ಮೂಡಲಗಿ – ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಡಿಸೆಂಬರ್ 21 ರಿಂದ 23 ರ ವರೆಗೆ ನಡೆಯುವ “ಆರ್ಥಿಕತೆ ಮತ್ತು ಪೌಷ್ಟಿಕತೆಗಾಗಿ ತೋಟಗಾರಿಕೆ” ಎಂಬ ಧ್ಯೇಯದೊಂದಿಗೆ ತೋಟಗಾರಿಕೆ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಈ ಮೇಳದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿಶಿಷ್ಟ ಕೃಷಿಕರಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳಿಗೆ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆಯನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವದು.
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ಬೆಳಗಾವಿ ಜಿಲ್ಲೆಯ ರೈತ/ರೈತ ಮಹಿಳೆಯರು ಅರ್ಜಿ ನಮೂನೆಯನ್ನು ಡೀನ್ ಕಛೇರಿ, ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ ಅಥವಾ ವಿಸ್ತರಣಾ ಮುಂದಾಳು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಅರಭಾವಿಯಲ್ಲಿ ಪಡೆಯಬಹುದು. ಅಥವಾ ತೋವಿವಿಯ ವೆಬ್‌ಸೈಟ್ uhsbalkot.karnataka.gov.in ಮೂಲಕ ಕೂಡ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 5ನೇ ನವೆಂಬರ್ 2024ರ ಒಳಗಾಗಿ ಡೀನ್, ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ ಇವರಿಗೆ ಸಲ್ಲಿಸಬೇಕು.
ನಿಬಂಧನೆಗಳು:-
ಅರ್ಜಿದಾರರರು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಯಾವುದೇ ಕೃಷಿ,ತೋಟಗಾರಿಕೆ, ಪಶು ಸಂಗೋಪನೆ ಮತ್ತು ಐಸಿಎಆರ್ ಪ್ರಶಸ್ತಿಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಪಡೆದಿರಬಾರದು.
ಅರ್ಜಿದಾರರು ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ನೀಡಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಿ ಕಿರುಪಟ್ಟಿ ಮಾಡಿದ ಮೂರು ಕ್ಷೇತ್ರಗಳಿಗೆ ಮಾತ್ರ ಕ್ಷೇತ್ರವೀಕ್ಷಣೆ ಕೈಗೊಳ್ಳಲಾಗುವುದು.
ಆಯ್ಕೆಯು ವಿಶ್ವವಿದ್ಯಾಲಯದ ನಿಯಮ ಹಾಗೂ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಡಾll ಎ. ಎಮ್. ನದಾಫ್, ವಿಸ್ತರಣಾ ಮುಂದಾಳು, ಕಿ.ರಾ.ಚ.ತೋ. ಮಹಾವಿದ್ಯಾಲಯ, ಅರಭಾವಿ ಮೊ-8660834191 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.