ಮೂಡಲಗಿ: ಅರಭಾವಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 05 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 18 ಸಹಾಯಕಿಯರ ಹುದ್ದೆಗಳಿಗೆ 19 ರಿಂದ 35 ವರ್ಷದೊಳಗಿನ ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ ಎಂದು ಅರಭಾವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಪ್ಪ ಗದಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಜುಲೈ,05 ರಿಂದಲೇ ಪ್ರಾರಭವಾಗಿವೆ,ಆಸಕ್ತರು -ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಅಗತ್ಯ ದಾಖಲೆಗಳನ್ನು ದೃಢೀಕರಣದೊಂದಿಗೆ ಆನ್ ಲೈನ್ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಗಷ್ಟ,08 ಕ್ಕೆ ಕೊನೆಯ ದಿನ.ನಿಮಗೆ ಮಾಹಿತಿ ಬೇಕಾದರೆ ಕೆಳಕಂಡ ಕಛೇರಿಗೆ ಹೋಗಿ ತಿಳಿದು ಕೊಳ್ಳಬಹುದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೂಡಲಗಿ,ಹುಣಶ್ಯಾಳ ಪಿ.ವಾಯ್,ಅವರಾದಿ,ಹುಣಶ್ಯಾಳ ಪಿ.ಜಿ,ತುಕ್ಕಾನಟ್ಟಿ,ಪಟಗುಂದಿ,ಸುಣಧೋಳಿ,ವಡೇರಹಟ್ಟಿ, ತಿಗಡಿ, ಯಾದವಾಡ, ರಾಜಾಪೂರ,ಹಳ್ಳೂರ ಈ ಎಲ್ಲ ಅಂಗನವಾಡಿ ಸೂಚನಾ ಫಲಕಕ್ಕೆ ಮತ್ತು ಮೂಡಲಗಿ ಪುರಸಭೆ,ಅರಭಾವಿ ಪಟ್ಟಣ ಪಂಚಾಯಿತಿ,ಗ್ರಾಮ ಪಂಚಾಯಿತಿ ಬೋರ್ಡಿಗೆ ಮಾಹಿತಿ ಪ್ರಕಟಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಸರ್ಕಾರಿ ಕನ್ನಡ ಶಾಲಾ ಆವರಣದಲ್ಲಿ ಮೂಡಲಗಿ.
ದೂರವಾಣಿ,ಸಂಖ್ಯೆ-08334-200367 ಇವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.ರಜಾ ದಿನ ಹೊರತುಪಡಿಸಿ. ಆನ್ ಹ ಲೈನ್ ವಿಳಾಸ-https//karnemakaone.kar. nic.in/abcd/