spot_img
spot_img

ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಅರವಿಂದ ದಳವಾಯಿ

Must Read

spot_img
- Advertisement -

ಮೂಡಲಗಿ– ಪಟ್ಟಣದ ಎಪಿಎಮ್‍ಸಿ ಆವರಣದಲ್ಲಿ ಕಾಂಗ್ರೆಸ ಮುಖಂಡ ಅರವಿಂದ ದಳವಾಯಿ ಅವರು ತಮ್ಮ ಸ್ವಂತ ಖರ್ಚಿನಿಂದ ಕಾಂಗ್ರೆಸ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕೂಲಿ ಕಾರ್ಮಿಕರಿಗೆ ಹಾಗೂ ಬಡ ಮಹಿಳೆಯರಿಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಈ ವೇಳೆಯಲ್ಲಿ ಮಾತನಾಡಿದ ಅವರು, ಕೊರೋನಾ ಮಹಾಮಾರಿಯಿಂದ ಜಗತ್ತೇ ತಲ್ಲಣಗೊಂಡಿದ್ದು ಎರಡನೆ ಅಲೆಯ ಲಾಕ್‍ಡೌನ್ ಸಮಯದಲ್ಲಿ ನಿತ್ಯ ದುಡಿಮೆ ನಂಬಿ ಜೀವನ ಸಾಗಿಸುವ ಬಡ ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳಲಿಕ್ಕಾಗದೆ ಪರದಾಡುವಂತಹ ಇಂತಹ ಕಷ್ಟಕಾಲದಲ್ಲಿ ಅವರಿಗೆ ನೆರವು ನೀಡುವುದು ಅಗತ್ಯವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಪಟ್ಟಣದ ವಿವಿಧ ವಾರ್ಡುಗಳಲ್ಲಿಯ ಹಾಗೂ ಅರಭಾವಿ ಕ್ಷೇತ್ರದ ವಿವಿಧ ಗಾಮಗಳಿಗೆ ತೆರಳಿ ಅಲ್ಲಿನ ಬಡವರಿಗೆ ದಿನಸಿ ಕಿಟ್ ವಿತರಿಸುವುದಾಗಿ ಹೇಳಿ, ನಾಳೆಯಿಂದ ಜಿಲ್ಲೆ ಅನ್‍ಲಾಕ್ ಆಗುತ್ತಿದೆ ಎಂದು ಮೈಮರೆಯದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಜಾಗರೂಕರಾಗಿರಲು ಕೋರಿದರು.
ಹಿರಿಯ ಕಾಂಗ್ರೆಸ ಮುಖಂಡ ಎಸ್ ಆರ್ ಸೋನವಾಲ್ಕರ,ಅರಭಾವಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ ಇನಾಮದಾರ ಮಾತನಾಡಿದರು.

- Advertisement -

ಕಾಂಗ್ರೆಸ ಕಾರ್ಯಕರ್ತರಾದ ಬಸವರಾಜ ಪಾಟೀಲ, ಹಸನಸಾಬ ಮುಗುಟಖಾನ, ವಿರುಪಾಕ್ಷಿ ಮುಗುಳಖೋಡ, ಶರೀಫ್ ಪಟೇಲ, ಗಿರೀಶ ಕರಡಿ, ಮಲೀಕ ಕಳ್ಳಿಮನಿ, ರವಿ ಮೂಡಲಗಿ, ರಾಜು ಅತ್ತಾರ, ಚನ್ನಯ್ಯಾ ನಿರ್ವಾಣಿ, ಇರ್ಶಾದ ಪೈಲವಾನ, ರಾಬರ್ಟ ಮೂಡಲಗಿ, ಮದಾರಸಾಬ ಜಕಾತಿ, ಸಾಹೇಬ ಪೀರಜಾದೆ, ಮಲ್ಲಿಕಾರ್ಜುನ ಕಬ್ಬೂರ, ಮೈನೂದ್ದೀನ ಬಳಿಗಾರ, ರಮಜಾನ ಬಿಜಾಪೂರ, ರಾಹುಲ ಕಾಂಬಳೆ, ಕುಮಾರ ದೊಡಮನಿಕಾರ್ಯಕರ್ತರು ಇದ್ದರು.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group