ಬೆಂಗಳೂರುಃ ರಾಜ್ಯದಲ್ಲಿ ಸೇವೆಯಲ್ಲಿರುವ ಸಮನ್ವಯ ಶಿಕ್ಷಣದ ವಿಕಲಚೇತನ ಸಂಪನ್ಮೂಲ ಶಿಕ್ಷಕರ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿಯವರಿಗೆ ಸಭೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವಂತೆ ವಿಜಯಪುರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಶೆಡಶ್ಯಾಳ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಂ.ಗದಗೇರಿ ಈಗಾಗಲೇ ವಿಶೇಷ ಶಿಕ್ಷಕರ ಹುದ್ದೆಯ ಕುರಿತು ಸರಕಾರ ಹಮ್ಮಿಕೊಂಡ ಚಟುವಟಿಕೆಗಳನ್ನು ಕುರಿತು ತಿಳಿಸಿ ಎರಡು ವರ್ಷದ ಹಿಂದೆ ಎಫ್.ಟಿ.ಎ. ನೀಡಿದ್ದು ಕಳೆದ ಎರಡು ವರ್ಷಗಳಿಂದ ನೀಡಿಲ್ಲ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿ ಎಫ್.ಟಿ.ಎ ನೀಡುವಂತೆ ಸಹಕರಿಸುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಶಾಲಿನಿ, ಸಾಮಾನ್ಯ ಬಿ.ಈಡಿ ಮತ್ತು ವಿಶೇಷ ಬಿ.ಈಡಿ.ಗೂ ಇರುವ ಸಾಮ್ಯತೆ ಕುರಿತಂತೆ ತಿಳಿಸಿ ಪದೋನ್ನತಿ ಸಂದರ್ಭದಲ್ಲಿ ವಿಶೇಷ ಬಿ.ಈಡಿ ಮತ್ತು ಸಾಮಾನ್ಯ ಬಿ.ಈಡಿ ಎರಡನ್ನೂ ಸಮಾನವಾಗಿ ಪರಿಗಣಿಸಿ ಸಿ.ಆಂಡ್ ಆರ್ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡುವ ಮೂಲಕ ನಮಗೂ ಬಡ್ತಿ ನೀಡುವ ಮೂಲಕ ಅವಕಾಶ ನೀಡಲು ಕ್ರಮ ಕೈಗೊಳ್ಳಲು ತಿಳಿಸಿದರು.
ರಾಜ್ಯಾಧ್ಯಕ್ಷರಾದ ಎಸ್.ಬಿ.ಗೌಡ ಮಾತನಾಡಿ “ ಈಗ ನಾವು ನೀಡುತ್ತಿರುವ ಮನವಿಯ ಅಂಶಗಳು ನ್ಯಾಯ ಸಮ್ಮತವಾಗಿದ್ದು ತಾವು ಇಲಾಖೆಯ ಮುಖ್ಯಸ್ಥರೊಂದಿಗೆ ಈ ಸಂಗತಿಗಳನ್ನು ಚರ್ಚಿಸುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಷಡಕ್ಷರಿಯವರು,ನಾಳೆಯೇ ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ತಿಳಿಸಿ ಅವುಗಳನ್ನು ಈಡೇರಿಸುವಂತೆ ತಿಳಿಸುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಕೇಂದ್ರ ಸಂಘದ ಗೌರವಾಧ್ಯಕ್ಷರಾದ ವೆಂಕಟೇಶಯ್ಯ, ಕಾರ್ಯದರ್ಶಿ ಶಿವಲಿಂಗಯ್ಯ,ಜಿಲ್ಲಾಧ್ಯಕ್ಷರಾದ ಸುರೇಶ ಶೆಡಶ್ಯಾಳ, ಕುಂದಾಪುರ ತಾಲೂಕು ಅಧ್ಯಕ್ಷರಾದ ದಿನಕರ ಶೆಟ್ಟಿ, ಮೂಡಬಿದರೆ ತಾಲೂಕು ಅಧ್ಯಕ್ಷರಾದ ನಾಗೇಶ್,ವಿಶೇಷ ಬಿ.ಎಡ್., ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಎಸ್. ಬಿ.ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಗದಗೇರಿ ಬಿ.ಐ.ಈ.ಆರ್.ಟಿಗಳಾದ ಕೀರ್ತಿವತಿ. ಸುಮತಿ.ಶಾಲಿನಿ..ಮುರಳಿ.ಜಗದೀಶ.ರತ್ನಮ್ಮ.ಪುರೋಹಿತ.ಎಸ್.ಬಿ.ಕೊಂತಿ.ಶಂಕರ ಕಮ್ಮಾರ. ವೈ.ಬಿ.ಕಡಕೋಳ. ಶಿವಾನಂದ ಹುಲಗಬಾಳಿ.ಉಪಸ್ಥಿತರಿದ್ದರು.