spot_img
spot_img

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯ ಮಂತ್ರಿ ಗಳಿಗೆ ಮನವಿ

Must Read

- Advertisement -

ಬೆಳಗಾವಿ: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ಶಾಲೆಗಳ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ನ್ಯಾಯಯುತ ಬೇಡಿಕೆಗಳು ಬಹುದಿನಗಳಿಂದ ಪರಿಹಾರ ಕಾಣದೆ ನೆನಗುದಿಗೆ ಬಿದ್ದಿದ್ದು ಅವುಗಳನ್ನು ಆದ್ಯತೆ ಮೇರೆಗೆ ಈಡೇರಿಸಲು ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ಬೆಳಗಾವಿ ಜಿಲ್ಲಾಧಿಕಾರಿ ಗಳಾದ ಎಮ್ ಜಿ ಹಿರೇಮಠ ರವರ ಮುಖಾಂತರ ಮನವಿಯನ್ನು ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಬೆಳಗಾವಿ ದಕ್ಷಿಣ ಶೈಕ್ಷಣಿಕ ಘಟಕದ ವತಿಯಿಂದ ಬುಧವಾರ ಸಂಜೆ ಮನವಿ ನೀಡಲಾಯಿತು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಳು ಈ ಬೇಡಿಕೆಗಳನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

- Advertisement -

ಮನವಿಯಲ್ಲಿ ಮಂಡಿಸಿದ ಬೇಡಿಕೆ ಗಳಲ್ಲಿ ರಾಜ್ಯದಲ್ಲಿ ಕಾರ್ಯನಿರತ ರಾಗಿರುವ ಪ್ರಾಥಮಿಕ ಶಾಲಾ ಹಿರಿಯ ಹಾಗೂ ಪದವೀಧರೇತರ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ಮುಂಜೂರ ಮಾಡಬೇಕು.

ಪ್ರಾಥಮಿಕ ಶಾಲೆಗಳ ಪದವೀಧರೇತರ ಮುಖ್ಯ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರಿಗೆ ನೀಡುವ ಸರಿಸಮಾನವಾದ ವಿಶೇಷ ವೇತನ ಭತ್ಯೆ ನೀಡಬೇಕು, ಒಂದೇ ಹುದ್ದೆಯಲ್ಲಿಸತತವಾಗಿ 20ವರ್ಷ,25ವರ್ಷ,30ವರ್ಷ ಸೇವೆಸಲ್ಲಿಸುತ್ತಿರವವರಿಗೆ ನೀಡುವ ವಿಶೇಷ ವೇತನ ಭತ್ಯೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೂ ಸಿಗುವಂತಾಗಬೇಕು, ಸದ್ಯ ಮುಖ್ಯ ಶಿಕ್ಷಕರಿಗೆ ವೇತನ ತಾರತಮ್ಯ ವಾಗಿದೆ ಅದನ್ನು ಸರಿಪಡಿಸಬೇಕು, ಪ್ರೌಢಶಾಲೆ ಮುಖ್ಯಶಿಕ್ಷಕರಿಗೆ ಸದ್ಯ ದೊರೆಯುತ್ತಿರುವ 30ದಿನಗಳ ಗಳಿಕೆ ರಜೆಯ ಸೌಲಭ್ಯವು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೂ ಸಿಗಬೇಕು, ಎರಡು ವ್ಯವಸ್ಥೆ ಯಲ್ಲಿ ಕಾರ್ಯನಿರ್ವಹಣೆ ಸಮಾನ ವಾಗಿದೆ, ರಾಜ್ಯದ ಪ್ರತಿಶಾಲೆಗೆ ಕಂಪ್ಯೂಟರ್ ಒದಗಿಸಬೇಕು, ಇಂದು ಎಲ್ಲಾ ಧಾಖಲೆಗಳನ್ನು ಕಂಪ್ಯೂಟರ್ ಮೂಲಕ ನೀಡಬೇಕಾಗಿದೆ, ಶಾಲೆಯಲ್ಲಿ ಅಕ್ಷರ ದಾಸೋಹ ಇರುವದರಿಂದ ಶುಚಿತ್ವ, ಸ್ವಚ್ಛತೆ, ಮತ್ತು ಭದ್ರತೆಗಾಗಿ, ಜೊತೆಗೆ ಇತರೆ ಕೆಲಸ ಕಾರ್ಯಗಳಿಗಾಗಿ ಡಿ ದರ್ಜೆ ನೌಕರರ ಹುದ್ದೆ ಮಂಜೂರು ಮಾಡಬೇಕು,ಪ್ರಾಥಮಿಕ ಶಾಲಾ ವಿಭಾಗ ಕ್ಕೆ ವಿಷಯ ಪರಿವೀಕ್ಷಕರ ಹುದ್ದೆ ಮಂಜೂರು ಮಾಡಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಈ ಹುದ್ದೆ ಬಡ್ತಿ ಮೂಲಕ ನೀಡಬೇಕು, ಪ್ರತಿಹೋಬಳಿಗೆ ಒಂದು ಗೆಜೆಟೆಡ್ ಅಧಿಕಾರಿಗಳ ಹುದ್ದೆ ಮಂಜೂರು ಮಾಡಬೇಕು, ಎಂದು ಬೇಡಿಕೆಗಳನ್ನು ಮಂಡಿಸಲಾಗಿದೆ, ನಂತರ ಈ ನಿಯೋಗವು ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಯವರಿಗೆ ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಯವರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಬೇಡಿಕೆ ಗಳಿಗೆ ಬೆಂಬಲ ನೀಡಲು ಮನವಿ ಸಲ್ಲಿಸಿದರು, ಅವರು ಈ ನ್ಯಾಯಯುತ ಮುಖ್ಯ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಬೆಂಬಲ ನೀಡಿ ಸರಕಾರದ ಗಮನಕ್ಕೆ ತರುವದಾಗಿ ಭರವಸೆ ನೀಡಿದರು.

- Advertisement -

ಮನವಿ ನೀಡುವ ಸಮಯದಲ್ಲಿ ಸಂಘದ ಜಿಲ್ಲಾ ಗೌರವಧ್ಯಕ್ಷ ಶಶಿಧರ ರೊಟ್ಟಿ, ಜಿಲ್ಲಾ ಅಧ್ಯಕ್ಷ ಬಿ ಎಸ್ ಹುಣಸಿಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ, ನಗರಘಟಕದ ಅಧ್ಯಕ್ಷ ಎ ಡಿ ಸಾಗರ, ಪ್ರಧಾನಕಾರ್ಯದರ್ಶಿ ಬಿ ಬಿ ಹಟ್ಟಿಹೋಳಿ, ಪದಾಧಿಕಾರಿಗಳಾದ ರಾಜೇಂದ್ರಕುಮಾರ ಚಲವಾದಿ, ಶ್ರೀ ಮತಿ ಎಸ್ ಜಿ ರಜಪೂತ,ಪಿ ಕೆ ಘೋಲಪೆ, ಪ್ರಕಾಶ ಕಾಂಬಳೆ, ಶ್ರೀಮತಿ ವಿ ಆರ್ ನಾಯ್ಕ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group