ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

22: 04. 2021 ಗುರುವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ದಶಮಿ 23:37. ಆಮೇಲೆ ಏಕಾದಶಿ (21:51)
ಶ್ರಾದ್ಧ ತಿಥಿ- ದಶಮಿ.
ನಕ್ಷತ್ರ.- ಆಶ್ಲೇಷ 8:16. ಆಮೇಲೆ ಮಖೆ (7:44)

ಯೋಗ- ಗಂಡ (17:01).
ಕರಣ – ತೈತುಲಾ (12:06).
ವಾಸರ ಬೃಹಸ್ಪತಿ ವಾಸರೇ :

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ಸಿಂಹ

🌅ಸೂರ್ಯೋದಯ – 06-03AM.
🌄ಸೂರ್ಯಾಸ್ತ – 06-33.pm
ರಾಹು ಕಾಲ : 13:30-15:00.
ಯಮಗಂಡ ಕಾಲ:06:00-07:30.
ಗುಳಿಕ ಕಾಲ: 09:00-10:30.
ಅಮೃತ ಕಾಲ : 6:37 -8:14 am


ದಿನ ವಿಶೇಷ – ಶಿರಡಿ ಸಾಹಿಬಾಬಾ ಉತ್ಸವ ಸಮಾಪ್ತಿ , ಶ್ರೀ ಶಾಲಿವಾಹನ ಜಯಂತಿ, ಮಂಗಸೂಳಿ ಖಂಡೋಬಾ ಜಾತ್ರೆ, ಮೇಲುಕೋಟೆ ವೈರಮುಡಿ ಉತ್ಸವ, ರಾಮದುರ್ಗ ರಾಚೋಟೇಶ್ವರ ಜಾತ್ರೆ, ಕನ್ನಂಬಾಡಿ, ಎಮ್ಮಿಗನೂರು, ಗುಬ್ಬಿ, ಬೆಳಗಟ್ಟ, ಹೊನ್ನವಳ್ಳಿ, ರಾಮನಗರ, ಬನವಾಸಿ, ತಾಳಗುಂದ, ಮೈದನಹಳ್ಳಿ, ಮತ್ತು ಇನ್ನು ಅನೇಕ ಕಡೆ ರಥೋತ್ಸವಗಳು.


ನಾಳಿನ ವಿಶೇಷ:- ಕಾಮುದ ಏಕಾದಶಿ,ಶ್ರೀಕೃಷ್ಣಾಂದೋಲನೋತ್ಸವ, ಶುಕ್ರ ಜಯಂತಿ, ಪಂಡಾರಪುರ ಜಾತ್ರೆ, ಖಂಡೋಬ ಜಾತ್ರೆ.


ನುಡಿ ಮುತ್ತುಗಳು/ Thought of the Day

ಆರೋಗ್ಯ ಸಲಹೆ – ವಿಟಮಿನ್ ಬಿ 12 ಮತ್ತು ಒಮೆಗಾ 3 ಫ್ಯಾಟಿ ಆಸಿಡ್‌ ಸಮೃದ್ಧವಾಗಿರುವ ಆಹಾರವು ‌ಮೆದುಳಿನ ರಾಸಾಯನಿಕಗಳ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

“ನೀವು ಇಂದು ಸುಳ್ಳು ಹೇಳಿದರೆ, ನಾಳೆಯೂ ಹೇಳಬೇಕಾಗುತ್ತದೆ. ಆ ಸುಳ್ಳು ಇನ್ನೂ ಹತ್ತು ಸುಳ್ಳುಗಳನ್ನು ಹೇಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ನಂತರ ಅದೇ ಅಭ್ಯಾಸವಾಗುತ್ತದೆ. ಈ ಅಭ್ಯಾಸವನ್ನು ನಿಲ್ಲಿಸಬೇಕೆಂದರೆ, ಇಂದು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು.!!”

