ಸಿಂದಗಿ ಕ್ಷೇತ್ರದಲ್ಲಿ ಅಶೋಕ ಮನಗೂಳಿ ಪ್ರಚಾರ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಸಿಂದಗಿ: ಕ್ಷೇತ್ರದ ಬೋರಗಿ, ಗುಬ್ಬೇವಾಡ, ಕಣ್ಣಗುಡಿಹಾಳ, ಹಡಗಿನಾಳ, ಪುರದಾಳ, ಡವಳಾರ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಯವರ ಪರವಾಗಿ ಮತ ಯಾಚನೆ ಮಾಡಲಾಯಿತು.

ನಂತರ ಬೋರಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮನಗೂಳಿ, ಇವತ್ತು ಕಾಂಗ್ರೆಸ್ ಸರ್ಕಾರ ಇದ್ದರೆ ಬಡವರು ನಿರ್ಗತಿಕರು ಉಪವಾಸ ಬೀಳುವ ಪರಿಸ್ಥಿತಿ ಬರುತ್ತಿರಲಿಲ್ಲ. ದಿ.ಎಂ ಸಿ ಮನಗೂಳಿಯವರು ಗುತ್ತಿಬಸವಣ್ಣ ಯೋಜನೆ ಹಾಗೂ ಪುರದಾಳ ಕೆರೆಯನ್ನು ಮಾಡದಿದ್ದರೆ ಇಲ್ಲಿ ರೈತರು ಬೇರೆ ರಾಜ್ಯಗಳಿಗೆ ಗುಳೆ ಹೋಗುವ ಪರಿಸ್ಥಿತಿ ಬರದ ಹಾಗೆ ನೋಡಿಕೊಂಡ ನೀರಾವರಿ ಭಗೀರಥ ಇವರ ಸುಪುತ್ರ  ಅಶೋಕ ಮನಗೂಳಿಯವರಿಗೆ ಮತ ನೀಡಬೇಕೆಂದು ವಿನಂತಿಸಿದರು.

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಬೋರಗಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಾರಂಭೋತ್ಸವಕ್ಕೆ ಬರಬೇಕಾಗಿತ್ತು ಆದರೆ ಬರಲಿಕ್ಕೆ ಆಗಲಿಲ್ಲ. ಅದಕ್ಕೆ ಕ್ಷಮೆ ಇರಲಿ ಎಂದ ಅವರು ಕರೋನ ಮಹಾಮಾರಿಯಿಂದ ಮನೆ ಯಜಮಾನ ತೀರಿಕೊಂಡ  ಬಳಿಕ ಒಬ್ಬ ಹೆಣ್ಣು ಮಗಳು ಜೀವನ ಕಷ್ಟವಾದಾಗ ಮಗಳು ಕೂಡಾ ಸರ್ಕಾರದ ಸೌಲಭ್ಯ ಸಿಗದಿದ್ದಾಗ ಆಕ್ಸಿಜನ್ ಮತ್ತು ಬೆಡ್‍ಗಳು ಸಿಗದೆ ತಮ್ಮ ಜೀವನ ಕಳೆದುಕೊಂಡಿದ್ದು ದುರದೃಷ್ಟಕರ ಸಂಗತಿಯಾಗಿದೆ ಎಂದರು

