ಸಿಂದಗಿ: ಮತಕ್ಷೇತ್ರದ ಸಿಂದಗಿ ತಾಲೂಕು ಮತ್ತು ಆಲಮೇಲ ತಾಲೂಕಿನ ಜಾತ್ಯತೀತ ಜನತಾ ದಳದ ಪದಾಧಿಕಾರಿಗಳ ನೇಮಕ ಆದೇಶ ಹೊರಡಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ ತಾಲೂಕಾ ಅಧ್ಯಕ್ಷರಾಗಿ ದಾನಪಗೌಡ ಅಣ್ಣಾರಾಯಗೌಡ. ಚನಗೊಂಡ, ಆಲಮೇಲ ತಾಲೂಕಾ ಅಧ್ಯಕ್ಷರಾಗಿ ಮೋಮ್ಮದಸಾಬ ನಬಿಸಾಬ. ಉಸ್ತಾದ, ಸಿಂದಗಿ ತಾಲೂಕಾ ಯುವ ಘಟಕ ಅದ್ಯಕ್ಷರಾಗಿ ಸಂತೋಷ ಕಲ್ಲಪ್ಪ ಶಿರಕನಳ್ಳಿ, ಸಿಂದಗಿ ತಾಲೂಕಾ ಯುವ ಘಟಕ ಅದ್ಯಕ್ಷರಾಗಿ ಕಾಶಿನಾಥ ರಾಮಣ್ಣ ಕ್ಷತ್ರಿ, ಸಿಂದಗಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಸದಾಶಿವ. ಗುಡಿಮನಿ, ಜಿಲ್ಲಾ ಉಪಾಧ್ಯಕ್ಷರಾಗಿ ಗೂಂಡುರಾವ್ ಬಾಬಾಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಂಗರಾಜ ಹಣಮಂತ್ರಾಯ ಬಗಲಿ ಇವರುಗಳನ್ನು ಪಕ್ಷದ ಧುರೀಣರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನುಳಿದ ಪದಾಧಿಕಾರಿಗಳನ್ನು ಮತ್ತು ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲು ತಾಲೂಕಾ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.