ಬೀದರ್ – ಜಿಲ್ಲೆಯ ಉಸ್ತುವಾರಿ ಸಚಿವರು ಸರಕಾರಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಕ.ರ.ವೇ ಜಿಲ್ಲಾ ಅಧ್ಯಕ್ಷ ಸೋಮನಾಥ ಮುಧೋಳಕರ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಚಿವರ ವಿರುದ್ಧ ಜಿಲ್ಲಾ ಅಧಿಕಾರಿಗಳಿಗೆ ಮನವಿ ನೀಡಲು ಹೋದಾಗ ಸಚಿವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದೂ ಸೋಮನಾಥ ಅವರು ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮೇಲೆ ಹಲ್ಲೆ ಆಗುವ ಮುಂಚೆ ನಾನು ಜಿಲ್ಲಾ ವರಿಷ್ಠ ಪೋಲಿಸ್ ಅಧಿಕಾರಿಯವರಿಗೆ ಎರಡು ಸಲ ಫೋನ್ ಮಾಡಿದರೂ ಅವರು ನನ್ನ ಕರೆಗೆ ಸ್ಪಂದಿಸಿಲ್ಲ ಎಂದು ದೂರಿದರು.
ಇನ್ನೊಂದು ಕಡೆ ಭಾಲ್ಕಿ ಡಿವೈಎಸ್ಪಿ ಅವರ ಮೇಲೆ ಕೂಡ ಗಂಭೀರ ಆರೋಪ ಹೊರಿಸಿದ್ದು, ಡಿವೈಎಸಪಿ ಕೂಡ ನನಗೆ ಪ್ರವಾಸಿ ಮಂದಿರದಲ್ಲಿ ಕೂಡಿ ಹಾಕಿ ಸಚಿವರ ವಿರುದ್ಧ ಕೊಟ್ಟ ಮನವಿ ಹಿಂದೆ ತೆಗೆದುಕೊ ಎಂದು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಬೀದರ್ ಕ.ರ.ವೇ ಜಿಲ್ಲಾ ಅಧ್ಯಕ್ಷ ಸೋಮನಾಥ ಹೇಳಿದ್ದಾರೆ.
ಈ ಎಲ್ಲಾ ಘಟನೆ ನೋಡಿದರೆ ಜಿಲ್ಲಾ ಪೋಲಿಸ ಇಲಾಖೆ ಸಚಿವರ ಕೈ ಗೊಂಬೆ ಆಗಿ ಕೆಲಸ ಮಾಡುತ್ತಿರಬಹುದು ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.. ಈ ಘಟನೆ ಕೂಲಂಕುಷವಾಗಿ ಪರಿಶೀಲಿಸಿ ಕಲಬುರಗಿ ಪೊಲೀಸ್ ಆಯುಕ್ತರು ಮಧ್ಯೆ ಪ್ರವೇಶ ಮಾಡಿ ಘಟನೆಯ ಸತ್ಯಾಸತ್ಯತೆ ಹೊರತರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಯಾವ ರೀತಿ ತನಿಖೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