ಅಕ್ಕಮಹಾದೇವಿ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಬೆಳಗಾವಿ: ಪ್ರತಿ ವರ್ಷದಂತೆ ಈ ವರ್ಷವೂ, ಇಡಿ ನಾರಿ ಸಂಕುಲಕ್ಕೆ ತಿಲಕವಾಗಿರುವ ಜಗನ್ಮಾತೆ ಅಕ್ಕಮಹಾದೇವಿಯವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಅಕ್ಕನ ಜಯಂತಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಹಾಗೂ ಮಹಿಳಾ ಸಬಲೀಕರಣದ ಹೆಜ್ಜೆಯಾಗಿ ಪ್ರಥಮ ಬಾರಿಗೆ ಈ ವರ್ಷ ಅಕ್ಕಮಹಾದೇವಿಯವರ ಹೆಸರಿನಲ್ಲಿ ಅರ್ಥಪೂರ್ಣವಾದ ರಾಜ್ಯ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ.

ಪ್ರಶಸ್ತಿಗಳ ವಿವರ:

ಅಕ್ಷರ ಮಾತೆ ಅಕ್ಕಮಹಾದೇವಿ: ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗಿನ ಶಿಕ್ಷಕಿಯರಿಗೆ. ಶಿಕ್ಷಕಿಯರು ವೈಚಾರಿಕ ಚಿಂತಕರಾಗಿರಬೇಕು. ಬಸವಾದಿ ಶರಣರ ಚಳುವಳಿ ಮತ್ತು ಲಿಂಗಾಯತ ಧರ್ಮದ ಬಗ್ಗೆ ತಿಳಿದವರಾಗಿರಬೇಕು.

- Advertisement -

ಕನ್ನಡದ ತಾಯಿ ಅಕ್ಕಮಹಾದೇವಿ: ಪ್ರಗತಿ ಪರ ಚಿಂತನೆಯ ಮಹಿಳಾ ಶರಣ ಸಾಹಿತಿಗಳು, ಕವಯತ್ರಿಯರು ಮತ್ತು ಲಿಂಗಾಯತ ಧರ್ಮದ ಪ್ರಚಾರಕಿಯರಿಗೆ.

ನಾರಿ ಕುಲ ತಿಲಕ ಅಕ್ಕಮಹಾದೇವಿ; ಕನ್ನಡ ಮತ್ತು ಮಹಿಳಾ ಹೋರಾಟಗಾರ್ತಿಯರಿಗೆ ವೀರ ವನಿತೆ ಅಕ್ಕಮಹಾದೇವಿ : ಪೋಲಿಸ್ ಇಲಾಖೆ ಸೇರಿದಂತೆ ರಕ್ಷಣಾ ಇಲಾಖೆಗಳು ಹಾಗೂ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೀರ ಸಹೋದರಿಯರಿಗೆ.

ಜಗನ್ಮಾತೆ ಅಕ್ಕಮಹಾದೇವಿ ಜೀವಮಾನ ಸಾಧನೆ: ಹಿರಿಯ ತಾಯಂದಿರಿಗೆ ಆಸಕ್ತ ಹಾಗೂ ದಾಸೋಹ ಮನೋಭಾವದ ಮಹಿಳೆಯರು.

ಎಪ್ರಿಲ್ 20 ರೊಳಗಾಗಿ, ತಮ್ಮ ಸ್ವ ವಿವರ ಹಾಗೂ ಇತ್ತೀಚಿನ ಒಂದು ಭಾವಚಿತ್ರದೊಂದಿಗೆ, “ಆರ್.ಎಸ್.ದರ್ಗೆ, ಅಧ್ಯಕ್ಷರು, ಬಸವ ಭೀಮ ಸೇನೆ, ಮ.ನಂ. 47, 2 ನೇ ಮುಖ್ಯರಸ್ತೆ ಶಿವಾಜಿನಗರ, ಬೆಳಗಾವಿ” ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಎಪ್ರಿಲ್ 23 ರಂದು ಕಾರ್ಯಕ್ರಮದ ಸ್ಥಳ, ಸಾಧಕರ ಆಯ್ಕೆ ಹಾಗೂ ಆಮಂತ್ರಣ ಪ್ರಕಟಿಸಲಾಗುವದು.

ಎಪ್ರಿಲ್ 27 ಅಕ್ಕಮಹಾದೇವಿಯವರ ಜಯಂತಿ ಇದೆ. 27 ರಂದು ಬೆಳಿಗ್ಗೆ 10.30 ಕ್ಕೆ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವದು.

ಹೆಚ್ಚಿನ ಮಾಹಿತಿಗಾಗಿ ಮೋ.ನಂ.9986710560 ಗೆ ಸಂಪರ್ಕಿಸುವಂತೆ ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!