spot_img
spot_img

ಮೊದಲು ಬಸವರಾಜನನ್ನ ಬಂಧಿಸಿ, ಸತ್ಯ ಹೊರ ಬರುತ್ತದೆ – ಕಿರಣ ಖಂಡ್ರೆ

Must Read

ಬೀದರ – ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನನ್ನು ಮೊದಲು ಬಂಧಿಸಿ. ಈ ರಂಪಾಟಕ್ಕೆಲ್ಲ ಆತನೇ ಕಾರಣ. ಅವನನ್ನು ಬಂಧಿಸಿದರೆ ಸತ್ಯ ಹೊರಬರುತ್ತದೆ ಎಂದು ಲಿಂಗಾಯತ ಮುಖಂಡ ಕಿರಣ ಖಂಡ್ರೆ ಹೇಳಿದರು.

ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಪತ್ರಿಕೆಯೊಡನೆ ಮಾತನಾಡಿದ ಅವರು, ಅರವತ್ತೈದು ವರ್ಷದ ಶರಣರ ಜೊತೆ ಹದಿನೈದು ವರ್ಷದ ಹುಡುಗಿ ಸಂಬಂಧ ಇರುತ್ತದೆಂದು ಹೇಳುತ್ತಾರೆ.ಛೀ ನಿಮಗೆ ನಾಚಿಕೆಯಾಗಬೇಕು. ಸಂಬಂಧ ಹೋಲಿಸಲು ಒಂದು ಇತಿ ಮಿತಿ ಬೇಡವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಠದ ಆಸ್ತಿ ಮೇಲೆ ಕಣ್ಣು ಹಾಕಿದ ಬಸವರಾಜ್ ಮಠದಲ್ಲಿ ತನ್ನ ಸರ್ವಾಧಿಕಾರಿ ಧೋರಣೆ ಹೊಂದಿದ್ದ. ಬಹಳ ದಿನಗಳಿಂದ ಶ್ರೀಗಳನ್ನು ಕಾಡುತ್ತಿದ್ದ ಕಾರಣಕ್ಕೆ ಮುರುಘಾ ಶರಣರು ಮಠದಿಂದ ಬಸವರಾಜನನ್ನ  ಹೊರಗೆ ಹಾಕಿದ್ದರು. ಆರು ತಿಂಗಳಲ್ಲಿ ಮತ್ತೆ ಮಠದಲ್ಲಿ ಸೇರಿಕೊಂಡಿದ್ದ ಆತ  ಸ್ವಾಮಿಗಳ ವಿರುದ್ಧ ಕುತಂತ್ರದಿಂದ  ಈ ಹಗರಣದಲ್ಲಿ ಸಿಲುಕಿಸಲು ಪ್ರಯತ್ನ ಮಾಡಿದ್ದಾನೆ.ಮೊದಲು ಬಸವರಾಜ್ ಬಂಧಿಸಿ ಆಮೇಲೆ ಮುರುಘಾ ಶರಣರನ್ನು ಬಂಧಿಸಿ ಎಂದು ಖಂಡ್ರೆ ಆಗ್ರಹಿಸಿದರು.

ಬಸವರಾಜ್ ಮಠದ ಆಸ್ತಿ ಹಾಳು ಮಾಡುತ್ತಾ ಬಂದಿದ್ದಾರೆ.ಅದೇ ಕಾರಣಕ್ಕೆ ಮಠದಿಂದ ಹೊರಗೆ ಹಾಕಿದರೆ ಸ್ವಾಮೀಜಿ. ಆದರೆ ಸತ್ಯಕ್ಕೆ ಬೆಲೆಯಿಲ್ಲವಾಗಿದೆ. ಸ್ವಾಮೀಜಿಗಳ ವಯಸ್ಸಿಗಾದರೂ ಬೆಲೆ ಕೊಡಿ. ಅರುವತ್ತೈದು ವರ್ಷದ ಸ್ವಾಮೀಜಿ ಹದಿನೈದು ವರ್ಷದ ಹುಡುಗೀನ ಕಾಡ್ತಾರೆ ಅಂದ್ರೆ ಎಂಥಾ ದುರ್ದೈವ ಇದು. ಸ್ವಾಮೀಜಿಗಳ ವಯಸ್ಸಿಗಾದರೂ ಕಿಮ್ಮತ್ತು ಕೊಡಿ ಎಂದು ಆಕ್ರೋಶ ಹೊರಹಾಕಿದ ಖಂಡ್ರೆ ಮೊದಲು ಬಸವರಾಜ್ ನನ್ನು ಬಂಧಿಸಿದರೆ ಸತ್ಯ ಹೊರಬೀಳುತ್ತದೆ ಎಂದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!