spot_img
spot_img

ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆ ಈಡೇರಿಸಲು ಮನವಿ

Must Read

spot_img
- Advertisement -

ಮೂಡಲಗಿ: ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯನ್ನು ಶೀಘ್ರವಾಗಿ ಮಾಡುವಂತೆ ಮನವಿಯನ್ನು ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿoದ ತಹಶೀಲ್ದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಿದ್ದಾರೆ.

ಅವರು ಮನವಿಯಲ್ಲಿ ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ಪ್ರಮುಖ ಬೇಡಿಕೆಗಳಾದ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡುವದು, ರಾಜ್ಯದ ದೈಹಿಕ ಶಿಕ್ಷಣ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ೨೦೦೬ರಲ್ಲಿ ಪ್ರೊ. ಎಲ್ ಆರ್ ವೈದ್ಯನಾಥನ್‌ರವರ ಅಧ್ಯಕ್ಷತೆಯ ದೈಹಿಕ ಶಿಕ್ಷಣ ತಜ್ಞರನ್ನು ನೇಮಿಸಿದ ಸಮಿತಿ, ಡಾ.ಆನಂದ್ ನಾಡಿಗೆರ ಅಧ್ಯಕ್ಷತೆಯ ಸಮಿತಿಯ ೧೪ ಅಂಶಗಳನ್ನು ಶಿಫಾರಸ್ಸು ಮಾಡಿತ್ತು.

ಶಿಫಾರಸ್ಸನ್ನು ಸರ್ಕಾರವು ಸಂಪೂರ್ಣವಾಗಿ ಒಪ್ಪಿಕೊಂಡು ಕ್ಯಾಬಿನಟ್ ಅನುಮೋದನೆ ಪಡೆದು ಪದನಾಮವನ್ನು “ಸಹ ಶಿಕ್ಷಕರು” (ದೈಹಿಕ ಶಿಕ್ಷಣ) ಎಂದು ಪರಿಗಣಿಸಿ ಸಹ ಶಿಕ್ಷಕರಿಗೆ ದೊರೆಯುವ ಎಲ್ಲಾ ಸೌಲಭ್ಯವನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೂ ನೀಡಲು ತಿಳಿಸಿತ್ತು.

- Advertisement -

ಭರವಸೆ ಸಮಿತಿ ೨೦೧೮ರ ಅನುಮೋದನೆಯನ್ನು ನೀಡಿ, ಕಡತ ಸಿದ್ಧಪಡಿಸಿತು. ಈಗಾಗಲೇ ಭಾರತದ ಹಲವು ರಾಜ್ಯಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರನ್ನಾಗಿ ಪರಿಗಣಿಸಿ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡುವ ಪುಕ್ರಿಯೆ ಇದೆ. ಬಹಳಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಇಲ್ಲದ ಫಿಟ್ ಇಂಡಿಯಾ, ಯೋಗ ಮತ್ತು ದೈಹಿಕ ಶಿಕ್ಷಣ ಪಠ್ಯದಿಂದ ಮಕ್ಕಳು ವಂಚಿತರಾಗಿರುವುದನ್ನು ತಪ್ಪಿಸಲು ಪ್ರತಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ,ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಮಾಡುವುದರ ಮೂಲಕ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅನುವು ಮಾಡಿಕೊಡುವಂತೆ ಸಂಘದ ವತಿಯಿಂದ ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಬಿಇಒ ಅಜಿತ ಮನ್ನಿಕೇರಿ, ತಹಶೀಲ್ದಾರ ಕಛೇರಿಯ ಶಿರಸ್ತೆದಾರ ಐ.ಎಮ್ ನಾಯಕರ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ಬಿ ಹಳಿಗೌಡರ, ಉಪಾಧ್ಯಕ್ಷ ಟಿ.ಜಿ ಘಂಟಿ, ಪ್ರಧಾನ ಕಾರ್ಯದರ್ಶಿ ಎಲ್.ಎ ಮೇಕನಮರಡಿ, ಖಜಾಂಜಿ ಕೆ.ಬಿ ಯಡಹಳ್ಳಿ, ಜಂಟಿ ಕಾರ್ಯದರ್ಶಿ ಎಮ್.ಎಮ್ ಕೊಕಟನೂರ, ಕೆ.ಎಚ್ ಪಾಟೀಲ, ಆರ್.ಎಮ್ ತೆಲಸಂಗ, ಎಮ್ ಎಸ್ ಮುತ್ತೆನ್ನವರ, ಡಿ.ಎಸ್ ಮಾಳಗಿ, ಶೇಖರ ಕುದರಿ ಮತ್ತಿತರರು ಇದ್ದರು.

- Advertisement -
- Advertisement -

Latest News

ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

ಬೆಳಗಾವಿ - ತಾಲೂಕಿನ ಹೊಸ ಇದ್ದಲಹೊಂಡ ಶಿವಾಪೂರ ಸರಕಾರಿ ಪ್ರೌಢ ಶಾಲೆಯ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ಶ್ರೀಮತಿ ಜಿ ಬಿ ಸುಗತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group