ನಮ್ಮ ಕರ್ಮಗಳೇ ನಮ್ಮ ದುಃಖಕ್ಕೆ ಮೂಲ ಕಾರಣ. ಅದಕ್ಕಾಗಿ ಇತರರನ್ನು ದೂಷಿಸುವುದು ನ್ಯಾಯವಲ್ಲ.

ಮನುಷ್ಯ ದೊಡ್ಡವನಾದರೆ,
ಬಾಲ್ಯವನ್ನು ಮರೆಯುತ್ತಾನೆ.
ತದ ನಂತರ ಪ್ರೌಢ ವಯಸ್ಸಿಗೆ ಬಂದ ಮೇಲೆ,ತನ್ನ ರಕ್ತ ಸಂಬಂಧಗಳನ್ನು ಮರೆಯುತ್ತಾನೆ.ಶ್ರೀಮಂತನಾದ ಮೇಲೆ ತನ್ನ ಬಡತನವನ್ನು ಮರೆಯುತ್ತಾನೆ. _ಆದರೆ…_
ವಯಸ್ಸಾದ ಮೇಲೆ ತನ್ನ ಹಿಂದಿನ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾನೆ.

ಮನುಷ್ಯನ ದೊಡ್ಡ ಶತ್ರು ಅಹಂಕಾರ ಮತ್ತು ಅಜ್ಞಾನ. ಮನುಷ್ಯನ ದೊಡ್ಡ ಮಿತ್ರ ನಂಬಿಕೆ ಮತ್ತು ನಗು.
ಆದಾಯ ಎನ್ನುವುದು ಒಂದು ಪಾದರಕ್ಷೆ ಇದ್ದಂತೆ. “ಚಿಕ್ಕದಾದರೆ ಕಚ್ಚುತ್ತದೆ”, “ದೊಡ್ಡದಾದರೆ ಹೆಜ್ಜೆ ತಪ್ಪುತ್ತದೆ”.

ಜೀವನದಲ್ಲಿ ನಾವು ಎಂದೋ ಯಾರಿಗೋ ಮಾಡಿದ ಒಂದು ಉಪಕಾರ ಯಾವತ್ತೂ ವ್ಯರ್ಥವಾಗುವುದಿಲ್ಲ. ಒಂದಲ್ಲ ಒಂದು ಯಾವುದೋ ರೀತಿಯಲ್ಲಿ ಬಂದೇ ಬರುತ್ತದೆ.

ಬದುಕಿನಲ್ಲಿ ಎಲ್ಲ ಯಶಸ್ಸಿಗೂ ಮೂರು ಮುಖ್ಯ ಔಷಧಿಗಳಿವೆ. ಅವುಗಳೇ ವಿದ್ಯೆ, ದುಡಿಮೆ ಮತ್ತು ತಾಳ್ಮೆ.

ಮನುಶ್ಯನ ಬದುಕು ಒಂದು ರೀತಿಯ ವಿಚಿತ್ರ. ಕಾಳಜಿ ಮಾಡದೆ ಇರುವವರಿಗೋಸ್ಕರ ಅಳುತ್ತಾರೆ. ಕಾಳಿಜಿ ಮಾಡುವವರನ್ನು ಆಳಿಸುತ್ತಾರೆ. ಇದೆ ವಿಚಿತ್ರ.

ನಂಬಿಕೆ,ಮೂಢನಂಬಿಕೆ,ಮತ್ತು ಹೇರಲ್ಪಟ್ಟ ನಂಬಿಕೆ.ಇದರಲ್ಲಿ ಎರಡೂ ಮತ್ತು ಮೂರನೆಯದು ಒಳ್ಳೆಯದಲ್ಲ.
ದೇವರು ಇದ್ದಾನೆ ಇದು ನಂಬಿಕೆ,
ದೇವರಿಗೆ ಒಡೆದ ಕಾಯಿ ಕೆಟ್ಟರೆ ಕೆಡಕಾಗುತ್ತದೆ ಇದು ಮೂಢನಂಬಿಕೆ,
ಕಷ್ಟ ಬಂದಾಗ ನಮಗೆ,ಇಲ್ಲಸಲ್ಲದ್ದನ್ನು ಹೇಳಿ ತಮ್ಮ ಹೊಟ್ಟೆ ತುಂಬಿಕೊಳ್ಳುವುದು, ಇದು ಹೇರಲ್ಪಟ್ಟ ನಂಬಿಕೆ.

