ಸಿಂದಗಿ: ವಿಜಯಪುರ ಅವಳಿ ಜಿಲ್ಲೆಗಳು ಬರದ ನಾಡು ಎಂದು ಪ್ರಖ್ಯಾತಿ ಹೊಂದಿತ್ತು ಅದನ್ನು ಈ ಭಾಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧಿಕಾರಾವಧಿಯಲ್ಲಿ ಈ ಭಾಗದಲ್ಲಿ ನೀರಾವರಿಯಾಗಿ ರೈತರ ಬಾಳು ಹಸನಾಗಿಸಿ ಆ ಹಣೆಪಟ್ಟಿಯಿಂದ ಮುಕ್ತ ಮಾಡಿದ್ದಾರೆ ಅಲ್ಲದೆ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಯಾಗಿದೆ ಎಂದು ಈ ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿಪರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ ಹೇಳಿದರು.
ಕ್ಷೇತ್ರದ ಮೋರಟಗಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಜೀಯಾ ಅಂಗಡಿ ಅವರ ಪರ ಮತ ಯಾಚಿಸಿ ಮಾತನಾಡಿದರು.ಅಭ್ಯರ್ಥಿ ನಾಜೀಯಾ ಅಂಗಡಿ ಮಾತನಾಡಿ, ಹಿಂದೆ ನನ್ನ ಮಾವನವರಾದ ಆಯ್.ಬಿ.ಅಂಗಡಿ ವಕೀಲರು ಜೆಡಿಎಸ್ ಪಕ್ಷದಲ್ಲಿ ಪಕ್ಷ ನಿಷ್ಠೆಯಿಂದ ದುಡಿದಿದ್ದಾರೆ ಎಂದು ನನಗೆ ಟಿಕೇಟ ನೀಡಿದ್ದಾರೆ ಅವರ ಹೆಸರು ಮತ್ತು ಪಕ್ಷದ ಹೆಸರು ಅಳಿಸಿಹಾಕುವ ಕೆಲಸ ಎಂದು ಮಾಡಲಾರೆ, ಜೆಡಿಎಸ್ ಪಕ್ಷದ ತತ್ವಸಿದ್ದಾಂತದ ಮೇಲೆ ಈ ಕ್ಷೇತ್ರದ ಜನರಿಗೆ ಮತ ಕೇಳುವ ಹಕ್ಕಿದೆ ಅಭಿವೃದ್ಧಿಯ ಹರಿಕಾರರನ್ನು ಸ್ಮರಿಸುವ ಕಾರ್ಯ ನನ್ನಿಂದ ಆಗಬೇಕಾದರೆ ಅಗಲಿ ಹೋದ ಮಾವನವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಪಕ್ಷ ನಿಷ್ಠೆಗೆ ಪಾತ್ರರಾಗುತ್ತೇನೆ ಈ ತಾಲೂಕಿನ ಸೊಸೆಯಾದ ನನಗೆ ತಮ್ಮ ಮನೆ ಮಗಳೆಂದು ಆಶಿರ್ವದಿಸಿ ಎಂದು ಮತಯಾಚಿಸಿದರು.
ಈ ಸಂದರ್ಭದಲ್ಲಿ ಇಮಾಮಸಾಬ ನದಾಫ್, ಸಿದ್ದನಗೌಡ ಪಾಟೀಲ ಖಾನಾಪುರ, ಡಾ.ಮನಿಯಾರ ಯಂಕಂಚಿ ಸೇರಿದಂತೆ ಅನೇಕರಿದ್ದರು.