spot_img
spot_img

ಸುಣಗಾರಗೆ ವಿ.ಪ.ಟಿಕೇಟ್ ನೀಡಲು ಮನವಿ

Must Read

ಸಿಂದಗಿ: ಸತತ 10 ವರ್ಷದ ಜಿಲ್ಲಾದ್ಯಕ್ಷರ ಪಟ್ಟದಲ್ಲಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ 8 ಸ್ಥಾನಗಳಲ್ಲಿ 7 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಶ್ರಮಿಸಿರುವ ಹಿಂದುಳಿದ ನಾಯಕ ಎಸ್.ಟಿ. ಸುಣಗಾರ ಅವರಿಗೆ ವಿಧಾನ ಪರಿಷತ್ ಟಿಕೇಟ ನೀಡಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬೇಕೆಂದು ಎಪಿಜಿ ಅಬ್ದುಲ್ ಕಲಾಂ ವ್ಯಾಪಾರಿಗಳ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸೈಪನ್ ನಾಟೀಕಾರ ಆಗ್ರಹಿಸಿದ್ದಾರೆ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್.ಟಿ.ಸುಣಗಾರ ಅವರು 4 ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಸೋಲುಂಡರೂ ಕೂಡಾ ಪಕ್ಷದ ನಿಷ್ಠಾವಂತ ಕಟ್ಟಾಳು ಪಕ್ಷವನ್ನು ಬಿಡದೇ ವರಿಷ್ಠರ ಆದೇಶದಂತೆ ಕಾರ್ಯನಿರ್ವಹಿಸಿದ್ದಾರೆ ಕಾರಣ ಕಳೇದ ಉಪ ಚುನಾವಣೆಯಲ್ಲಿ ರಾಜ್ಯದ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಂಡು ವಿಧಾನ ಪರಿಷತ್ ಟಿಕೆಟ್ ನೀಡಿ ಕಾಂಗ್ರೆಸ್ ಪಕ್ಷವನ್ನು ಈ ಭಾಗದಲ್ಲಿ ಜಟಿಲಗೊಳಿಸಬೇಕು ಸಿಂದಗಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿ ನಂತರ ವಿಜಯಪುರ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಯಶಸ್ವಿಯಾಗಿ 10 ವರ್ಷಗಳ ಕಾಲ ಪಕ್ಷ ನೀಡಿದ ಕಾರ್ಯ ಶ್ಲ್ಯಾಘನೀಯ. ಮಾಜಿ ಶಾಸಕ ಎಸ್.ಟಿ.ಸುಣಗಾರ ಅವರಿಗೆ ವಿಧಾನ ಪರಿಷತ್ತಿನ ಟಿಕೆಟ್ ನೀಡಿ ಆಯ್ಕೆಗೊಳಿಸಿದರೆ ಮುಂಬರುವ 2023ನೇ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗಳಿಸಿಕೊಳ್ಳಲು ಸಾಧ್ಯ ಅದಕ್ಕೆ ಅವರಿಗೆ ಟಿಕೆಟ ನೀಡಿ ನ್ಯಾಯ ಒದಗಿಸಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ.

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!