spot_img
spot_img

ಪ್ರೇಮ ಕವಿಯ ಮನೆ ಪುನಶ್ಚೆತನಕ್ಕೆ ಮನವಿ

Must Read

ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಬಾಲ್ಯದ ಮನೆ ಶಿಥಿಲಾವಸ್ಥೆಯಲ್ಲಿದ್ದು, ಮನೆಯನ್ನು ಶೀಘ್ರವಾಗಿ ದುರಸ್ಥಿಗೊಳಿಸಿ ಕೆ.ಎಸ್.ನ.ಸ್ಮಾರಕ ಮಾಡಲು ಮನವಿ.

ಕೆ.ಎಸ್.ನರಸಿಂಹಸ್ವಾಮಿ ಅವರು ಕನ್ನಡ ಕಾವ್ಯ ಲೋಕದ ಹಿರಿಯ ಕವಿ. ತಮ್ಮ ದಾಂಪತ್ಯ ಕವನಗಳ ಮೂಲಕ ಕಾವ್ಯ ಕ್ಷೇತ್ರಕ್ಕೆ ಮೆರುಗು ತಂದವರು.ಅವರು ರಚಿಸಿದ ಮೈಸೂರು ಮಲ್ಲಿಗೆ ಕೃತಿಯು ಇಪ್ಪತೈದಕ್ಕೂ ಹೆಚ್ಚು ಬಾರಿ ಪುನರ್ಮುದ್ರಣ ಕಂಡು ದಾಖಲೆ ಸ್ಥಾಪಿಸಿದೆ.ಅವರು ಇಪ್ಪತೈದಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. 1990 ರಲ್ಲಿ ಮೈಸೂರಿನ ಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, 1992 ರಲ್ಲಿ ಅತ್ಯುತ್ತಮ ಗೀತರಚನೆಗೆ ರಾಷ್ಟ್ರೀಯ ಪ್ರಶಸ್ತಿ, 1995 ರಲ್ಲಿ ಪಂಪ ಪ್ರಶಸ್ತಿ ,1999 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,2000 ದಲ್ಲಿ ಗೊರೂರು ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ಇವರು ಗಳಿಸಿದ್ದಾರೆ.

ಇಂತಹ ಹಿರಿಯ ಕವಿಗಳು ಜನಿಸಿದ್ದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದಲ್ಲಿ.ಇವರು ಜನಿಸಿದ, ಬಾಲ್ಯವನ್ನು ಕಳೆದ ಇವರ ಮನೆ ಇದೀಗ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಗಳಿಗೆಯಲ್ಲಾದರೂ ಕುಸಿದು ಬೀಳುವ ಹಂತ ತಲುಪಿದೆ. ಸುಮಾರು ನೂರು ವರ್ಷಗಳಿಗಿಂತಲೂ ಹಳೆಯದಾದ ಈ ಮನೆಯ ಒಂದು ಪಾರ್ಶ್ವ ಈಗಾಗಲೇ ಕುಸಿದಿದೆ. ಮನೆಯ ಮೇಲ್ಚಾವಣಿ ಮುರಿದು ಬೀಳುವ ಹಂತದಲ್ಲಿದೆ. ಪ್ರೇಮಕವಿ ಅವರು ತಮ್ಮ ಬಾಲ್ಯವನ್ನು ಕಳೆದ ಈ ಮನೆಯನ್ನು ಕೂಡಲೇ ಸರ್ಕಾರ ಕ್ರಮಕೈಗೊಂಡು ಆದಷ್ಟು ತುರ್ತಾಗಿ ಕೆ.ಎಸ್.ನ.ಸ್ಮಾರಕವಾಗಿ ಪರಿವರ್ತಿಸಬೇಕೆಂದು ಹಿರಿಯ ಸಾಹಿತಿ ,ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ರಾಜ್ಯ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅವರಿಗೆ ವಿವರವಾದ ಪತ್ರವೊಂದನ್ನು ಬರೆದಿರುವ ಅವರು ಕಿಕ್ಕೇರಿ ಗ್ರಾಮದ ಬಸವೇಶ್ವರ ದೇವಾಲಯದಿಂದ ಮುಖ್ಯ ರಸ್ತೆಯ ವರೆಗಿನ ಗ್ರಾಮದ ಪ್ರಮುಖ ರಸ್ತೆಗೆ ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರು ನಾಮಕರಣ ಮಾಡಿದ್ದಾರೆ.ಅದೇ ರೀತಿ ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಕ್ಕೆ ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರು ನಾಮಕರಣ ಮಾಡಿದ್ದಾರೆ. ಇದು ಶ್ಲಾಘನೀಯ ಸಂಗತಿ.

ಆದರೆ ಕೆ.ಎಸ್.ನರಸಿಂಹಸ್ವಾಮಿ ಅವರ ಮನೆಯು ಇದೀಗ ಸಂಪೂರ್ಣ ಕುಸಿಯುವತ್ತ ಹೊರಟಿರುವುದು ಕನ್ನಡಿಗರಿಗೆ ಅತ್ಯಂತ ನೋವು ಉಂಟು ಮಾಡಿದೆ. ಈ ಮನೆಯ ಮಾಲೀಕತ್ವವು ಹಾಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದು, ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಂಡು ಸದರಿ ಮನೆಯನ್ನು ಕೆ.ಎಸ್.ನರಸಿಂಹಸ್ವಾಮಿ ಅವರ ಸ್ಮಾರಕವಾಗಿ ಪರಿವರ್ತಿಸಬೇಕು. ಕವಿಶೈಲದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸ್ಮಾರಕ , ಮೇಲುಕೋಟೆಯಲ್ಲಿ ಹಿರಿಯ ಕವಿ ಪು.ತಿ.ನ ಅವರ ಸ್ಮಾರಕ ಭವನ ಇರುವಂತೆಯೇ ಕಿಕ್ಕೇರಿಯಲ್ಲಿ ಕೆ.ಎಸ್.ನ ನೆನಪಿನ ಸ್ಮಾರಕ ಭವನ ನಿರ್ಮಿಸಬೇಕು. ಆಗ ಮಾತ್ರ ಹಿರಿಯ ಕವಿ ಕೆ.ಎಸ್.ನ. ಅವರ ಸಾಹಿತ್ಯ ಕೃಷಿಗೆ ಗೌರವ ತೋರಿಸಿದಂತಾಗುತ್ತದೆ ಎಂದು ಆಗ್ರಹಪಡಿಸಿದ್ದಾರೆ.

ಅದೇ ರೀತಿ ಕಿಕ್ಕೇರಿಯ ಸ್ವಾಗತ ಕಮಾನಿನಲ್ಲಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿಯವರ ಹುಟ್ಟೂರಿಗೆ ಸುಸ್ವಾಗತ ಎಂಬ ಫಲಕ ಅಳವಡಿಸಲಾಗಿದ್ದು, ಮಳೆ, ಗಾಳಿ,ಧೂಳುಗಳಿಂದಾಗಿ ಈ ಸ್ವಾಗತ ಫಲಕವೂ ಸಹ ಹೊಳಪು ಕಳೆದುಕೊಂಡಿದೆ. ಇದನ್ನು ಮತ್ತೆ ಅಳವಡಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದವರು ಆಗ್ರಹ ಪಡಿಸಿದ್ದಾರೆ.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!