ಬೆಳಗಾವಿ: ದೇಶಾದ್ಯಂತ ಭಾರತ ಸ್ವಾತಂತ್ರ್ಯ ಉತ್ಸವಕ್ಕೆ 75 ವರ್ಷ ತುಂಬುವ ಹಿನ್ನೆಲೆಯಲ್ಲಿ ರಾಮತೀರ್ಥ ನಗರದಲ್ಲಿ ಹಿರಿಯ ಸಾಹಿತಿಗಳಾದ ಸ ರಾ ಸುಳಕೂಡೆಯವರು ಹಾಗೂ ನಿವೃತ್ತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಅಶೋಕ ಉಳ್ಳಾಗಡ್ಡಿ ಯವರ ನೇತತ್ವದಲ್ಲಿ ಸಮಾನ ಮನಸ್ಕ ಸಾಹಿತಿಗಳು ಸಂಘಟಕರು ಸೇರಿಕೊಂಡು ಚಿಂತಕರ ಚಾವಡಿ ಎಂಬ ಹೆಸರಿನ ಸಂಘಟನೆ ಹುಟ್ಟು ಹಾಕಿ ವರ್ಷ ಪೂರ್ತಿ ಎಪ್ಪತೈದು ಕಾರ್ಯಕ್ರಮ ನಡೆಸುವ ತೀರ್ಮಾನ ಮಾಡಿ ಈಗಾಗಲೇ ಮಹತ್ವದ ಇಪ್ಪತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಯಶಸ್ವಿಯಾಗಿರುವರು.
ಸದ್ಯ ದೇಶದ ಸ್ವಾತoತ್ರ್ಯ ದ ಇತಿಹಾಸ ಸಾರುವ ಲೇಖನ ಗಳ ಪುಸ್ತಕ ಹೊರತರಲು ನಿರ್ಧರಿಸಿದ್ದು ಜಿಲ್ಲೆಯ ಗೌರವಾನ್ವಿತ ಹಿರಿಯ ಲೇಖಕರಿಂದ ಲೇಖನ ಆಹ್ವಾನಿಸಿದ್ದಾರೆ.
ಈ ಸಂಘಟನೆಯ ಸದಸ್ಯರು, ಸ್ವಾತಂತ್ರ್ಯ ಹೋರಾಟದ ಸ್ಮರಣೀಯ, ರೋಚಕ ಐತಿಹಾಸಿಕ ಘಟನೆಗಳ ಲೇಖನಗಳನ್ನು ಸ್ವಾತಂತ್ರ್ಯ ಹೋರಾಟಗಾರರು, ಸಜ್ಜನಿಕೆಯ ಶಿಕ್ಷಕರು, ಸಾಹಿತಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮಿಗಳು, ಸೈನಿಕರು, ಸಾಮಾಜಿಕ ಕಾರ್ಯಕರ್ತರು, ಧಾರ್ಮಿಕ ಮುಖಂಡರು, ವೈದ್ಯರು, ಕೃಷಿಕರು, ವಿಜ್ಞಾನಿಗಳು,ಸಾಮಾಜಿಕ ಸೇವಾಕಾರ್ಯಕರ್ತರು,ಪತ್ರಿಕಾ ರಂಗದವರು, ನಾಡು ನುಡಿಗೆ ಶ್ರಮವಹಿಸಿದವರು,ಕಲಾವಿದರು, ಸಿನಿಮಾ ನಟನಟಿಯರು, ಧಾರಾವಾಹಿ ನಿರ್ದೇಶಕರು, ನಿರ್ಮಾಪಕರು, ಶಿಕ್ಷಣ ಸಂಘ ಸಂಸ್ಥೆ ಕಟ್ಟಿ ಬೆಳಸಿದವರು,ಹೀಗೆ ಸಮಾಜದ ವಿವಿಧ ಮಹತ್ವದ ರಂಗಗಳಲ್ಲಿ ಕಾರ್ಯ ಮಾಡಿದವರು, ಮಾಡುವವರು ಸೇರಿದಂತೆ ಎಲ್ಲರನ್ನು ಪರಿಚಯಿಸುವ ಬ್ರಹತ್ ಗ್ರಂಥಗಳನ್ನು ಹೊರ ತರಲಾಗುವುದು ಆಸಕ್ತಿವುಳ್ಳ ಲೇಖಕರು ಈ ವಿಷಯ ಪರಿಚಯದ ಲೇಖನ ಕಳಿಸಲು ಆಹ್ವಾನಿಸಲಾಗಿದೆ, ಲೇಖನ ಆಯ್ಕೆ ಮಾಡಿಕೊಳ್ಳುವ ಅಧಿಕಾರ ಸಂಪಾದಕರಿಗಿದೆ.
ಲೇಖಕರು ತಮ್ಮ ಮೂರು ಪುಟಕ್ಕೆ ಮೀರದ ಲೇಖನ ಗಳನ್ನು, ಸ ರಾ ಸುಳಕೂಡೆ, ಹಿರಿಯ ಸಾಹಿತಿ ಚಿಂತಕರು,1319, ಶ್ರೀ ಶಿವಪ್ರಸಾದ, ರಾಮತೀರ್ಥ ನಗರ ಬೆಳಗಾವಿ ಮೋ. 9844453343 ಇವರಿಗೆ ಕಳಿಸಲು ಸಂಘಟಕರು ತಿಳಿಸಿದ್ದಾರೆ