲೇಜು ಶೂಟರ್‌ಗಳ ಪ್ರಯೋಜನಗಳಿಗಾಗಿ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶೂಟರ್‌ಗಳನ್ನು ಆಹ್ವಾನಿಸುತ್ತದೆ.
ಕ್ರೀಡಾ ಇಲಾಖೆಯು 2010 ರಿಂದ ಪುರುಷ ಮತ್ತು ಮಹಿಳೆಯರಿಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ಗಳನ್ನು ಮತ್ತು 2018 ರಿಂದ ಅಖಿಲ ಭಾರತ ಅಂತರ ಕಾಲೇಜು ಶೂಟಿಂಗ್ ಚಾಂಪಿಯನ್‌ಶಿಪ್‌ಗಳನ್ನು ನಿಯಮಿತವಾಗಿ ನಡೆಸುತ್ತಿದೆ.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಆಯೋಜಿಸಿದ ಕರ್ನಾಟಕ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ಗಳು, ದಕ್ಷಿಣ ವಲಯ ಶೂಟಿಂಗ್ ಚಾಂಪಿಯನ್‌ಶಿಪ್‌ಗಳು ಮತ್ತು ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ನಮ್ಮ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪ್ರಿಯಾ ಅವರು 2021 ರಲ್ಲಿ ದಕ್ಷಿಣ ಅಮೆರಿಕಾದ ಪೆರುವಿನ ಲಿಮಾದಲ್ಲಿ ನಡೆದ 10 mtr ಏರ್ ಪಿಸ್ತೂಲ್ ಜೂನಿಯರ್ ವರ್ಲ್ಡ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು.