ಮುನವಳ್ಳಿ: ಪಟ್ಟಣದ ಗಾಂಧಿನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಯುವಧುರೀಣ ಅಸ್ಲಂ ಕಿಲ್ಲೇದಾರ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಿ.ಡಿ.ಸಿ.ಸಿ.ಬ್ಯಾಂಕ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ಪುಸಭೆ ಮಾಜಿ ಅಧ್ಯಕ್ಷ ವಿಜಯ ಅಮಠೆ, ಡಾ. ರವಿ ಹನಸಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿ ತುಕ್ಕೋಜಿ, ಮಾಂತಯ್ಯ ವಿರುಪಯ್ಯನವರಮಠ, ಸಂಜೀವ ಕಾಮಣ್ಣವರ, ಚಂದ್ರಶೇಖರ ಬಾಳಿ, ಈರಣ್ಣ ಮುದಗಲ್ಲ, ಅಕ್ಬರ ಜಮಾದಾರ, ಮಂಜುನಾಥ ತುಕ್ಕೋಜಿ, ಸಂತೋಷ ಚರಂತಿಮಠ, ಮುಗುಟಸಾಬ ಕಿಲ್ಲೇದಾರ, ಪ್ರಧಾನ ಗುರುಮಾತೆ ಎಚ್.ಎಸ್.ಮನಿಯಾರ, ಸಿ.ಆರ್.ಪಿ. ಮೀರಾ ಮುರನಾಳ, ವೀರಣ್ಣ ಕೊಳಕಿ, ಸರೋಜನಿ ವಿಶ್ವಜ್ಞ, ರಜನಿ ನಾಯ್ಕ, ಹೇಮಾವತಿ ಹೊನ್ನಳ್ಳಿ, ಮಂಗಲಾ ಉಪ್ಪಾರಗುರು, ರೇಖಾ ಶಾನಭೋಗ, ರಾಜು ಶಾಸ್ತ್ರಿ, ನಿಂಗರಾಜ ಚಿಕ್ಕುಂಬಿ, ಗೋಪಿ ಪಟಗುಂದಿ ಸೇರಿದಂತೆ ಇತರರು ಇದ್ದರು.