ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಶಾ ಕಾರ್ಯಕರ್ತರ ಮನವಿ; “ನಮ್ಮನ್ನೂ ಫ್ರಂಟ್ಲೈನ್ ಕಾರ್ಯಕರ್ತರೆಂದು ಗುರುತಿಸಿ”

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಸಿಂದಗಿ: ಎಲ್ಲಾ ಮುಂಚೂಣಿ ಸ್ಕೀಂ ವರ್ಕರಗಳಿಗೂ ಸೇವಾ ಖಾಯಮಾತಿ, ಕನಿಷ್ಠ ವೇತನ ಮತ್ತು ಪಿಂಚಣಿ ಹಾಗೂ ಕೊರೋನಾ ಸಮಯದಲ್ಲಿ ಸುರಕ್ಷಾ ಸಾಮಾಗ್ರಿಗಳು, ಕೋವಿಡ್-19 ಅಪಾಯಭತ್ಯೆ ಮತ್ತು ಮರಣ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತೆಯರು ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಮಹಿಳಾ ಮತ್ತು ಶಿಶು ಅಭಿವೃದ್ಧಿ ಸಚಿವರು, ಮಾನವ ಸಂಪನ್ಮೂಲ ಸಚಿವರುಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳು ಮಾತನಾಡಿ, ಕೋವಿಡ್ ಸೇವೆಗೆ ನೇಮಿಸಲ್ಪಟ್ಟಿರುವ ಎಲ್ಲಾ ಸ್ಕೀಂ ವರ್ಕರಗಳನ್ನು ಫ್ರಂಟ್ಲೈನ್ ನೌಕರರೆಂದು ಘೋಷಿಸಿ. ಎಲ್ಲರಿಗೂ ಈ ಕೂಡಲೇ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ಅಭಿಯಾನ ಕೈಗೊಳ್ಳಿ ಹಾಗೂ ಫ್ರಂಟ್ಲೈನ್ ನೌಕರರಿಗೆ ಮೊದಲಾದ್ಯತೆ ನೀಡಿ.ವ್ಯಾಕ್ಸಿನ್‍ಉತ್ಪಾದನೆ ಹೆಚ್ಚಿಸಿ ಹಾಗೂ ನಿಗದಿತ ಅವಧಿಯೊಳಗೆ ಸಾರ್ವತ್ರಿಕ ಮತ್ತು ಉಚಿತ ಲಸಿಕೀಕರಣವನ್ನು ಖಾತ್ರಿ ಪಡಿಸಲು ವ್ಯಾಕ್ಸಿನ್ ಹಂಚಿಕೆಯನ್ನು ಸರ್ಕಾರದ ಹಿಡಿತಕ್ಕೆ ಒಳಪಡಿಸಿ. ಎಲ್ಲಾ ಆರೋಗ್ಯ ಸಿಬ್ಬಂದಿ, ಫ್ರಂಟ್ಲೈನ್ ನೌಕರರು ಹಾಗೂ ಸ್ಕೀಂ ವರ್ಕಗಳು ಸೇರಿದಂತೆ, ಮಹಾಮಾರಿ ನಿರ್ವಹಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಸುರಕ್ಷಾ ಸಾಧನ, ಸಲಕರಣೆ ಇತ್ಯಾದಿಗನ್ನು ಖಾತ್ರಿ ಪಡಿಸಿ. ಎಲ್ಲಾ ಫ್ರಂಟ್ಲೈನ್ ನೌಕರರಿಗೂ ನಿಯತಕಾಲಿಕವಾಗಿ ಉಚಿತ ಕೋವಿಡ್-19 ಪರೀಕ್ಷೆ ನಡೆಸಿ. ಕೋವಿಡ್ ಸೋಂಕಿತ ಫ್ರಂಟ್ಲೈನ್ ನೌಕರರಿಗೆ ಆಸ್ಪತ್ರೆ ಸೇವೆಯಲ್ಲಿ ಮೊದಲಾದ್ಯತೆ ನೀಡಿ. 6% ಜಿಡಿಪಿಯನ್ನು ಆರೋಗ್ಯ ಕ್ಷೇತ್ರಕ್ಕೆ ಒದಗಿಸಿ. ಸಮರ್ಪಕ ಪ್ರಮಾಣದ ಬೇಡಿಕೆಗಳು ಆಮ್ಲಜನಕ ಮತ್ತಿತರ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಆರೋಗ್ಯ ಕ್ಷೇತ್ರ ಮತ್ತು ಆರೋಗ್ಯ ಸಂಪನ್ಮೂಲಗಳನ್ನು ಬಲಪಡಿಸಿ.