- Advertisement -

ಮೊನ್ನೆ ನಡೆದ ವಿಧಾನಸಭೆ ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಕರೋನದಿಂದ ಮೃತಪಟ್ಟವರಿಗೆ ಒಂದು ಲಕ್ಷ ಪರಿಹಾರ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು ಮರುದಿನವೇ ಕೇಂದ್ರ ಸರ್ಕಾರ ಒಂದು ಬೇಡ ಐವತ್ತು ಸಾವಿರ ಘೋಷಣೆ ಮಾಡಿತ್ತು ಆದರೂ ಇನ್ನೂವರೆಗೂ ಒಂದು ಬಿಡಗಾಸು ಬಂದಿಲ್ಲ. ಹಿಂದಿನ ಸಿದ್ದರಾಮಯ್ಯನವರ ಸರ್ಕಾರ ಸಹಕಾರಿ ಸಂಘಗಳಿಗೆ ಸೂನ್ನೆ ಬಡ್ಡಿದರದಲ್ಲಿ ರೈತರಿಗೆ ಸಾಲ ಕೊಟ್ಟಿದೆ ಮತ್ತು ರೈತರ ಸಾಲವನ್ನು ಮನ್ನಾಮಾಡಿದ್ದು ಇದ್ದರೆ ಅದು ಸಿದ್ದರಾಮಯ್ಯನವರ ಸರ್ಕಾರ. 2013ರಂದು ಸಿದ್ದರಾಮಯ್ಯನವರ ಸರ್ಕಾರ ಒಂದು ಸಾವಿರ ಕುಟುಂಬಗಳಿಗೆ ಪುಕ್ಕಟೆ ಅಕ್ಕಿ ನೀಡಿದ್ದು ಮತ್ತು ಡಾ.ಅಂಬೇಡ್ಕರ್ ನಿಗಮದಿಂದ ಪಡೆದ ದಲಿತರ ಸಾಲ ಮನ್ನಾ ಮಾಡಿದರು ಹಾಗು ರೈತರಿನ ಹಾಲಿನ ಪ್ರೋತ್ಸಾಹ ಧನವನ್ನು ಎರಡು ರೂ ದಿಂದ ಐದು ರೂ ಏರಿಸಿದ್ದರು ಮತ್ತು ರೈತರು ಬೆಳೆದ ಮೆಣಿಸಿಕಾಯಿ, ಟೋಮೆಟೋ ಬೆಲೆ ಸಿಗದೆ ರೈತರು ಕಂಗಾಲಾಗಿದ್ದು ಬಿಜೆಪಿಯೇ ಕಾರಣ. ಬಿಜೆಪಿಯವರು ನಿಮ್ಮ ಊರಿಗೆ ಬಂದು ಹಣದ ಆಮಿಷ ವೊಡ್ಡುತ್ತಾರೆ ಯಾರು ಅಂತಹ ಆಮಿಷಗಳಿಗೆ ಒಳಗಾಗದೇ ನೀವು ಮಸ್ಕಿ ಮತ ಕ್ಷೇತ್ರದ ಜನತೆ ಯಾವ ರೀತಿಯಾಗಿ ಬಿಜೆಪಿಯವರಿಗೆ ತಕ್ಕ ಪಾಠವನ್ನು ಕಲಿಸಿದ್ದರು ಅದೇ ಸಿಂದಗಿ ಮತಕ್ಷೇತ್ರದ ನೀವು ಎಲ್ಲರೂ ಒಗ್ಗಟಿನಿಂದ ಅಶೋಕ ಮನಗೂಳಿಯವರ ಕೈ ಬಲ ಪಡಿಸಬೇಕು ಎಂದರು

ಈ ಸಂದರ್ಭದಲ್ಲಿ  ಸುಭಾಸ ಛಾಯಾಗೋಳ, ನಾನಗೌಡ ಡಂಬಳ, ವೀರೇಶ ಕೋಟಾರಗಸ್ತಿ, ಶಿವಯೋಗಿ ಬಸ್ತಿಹಾಳ, ಶಂಕ್ರೆಪ್ಪ ಸಾವಳಸಂಗ, ಶಿವರಾಯ ಚಾವರ, ಬಸವಲಿಂಗಪ್ಪ ಜಾಲವಾದಿ, ಸದ್ದಾಮ್ ಆಲಗೂರ, ಭೀಮ್ಮಣ್ಣ ಹೂಗಾರ, ಚಿಂತಾಮಣಿ ಬಡಿಗೇರ, ವಕ್ತಾರ ಮಲ್ಲಿಕಾರ್ಜುನ ಸಾವಳಸಂಗ, ಅಶೋಕ ಬಿಜಾಪೂರ ಸೇರಿದಂತೆ ಹಲವರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!