ಸಚಿವ ತಿಮ್ಮಾಪುರರಿಗೆ ನೈತಿಕ ಬೆಂಬಲ ; ಮುಗಳಖೋಡದಲ್ಲಿ. ದಿ.6 ರಂದು ಕಲಾವಿದರ ಸಭೆ 

Must Read

ಮುಧೋಳ  – ಮುಧೋಳದ ಮೀಸಲು ಮತಕ್ಷೇತ್ರದಲ್ಲಿ ಸೋಲು ಗೆಲುವುಗಳನ್ನ ಸ್ವೀಕರಿಸುತ್ತಾ ಸಾಮಾಜಿಕವಾಗಿ ಏರಿಳಿತಗಳನ್ನು ಅನುಭವಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೋರಾಟವನ್ನು ಮಾಡುತ್ತಾ ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪುರ ಅವರಿಗೆ ಇವತ್ತು ಜಿಲ್ಲೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ಜಾತ್ಯತೀತವಾಗಿ ಬೆಂಬಲ ನೀಡುವುದು ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು ಹೇಳಿದ್ದಾರೆ.

ಜಿಲ್ಲೆಯಲ್ಲಿ ಅವರ ಸೇವೆ ಅತ್ಯಂತ ಅಗತ್ಯವಾಗಿದೆ. ಮಾನ ಅವಮಾನಗಳನ್ನು ಗಮನಿಸದೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಮ್ಮಾಪುರವರು ಇವತ್ತು ಅಧಿಕಾರದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಅವರನ್ನು ರಾಜೀನಾಮೆ ಕೇಳುತ್ತಿರುವುದು ಅತ್ಯಂತ ವಿಪರ್ಯಾಸ ಸಂಗತಿ. ಹಾಗಾಗಿ ಇಂಥ ಸಮಯದಲ್ಲಿ ತಿಮ್ಮಾಪುರವರನ್ನು ಎಲ್ಲರೂ ಪಕ್ಷಾತೀತವಾಗಿ ನೋಡಬೇಕು ಅವರ ರಾಜೀನಾಮೆಯನ್ನು ಕೇಳುವುದು ನಮ್ಮ ಜಿಲ್ಲೆಗೆ ಅದು ಶೋಭೆಯಲ್ಲ. ಹಾಗಾಗಿ ನಾವು ಇವತ್ತಿನ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ವ ಕಲಾವಿದರು ಒಕ್ಕೂಟದಿಂದ ನಾವು ಆರ್.ಬಿ. ತಿಮ್ಮಾಪುರ ಅವರಿಗೆ ನೈತಿಕ ಬೆಂಬಲವನ್ನು ಕೊಡುತ್ತೇವೆ. ಆ ನಿಟ್ಟಿನಲ್ಲಿ ನಾಳೆ ಶುಕ್ರವಾರ ದಿ.6 ರಂದು ಮುಂಜಾನೆ 11 ಗಂಟೆಗೆ ಮುಧೋಳ ತಾಲೂಕಿನ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಜಿಲ್ಲೆಯ ಕಲಾವಿದರ ಸಭೆಯನ್ನ ಕರೆಯಲಾಗಿದೆ. ಈ ಸಭೆಯಲ್ಲಿ ಕಲಾವಿದರು ಸಾಹಿತಿಗಳು ಸಾಮಾಜಿಕ ಸೇವಾ ಧುರೀಣರು ಎಲ್ಲರೂ ಭಾಗವಹಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟು ಜಿಲ್ಲೆಗೆ ಸಿಕ್ಕಿರುವ ಅಧಿಕಾರ ಉಳಿಯಬೇಕೆಂದು ನಾವು ಸರ್ಕಾರಕ್ಕೆ ಮನವಿ ಮಾಡಿಕೊಳ್ಳೋಣ. ಹಾಗಾಗಿ ಕಲಾವಿದರೆಲ್ಲರೂ ಸೇರಿ ನೈತಿಕ ಬೆಂಬಲವನ್ನ ಸೂಚಿಸಬೇಕೆಂದು ಕಲಾವಿದರಲ್ಲಿ ಕೋರಿದ್ದಾರೆ

LEAVE A REPLY

Please enter your comment!
Please enter your name here

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group