ಸಮರ್ಪಕ ಪ್ರಮಾಣದ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಖಾತ್ರಿಪಡಿಸಿ. ಸೇವಾವಧಿಯಲ್ಲಿ ಮೃತಪಟ್ಟಎಲ್ಲಾ ಫ್ರಂಟ್ಲೈನ್ ನೌಕರರಿಗೆ 50 ಲಕ್ಷ ರೂಪಾಯಿಗಳ ವಿಮಾ ಸುರಕ್ಷೆ ಒದಗಿಸಬೇಕು. ಕೋವಿಡ್ ಸೋಂಕಿತ ಫ್ರಂಟ್ಲೈನ್ ನೌಕರರು ಹಾಗೂ ಅವರ ಕುಟುಂಬಸ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಹೆಚ್ಚುವರಿಯಾಗಿ, ಕೋವಿಡ್-19 ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಗುತ್ತಿಗೆ ನೌಕರರು ಮತ್ತು ಸ್ಕೀಂ ವರ್ಕರ್ಗಳಿಗೆ ಮಾಸಿಕ 10 ಸಾವಿರಗಳ ಕೋವಿಡ್ ಅವಘಢ ಭತ್ಯೆ ಒದಗಿಸಿ. ಕಾರ್ಮಿಕ-ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆದು ಸ್ಕೀಂ ವರ್ಕರ್ಗಳನ್ನು ಕಾರ್ಮಿಕರೆಂದು ಪರಿಗಣಿಸಿ. ಎಲ್ಲಾ ಸ್ಕೀಂ ವರ್ಕರ್ಗಳಿಗೂ ಇ-ಶ್ರಮ್ ಪೋರ್ಟಲನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಒದಗಿಸಿ. ಕೇಂದ್ರೀಯ ಪ್ರಾಯೋಜಿತ ಯೋಜನೆಗಳಾದ ಐಸಿಡಿಎಸ್, ಎನ್ ಎಚ್ ಎಂ ಮತ್ತು ಎಂಡಿಎಂಎಸ್ ಯೋಜನೆಗಳನ್ನು ಖಾಯಂಗೊಳಿಸಿ ಹಾಗೂ ಬಜೆಟನಲ್ಲಿ ಸಮರ್ಪಕ ನಿಧಿಯನ್ನು ಒದಗಿಸಿ. ಐಸಿಡಿಎಸ್ ಮತ್ತು ಎಂಡಿಎಂಎಸ್ ಫಲಾನುಭವಿಗಳಿಗೆ ಈ ಕೂಡಲೇ ಉತ್ತಮ ಗುಣಮಟ್ಟದ ಹೆಚ್ಚುವರಿ ಪಡಿತರ ವಿತರಿಸುವದಲ್ಲದೆ ವಲಸಿಗರನ್ನೂ ಈ ಯೋಜನೆಗೆ ಸೇರಿಸಿಕೊಳ್ಳಬೇಕು. ಸ್ಕೀಂ ವರ್ಕರ್ಗಳನ್ನು ಕಾರ್ಮಿಕರೆಂದು ಪರಿಗಣಿಸಿ, ಅವರ ಖಾಯಮಾತಿಗಾಗಿ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮಾವೇಶ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ. ತಿಂಗಳಿಗೆ ಕನಿಷ್ಟ ರೂ. 21 ಸಾವಿರ ವೇತನ ಹಾಗೂ ರೂ.10 ಸಾವಿರ ಪಿಂಚಣಿ ಪಾವತಿಸಿ. ಎಲ್ಲಾ ಸ್ಕೀಂ ವರ್ಕರ್ಗಳಿಗೂ ಇಎಸ್‍ಐ ಮತ್ತು ಪಿಎಫ್ ಒದಗಿಸಿ. ಈಗಿರುವ ವಿಮಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾಯೋಜನೆ ಪ್ರಧಾನಮಂತ್ರಿ ಸುರಕ್ಷಾ ವಿಮಾಯೋಜನೆ, ಅಂಗನವಾಡಿ ನೌಕರರ ವಿಮಾ ಯೋಜನೆಯನ್ನು ಸರಿಯಾಗಿ ಜಾರಿಗೆ ತಂದು, ಎಲ್ಲಾ ಸ್ಕೀಂ ವರ್ಕರ್ಗಳಿಗೂ ಅದರ ಪ್ರಯೋಜನ ಸಿಗುವಂತಾಗಬೇಕು. ಬಿಸಿಯೂಟ ಕಾರ್ಮಿಕರಿಗೆ ಬೇಸಿಗೆ ರಜೆಯೂ ಸೇರಿದಂತೆ ಶಾಲೆ ಮುಚ್ಚಿದ ಅವಧಿಯಲ್ಲೂ ಸಹ ಕನಿಷ್ಠ ವೇತನ ಪಾವತಿಸಬೇಕು. ಅಡಿಗೆ ಗುತ್ತಿಗೆ ಹಾಗೂ ಕೇಂದ್ರೀಕೃತ ಅಡುಗೆ ವ್ಯವಸ್ಥೆಗೆ ಅವಕಾಶಕೊಡಬಾರದು ಎನ್ನುವ ವಿವಿಧ ಬೇಡಿಕೆಗಳು ಸೇರಿದಂತೆ ಸಮಸ್ಯೆಗಳನ್ನು ಈ ಕೂಡಲೇ ಇತ್ಯರ್ಥಗೊಳಿಸಬೇಕೆಂದು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

- Advertisement -
- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!