Ashok Managooli: ಮನಗೂಳಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಣೆ

Must Read

ಸಿಂದಗಿ: ವೈದಕೀಯ ವೃತ್ತಿ ಇದೊಂದು ಸೇವಾ ವೃತ್ತಿ ಅಲ್ಲದೆ ಸಾಮಾಜಿಕ ಸೇವಾವೃತ್ತಿಯಾಗಿದ್ದು ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ಹಾಗೂ ಫಲಕಾರಿಯಾದ ಆತ್ಮಸ್ಥೈರ್ಯ, ಧೈರ್ಯ ತುಂಬುವ  ಡಾಕ್ಟರ ವೃತ್ತಿಯಾಗಿದೆ. ವೈದ್ಯರ ದಿನ ಕಾರ್ಯಕ್ರಮ ಒಂದೇ ವರ್ಷಕ್ಕೆ ಸೀಮಿತವಾಗದೇ ಪ್ರತಿ ವರ್ಷ ಇಂಥ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯಕ್ತ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಡಾ. ಬಿ.ಸಿ.ರಾಯ್ ಅವರ ನೆನಪಿಗಾಗಿ ಪ್ರತಿವರ್ಷ ಜುಲೈ 1 ರಂದು ಆಚರಿಸಲಾಗುತ್ತಿರುವ ರಾಷ್ಟ್ರೀಯ ವೈದ್ಯರ ದಿನದಂದು ಇಡೀ ಮತ ಕ್ಷೇತ್ರದ ಜನತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವ ಮನಗೂಳಿ ಆಸ್ಪತ್ರೆಯ ಎಲ್ಲ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿಯವರು ಕೇಕ್ ಕಟ್ ಮಾಡುವ ಮೂಲಕ ಶಿಬಿರ ಉದ್ಘಾಟಿಸಿ, ಡಾ. ಶಾಂತವೀರ ಮನಗೂಳಿ, ಡಾ ಸಂಧ್ಯಾ ಮನಗೂಳಿ ಡಾಕ್ಟರ ದಂಪತಿಗಳಿಗೆ ಕೇಕ್ ತಿನ್ನಿಸಿ ಶುಭ ಕೋರಿದರು. 

ಪಟ್ಟಣದ ಟಿಎಸ್‍ಪಿಎಂ ಆಯುರ್ವೇದಿಕ ಮೆಡಿಕಲ್ ಕಾಲೇಜು ವೈದ್ಯರು ಹಾಗೂ ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆಯ ವೈದ್ಯರು ಇದ್ದರು.

Latest News

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಗಾಗಿ ಬೃಹತ್ ಪ್ರತಿಭಟನೆ – ಡಾ.ಅಡಿವೆಪ್ಪ ಇಟಗಿ 

ಬೆಳಗಾವಿ :ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 11,000 ಅತಿಥಿ ಉಪನ್ಯಾಸಕರು ತಮ್ಮ ಸೇವೆ ಖಾಯಂಗೊಳಿಸಲು ಆಗ್ರಹಿಸಿ ಕಳೆದ 15...

More Articles Like This

error: Content is protected !!
Join WhatsApp Group