ಕೋಟಿ ಇದ್ದವನಾಗಲಿ ಭಿಕ್ಷೆ ಬೇಡುವನಾಗಲಿ ಬೇರೆಯವರ ಮುಂದೆ ಒಮ್ಮೊಮ್ಮೆ ನತಮಸ್ತಕರಾಗಲೇಬೇಕಾಗುತ್ತದೆ.
ಇದು ಜೀವನದ ಅನಿವಾರ್ಯತೆ ಎದುರಿಸಬೇಕು.

ನಾವು ತೆಗೆದುಕೊಂಡ ತಪ್ಪು ತೀರ್ಮಾನಗಳು ಕೆಲವು ಸಲ ನಮ್ಮನ್ನು ಕೊರಗುವಂತೆ ಮಾಡಿದರೆ,ಇನ್ನೂ ಕೆಲವು ತಪ್ಪುಗಳು ನಮ್ಮ ಜೀವನದ ಹಾದಿಯನ್ನೇ ಬದಲಿಸಿ ಒಳ್ಳೆಯ ದಾರಿಯನ್ನು ತೋರಿಸಿಬಿಡುತ್ತವೆ.

ತಾಳ್ಮೆ ಹಾಗೂ ಸಹನೆಯನ್ನು ನಾವು ದೇವಸ್ಥಾನಗಳಲ್ಲಿ ಕಲಿಯಬೇಕು,
ವಿಪರ್ಯಾಸವೆಂದರೆ ಅವುಗಳನ್ನು ನಾವು ಅಲ್ಲಿಯೇ ಜಾಸ್ತಿ ಕಳೆದುಕೊಳ್ಳುವುದು.

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ ಅದನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದರ ಆಧಾರದ ಮೇಲೆ ಪ್ರತಿಯೊಬ್ಬರ ಸಾಮರ್ಥ್ಯ ನಿರ್ಧಾರವಾಗುತ್ತದೆ. ನೀವು ಇತರರಿಗಿಂತ ಭಿನ್ನವಾಗುವುದೂ ಆಗಲೇ.!!”🙏

Don’t worry about those who talk behind your back , they are behind you for a reason of their own. People are probably not happy with their lives, that’s why they are busy discussing your life.
Many relationships fail because people spend too much time pointing out each other’s mistakes instead of appreciating each other’s uniqueness.
Someone agreeing with you is not always your friend, And someone opposing you is not always your enemy.

Self-discipline is often disguised as short-term pain, which often leads to long-term gains. The mistake many of us do is that we want EVERYTHING for short-terrm gains & immediate gratification, which often leads to long-term pain.

Never excuse yourself. Never pity yourself. Be a hard master to yourself-and be lenient to everybody else.
Remember how far you’ve come, and you won’t have to rely on a destiny for your future. It will come on your own.

🙏 A seed grows with no sound, but a tree falls with huge noise. Destruction has noise, but creation is quiet. This is the power of silence. Grow silently.

Sunrise at one place is a sunset at another part of the world. What appears to be an end is also a new begining. So never give up!

Friendship* is not just a word or not only a relationship. It’s a silent promise which says, iwill be with you

CONVINCE Yourself that You have DONE the BEST in Your LIFE Rather than SPENDING the rest of Your LIFE CONVINCING OTHERS.


ಶುಭೋದಯ ಶುಭದಿನ
ಶುಭವಾಗಲಿದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!