ಬಾಲಕಿಯರ ಅತ್ಯಾಚಾರ ಖಂಡಿಸಿ ದಸಂಸದಿಂದ ಮನವಿ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಸಿಂದಗಿ: ಹುಣಸಿಗಿ ಹಾಗು ಕುದುರಿ ಸಾಲವಾಡಗಿ ಗ್ರಾಮದ ಬಡ ಬಾಲಕಿಯರ ಅತ್ಯಾಚಾರ ಕೊಲೆ ಖಂಡಿಸಿ ದಲಿತ ಸಂಘರ್ಷ ಸಮಿತಿ (ಸಮತಾವಾದ) ಸಂಘಟನೆಯ ಕಾರ್ಯಕರ್ತರು ತಾಲೂಕಿನ ಮೋರಟಗಿ ಗ್ರಾಮದ ಹೊರ ಪೊಲೀಸ ಠಾಣೆ ಅಧಿಕಾರಿ ಶಂಕರಲಿಂಗ ಸಾಲೋಟಗಿ ಮುಖಾಂತರ ಮೂಲಕ ಮನವಿ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿ ಸಮತಾವಾದ ಜಿಲ್ಲಾ ಸಂಚಾಲಕ ಧರ್ಮರಾಜ ಯಂಟಮಾನ ಮಾತನಾಡಿ, ಹುಣಸಿಗಿ ಕುದುರಿ ಸಾಲವಾಡಗಿ ಗ್ರಾಮದ ಬಡ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳನ್ನು ಕೂಡಲೆ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಿಜಯಪೂರ ಜಿಲ್ಲೆಯಲ್ಲಿ ಹಿಂದೆ ಜರುಗಿದ ಘಟನೆಗಳಿಗೆ ಸ್ಪಂದಿಸುವಂತೆ ಹಲವು ಬಾರಿ ಮನವಿ ಕೊಟ್ಟರು ಮತ್ತೆ ಮತ್ತೆ ಇಂತಹ ಘಟನೆಗಳು ಜರುಗುತ್ತಿರುವುದು ದುರದೃಷ್ಟಕರ ಕುಮಾರಿ ಸಂಗೀತಾ, ರೇಣುಕಾ, ಪ್ರೀತಿ ಎಂಬ ಬಾಲಕಿಯರ ಹತ್ಯೆ ಮಾಡಿದ ಕಾಮುಕ ವ್ಯಾಘ್ರರು ಎಷ್ಟೆ ಪ್ರಭಾವಿಯಾಗಿರಲಿ ಅವರನ್ನು ಬಂಧಿಸಿ ಕಠಿಣವಾಗಿ ಶಿಕ್ಷಿಸಿ ಎನ್ ಕೌಂಟರ ಮಾಡಲು ಪೊಲೀಸ ಇಲಾಖೆಗೆ ಆದೇಶ ನೀಡಬೇಕು ಆಗ ಮುಂದೆ ಇಂಥಾ ಘಟನೆಗಳು ನಡೆಯದಂತೆ ಕ್ರಮ ತಗೆದುಕೊಂಡರೆ ಮಾತ್ರ ಬಾಲಕಿಯರ ಆತ್ಮಕ್ಕೆ ಶಾಂತಿ ಸಿಗುವುದು. ಹೆತ್ತವರು ಮಕ್ಕಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಅವರ ನೋವಿಗೆ ಸ್ಪಂದಿಸಿ ಆರ್ಥಿಕವಾಗಿ ಮತ್ತೆ ಚೇತರಿಸಿ ಕೊಳ್ಳಲು ರೂ.50 ಲಕ್ಷ ಪರಿಹಾರ ಒದಗಿಸುವ ಮುಖಾಂತರ ನೊಂದ ಕುಟುಂಬಗಳಿಗೆ ಸರಕಾರ ನೆರವಿನ ಆಸರೆ ಒದಗಿಸಿ ಕೊಡಬೇಕು ಹಾಗೂ ಇದರ ಮಧ್ಯ ಕರೋನಾ ಮಹಾಮಾರಿ ವೈರಸ್ ತಡೆಗೆ ಪೊಲೀಸ ಇಲಾಖೆಗೆ ಹೆಚ್ಚುವರಿ ಅಧಿಕಾರ ನೀಡಬೇಕು ಕಳ್ಳನಿಗೊಂದು ಪಿಳ್ಳೆ ನೆಪ ಮಾಡಿ ಕೊಂಡು ಅನವಶ್ಯಕವಾಗಿ ರಸ್ತೆ ಮಧ್ಯೆ ಬಂದವರಿಗೆ ಕಾನೂನು ಕ್ರಮ ಜರುಗಿಸಲು ಅನುವು ಮಾಡಿ ಕೊಡುವ ಮೂಲಕ ಕರೋನಾ ವೈರಸ್ ಹಾವಳಿ ತಡೆಗಟ್ಟಬೇಕು ಎಂದರು.

- Advertisement -

ಈ ಸಂದರ್ಭದಲ್ಲಿ ನಿಂಗರಾಜ ವಾಲಿಕಾರ, ಸಿದ್ಧಣ್ಣ ಐರೋಡಗಿ, ರವಿಕಾಂತ ನಡುವಿನಕೇರಿ, ವಿದ್ಯಾಧರ ಮಳಗಿ, ಯಲ್ಲಪ್ಪ ಕಕ್ಕಳಮೇಲಿ ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!