spot_img
spot_img

ರಾಮ ಭಕ್ತರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವೆ: ಶಾಸಕ ಶರಣು ಸಲಗಾರ

Must Read

- Advertisement -

ಬೀದರ: ನಾನೊಬ್ಬ ಅಪ್ಪಟ ಶ್ರೀರಾಮನ ಭಕ್ತ. ಹಿಂದೂ ಕಾರ್ಯಕರ್ತ. ರಾಮನ ಮೇಲಿನ ಭಕ್ತಿಯಿಂದಲೇ ಎಲ್ಲಾ ಭಕ್ತರ ಸಮ್ಮತಿಯಿಂದ ಶ್ರೀ ರಾಮನ ತೊಡೆಯೇರಿ ಮಾಲೆ ಹಾಕಿದ್ದೇನೆ. ಅದರಿಂದ ಭಕ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ್ ಹೇಳಿದ್ದಾರ.

ಶ್ರೀ ರಾಮ ನವಮಿಯಂದು ರಾಮನ ಪ್ರತಿಮೆಗೆ ಬೃಹತ್ ಮಾಲೆ ಹಾಕುವಾಗ ರಾಮನ ತೊಡೆಯ ಮೇಲೆ ಹತ್ತಿ ಮಾಲೆ ಹಾಕಿದ್ದ ಶರಣು ಸಲಗರ ಕಾರ್ಯದಿಂದ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪತ್ರಕರ್ತರೊಡನೆ ಅವರು ಮಾತನಾಡಿ, ನಾನೊಬ್ಬ ಹಿಂದೂ ಕಾರ್ಯಕರ್ತ, ಅಪ್ಪಟ ರಾಮನ ಭಕ್ತ.

ಅತಿಯಾದ ಉತ್ಸಾಹದಿಂದ ರಾಮ ನವಮಿ ಆಚರಿಸುವಾಗ ತೊಡೆಯ ಮೇಲೆ ಹತ್ತಿ ನಿಂತಿದ್ದು ನಿಜ. ಇದರಲ್ಲಿ ಯಾವ ದುರುದ್ದೇಶವೂ ಇಲ್ಲ. ಶ್ರೀ ರಾಮನಿಗೆ ಹಾರ ಹಾಕಿ, ಆರತಿ ಮಾಡಿ ಕೆಳಗಿಳಿದು ಆತನ ತೊಡೆ, ಪಾದ ಮುಟ್ಟಿ ಭಕ್ತಿಯಿಂದ ನಮಸ್ಕಾರ ಮಾಡಿ ಕೆಳಗಿಳಿದಿದ್ದೇನೆ ಎಂದರು.

- Advertisement -

ಕಾದಿರುವಳು ಶಬರಿ ರಾಮ ಬರುವನೆಂದು. ಶಬರಿ ಹೇಗೆ ರಾಮನಿಗಾಗಿ ಕಾಯುತ್ತ ಪ್ರತಿಯೊಂದನ್ನು ಹಣ್ಣನ್ನು ಕಚ್ಚುವ ಮೂಲಕ ಒಳ್ಳೆಯ ಫಲಗಳನ್ನು ರಾಮನಿಗೆ ತೆಗೆದಿಡುತ್ತಾಳೆ. ಅದೇ ರೀತಿ ನಾನೊಬ್ಬ ಹಿಂದೂ ಕಾರ್ಯಕರ್ತ ಶ್ರೀ ರಾಮನ ಅಪ್ಪಟ ಭಕ್ತ. ಅತಿಯಾದ ಉತ್ಸಾಹ ಮತ್ತು ಉಲ್ಲಾಸ ದೊಂದಿಗೆ  ರಾಮನವಮಿಯನ್ನು ಆಚರಿಸುವಾಗ ಹೀಗಾಗಿದೆ.

ಕೆಲವು ಹಿತ ಶತ್ರುಗಳು ನಮ್ಮನ್ನು ಕಂಡರೆ ಆಗಲಾರದವರು ಈ ರೀತಿಯಾಗಿ ಅಪಪ್ರಚಾರ ಮಾಡುತ್ತಿದ್ದಾರೆ.ನಾನು ಶ್ರೀರಾಮನ ತೊಡೆಯ ಮೇಲೆ ನಿಂತಿದ್ದು ನಿಜ ಪೂಜೆ ಮಾಡಿದ್ದು ಮಾಲಾರ್ಪಣೆ, ಆರತಿ ಮಾಡಿದ ನಂತರ ಕೆಳಗಿಳಿದು ಅವರ ತೊಡೆ ಮುಟ್ಟಿ ಹಣೆ ಹಚ್ಚಿ ನಮಸ್ಕಾರ ಮಾಡಿದ್ದೇನೆ.

ಇಷ್ಟಾಗಿಯೂ ನಾಡಿನ ರಾಮ ಭಕ್ತರಿಗೆ ನಾನು ತಪ್ಪಾಗಿ ನಡೆದುಕೊಂಡಿದ್ದರೆ ಈ ನಾಡಿನ, ಈ ದೇಶದ ಸಮಸ್ತ ರಾಮಭಕ್ತರಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸುತ್ತೇನೆ ಎಂದು ಶಾಸಕ ಶರಣು ಸಲಗರ ಕ್ಷಮೆ ಯಾಚಿಸಿದರು.

- Advertisement -

 ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group